ಕರ್ತವ್ಯದಲ್ಲಿದ ಮುಖ್ಯ ಪೇದೆ ಹೃದಯಾಘಾತದಿಂದ ಸಾವು

0
205

ಕಲಬುರಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ತೀವ್ರ ಹೃದಯಾಘಾತದಿಂದ ಮುಖ ಪೇದೆ ಮೃತ ಪಟ್ಟಿರುವ ಘಟನೆ ಸಂಭವಿಸಿದೆ.

ಚಂದ್ರಕಾಂತ ಅಂಕಲಗಿ (54) ಮೃತಮುಖ್ಯ ಪೇದೆ. ಅಂಕಲಗಾ ಗ್ರಾಮದ ನಿವಾಸಿ. ಕಳೆದ 26 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ತೀವ್ರ ಹೃದಯಾಘಾತ ಕಾಣಿಸಿಕೊಂಡ ಪರಿಣಾಮ ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 2 ಗಂಡು, 1 ಹೆಣ್ಣು ಮಕ್ಕಳಿದ್ದಾರೆ.

Contact Your\'s Advertisement; 9902492681

ಮೃತರ ಚಂದ್ರಕಾಂತ ಅವರ ಅಂತ್ಯಕ್ರಿಯೆ ಸ್ವಗ್ರಾಮ ಅಂಕಲಗಾ ಗ್ರಾಮದಲ್ಲಿ 5 ಗಂಟೆಗೆ ನೆರವೇರಲಿದೆ ಎಂದು ತಿಳಿದುಬಂದಿದೆ.

ಮುಖ ಪೇದೆ ಸಾವಿಗೆ ಪೊಲೀಸ್ ಇಲಾಖೆಯಿಂದ ಸಂತಾಪ

ಡಿ.ವೈ.ಎಸ್ಪಿ ಟಿ.ಎಸ್. ಸುಲ್ಫಿ,  ಸಿ.ಪಿ.ಐ ಮಹಾಂತೇಶ ಪಾಟೀಲ್, ಪಿ.ಎಸ್.ಐ ಪ್ರಭಾಕರ ಪಾಟೀಲ್, ರೇವೂರ ಪಿ.ಎಸ್.ಐ ಮಲ್ಲಣ್ಣ ಯಲಗೋಡ, ಗಾಣಗಾಪೂರ ಪಿ.ಎಸ್.ಐ ಕೆ. ನಾಗರತ್ನ, ಎ.ಎಸ್.ಐ ರಾಜಶೇಖರ ಜವಳಿ, ಗುಪ್ತವಾರ್ತೆ ಇಲಾಖೆ ಮಾಹಿತಿ ಸಿಬ್ಬಂದಿ ಅರವಿಂದ ಆಲೇಗಾಂವ,  ಸೋಂದೆಸಾಬ ದೇವಣಗಾಂವ, ಚಂದ್ರಶಾ ದೇಗಿನಾಳ, ಚಿದಾನಂದ ಬಿರಾದಾರ, ಭೀಮಾಶಂಕರ ಜಮಾದಾರ, ಯಲ್ಲಪ್ಪ ಉಡಗಿ, ರಜಿಯಾ ಬೇಗಂ, ಭಾರತಿ ಬಡಿಗೇರ ಸೇರಿದಂತೆ ಸಿಬ್ಬಂದಿ ವರ್ಗ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here