ನಾರಾಯಣಪುರ ಜಲಾಶಯದ ನೀರು ಬಳ್ಳಾರಿಗೆ ಹರಿಸದಂತೆ ಅರೆಬೆತ್ತಲೆ ಹೋರಾಟ

0
214

ಸುರಪುರ: ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದಿಂದ ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಶಾಸಕ ನರಸಿಂಹ ನಾಯಕ(ರಾಜುಗೌಡ)ಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಇಂದು ನಮ್ಮ ಸುರಪುರ ತಾಲ್ಲೂಕಿನಲ್ಲಿ ಕುಡಿಯುವ ನೀರಿಲ್ಲದೆ ಜನತೆ ತತ್ತರಿಸಿದ್ದಾರೆ. ಅಲ್ಲದೆ ಕೃಷ್ಣಾ ಮೇಲ್ದಂಡೆ ಕಾಲುವೆಗಳಿಗೆ ಸರಿಯಾಗಿ ನೀರು ಹರಿಸುತ್ತಿಲ್ಲ, ಇದರಿಂದ ಜನ ಜಾನುವರುಗಳಿಗೆ ಕುಡಿಯಲು ಮತ್ತು ಅನೇಕ ಗ್ರಾಮಗಳು ಈನ ಕಾಲುವೆಯ ನೀರನ್ನೆ ಆಶ್ರಯಿಸಿದ್ದು, ಅಲ್ಲಿಯ ಜನರಿಗೆ ದಿನ ಬಳಕೆಗು ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Contact Your\'s Advertisement; 9902492681

ಆದರೆ ಇದರ ಪರಿವೆ ಇಲ್ಲದಂತೆ ಸರಕಾರ ಬಸವಸಾಗರ ಆಣೆಕಟ್ಟಿನ ನೀರನ್ನು ಬಳ್ಳಾರಿಗೆ ಹರಿಸಲು ಮುಂದಾಗಿರೋದು ಬೇಸರದ ಸಂಗತಿಯಾಗಿದೆ. ಇದರಲ್ಲಿ ಸರಕಾರ ಮತ್ತು ಬಳ್ಳಾರಿಯ ಪ್ರಭಾವಿ ರಾಜಕಾರಣಿಗಳು ನೀರು ಪಡೆದು ಇಲ್ಲಿಯ ಜನರಿಗೆ ನೀರು ಇಲ್ಲದೆಂತೆ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೆ ಈ ಆದೇಶ ಹಿಂಪಡೆದು ಸರಕಾರ ಯಾವುದೆ ಕಾರಣಕ್ಕು ಬಳ್ಳಾರಿಯ ಶಾಕೋತ್ಪನ್ನ ಕೇಂದ್ರ ಮತ್ತು ಕುಡತಿನಿ ವರೆಗೆ ನೀರು ಹರಿಸಲು ಮುಂದಾಗಿರುವದನ್ನು ಕೈ ಬಿಡಬೇಕು ಇಲ್ಲವಾದಲ್ಲಿ ಈ ಭಾಗದ ಎಲ್ಲಾ ಸಂಘಟನೆಗಳು ಮತ್ತು ರೈತರು ಉಗ್ರ ಹೋರಾಟ ನಡೆಸಬೇಕಾಗುವುದು ಎಂದು ಆಕ್ರೊಶ ವ್ಯಕ್ತಪಡಿಸಿದರು.

ಹೋರಾಟದ ಸ್ಥಳಕ್ಕೆ ಸ್ಥಳಿಯ ಶಾಸಕ ನರಸಿಂಹ ನಾಯಕ(ರಾಜುಗೌಡ) ಭೇಟಿ ನೀಡಿ ಹೋರಾಟಗಾರರು ನೀರಾವರಿ ಸಚಿವರಿಗೆ ಬರೆದ ಮನವಿಯನ್ನು ಸ್ವೀಕರಿಸಿ ಮಾತನಾಡಿ,ಈ ಹೋರಾಟಕ್ಕೆ ನನ್ನ ಬೆಂಬಲವಿದೆ,ನಾನು ಕೂಡ ವಿಧಾನ ಸೌಧದಲ್ಲಿ ಈ ವಿಷಯದ ಬಗ್ಗೆ ಧ್ವನಿ ಎತ್ತುವೆ.ನಮ್ಮಲ್ಲಿಯೆ ಕುಡಿಯುವ ನೀರಿನ ಸಮಸ್ಯೆ ಇರುವಾಗ ಬೇರೆ ಕಡೆಗೆ ನೀರು ಕೊಡಲು ಸಾಧ್ಯವಿಲ್ಲ,ಇದರ ಬಗ್ಗೆ ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ಕೃಷ್ಣಾ ದಿವಾಕರ,ಕೇಶಣ್ಣ ದೊರೆ,ಬಸವರಾಜ ಕವಡಿಮಟ್ಟಿ,ದೇವಪ್ಪ ದೇವರಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here