ಆಳಂದ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಬಿ ಕಾಯಿದೆಯಿಂದ ದೇಶದ ಯಾವ ನಾಗರಿಕರಿಗೂ ತೊಂದರೆಯಾಗುವುದಿಲ್ಲ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ತಾಲೂಕಿನ ಖಜೂರಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಗುದ್ದಲಿ ಪೂಜೆ ನೇರವರಿಸಿ ಮಾತನಾಡಿದ ಅವರು, ಈ ಕಾಯಿದೆ ದೇಶದಲ್ಲಿ ಅಕ್ರಮವಾಗಿ ನುಸುಳುವ ನುಸುಳು ಕೋರರನ್ನು ತಡೆಗಟ್ಟುವ ಸಲುವಾಗಿ ಜಾರಿಗೆ ತರಲಾಗಿದೆ. ಭಾರತಿಯರು ಇದಕ್ಕೆ ಹೆದರಬೇಕಾಗಿಲ್ಲ ಎಂದರು.
ಭಾರತ ಜಾಗತಿಕವಾಗಿ ದಿನೇ ದಿನೇ ಬಲಿಷ್ಟವಾಗುತ್ತಿದೆ. ನಮ್ಮ ದೇಶದ ಭದ್ರತೆಯ ದೃಷ್ಟಿಯಿಂದ ಈ ಕಾನೂನು ಜಾರಿಗೊಳಿಸುವುದು ಅಗತ್ಯವಾಗಿತ್ತು ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ ಶಾಹ ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಗ್ರಾಮದ ಅಪ್ಪುಶಾ ಕಲ್ಮನೆ ಮನೆಯಿಂದ ಭಾಗವಾನ ಮನೆಯವರೆಗಿನ ೧೬ ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಮತ್ತು ಉಪ್ಪಾರ ಓಣಿಯಿಂದ ಸಿದ್ದೇಶ್ವರ ದೇವಸ್ಥಾನದವರೆಗಿನ ೧೫ ಲಕ್ಷ ರೂ.ಗಳ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ, ತಾ.ಪಂ ಉಪಾಧ್ಯಕ್ಷ ಗುರುನಾಥ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ವಿಎಸ್‌ಎಸ್‌ಎನ್ ಅಧ್ಯಕ್ಷ ಉದಯಕುಮಾರ ಕಂದಗೂಳೆ, ಹಿರಿಯ ಮುಖಂಡ ರಾಜಶೇಖರ ಮಲಶೆಟ್ಟಿ, ಅಧಿಕಾರಿಗಳಾದ ಈರಣ್ಣ, ಕರಬಸಪ್ಪ, ಅರುಣಕುಮಾರ, ಗ್ರಾಮಸ್ಥರಾದ ಶಿವಪ್ಪ ಘಂಟೆ, ಶಿವಪ್ಪ ಢಗೆ, ಗಾಂಧಿ ಘಂಟೆ, ಗುರು ಸಮುದ್ರಳೆ, ಶಿವಬಸಪ್ಪ ಶಿವಶೆಟ್ಟಿ, ಶಿವುಕುಮಾರ ಹಳ್ಳೆ, ಕುಮಾರ ಬಂಡೆ, ಗಾಂಧಿ ಹಳ್ಳೆ ಸೇರಿದಂತೆ ಇತರರು ಇದ್ದರು.