ಕಲಬುರಗಿ: ಉತ್ತರ ಮಕ್ಷೇತ್ರದಲ್ಲಿ ಬರುವ ವಾರ್ಡ್ ನಂ.18 ರ ಆಳಂದ ಕಾಲೋನಿ, ವಿಜಯನಗರ ಕಾಲೋನಿಯಲ್ಲಿ ಪೌರತ್ವ ತಿದ್ದು ಪಡೆ ಕಾಯ್ದೆ ೨೦೧೯ ರ ಜನ ಜಾಗೃತಿ ಅಭಿಯಾನ ಪ್ರಯುಕ್ತ ಲೋಕ ಸಭಾ ಸದಸ್ಯ ಉಮೇಶ ಜಾಧವ ಮನೆ ಮನೆಗೆ ತೆರಳಿ ಕರ ಪತ್ರ ಹಂಚಿದರು.
ವಿಧಾನ ಪರಿಷತ್ ಸದಸ್ಯರೂ ಆಗಿರುವ ಬಿಜೆಪಿ ನಗರಾಧ್ಯಕ್ಷ ಬಿ.ಜಿ ಪಾಟೀಲ್, ಮಾಜಿ ಶಾಸಕ ದೋಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಯುವ ಮುಖಂಡ ಚಂದು ಪಾಟೀಲ್, ಅರವಿಂದ ನವಲಿ, ಅಶೋಕ ಮಾನಕರ, ಉಮೇಶ ಪಾಟೀಲ್, ಚನ್ನವೀರ ಲಿಂಗನವಾಡಿ, ಸಿದ್ದಾಜೀ ಪಾಟೀಲ್, ಗಂಗಾಧರ ಬಿಲಗುಂದಿ, ವರದಾ ಶಂಕರ್, ಜಯಸಿಂಗ್ ಠಾಕೂರ್, ವಿಜಯಕುಮಾರ ಹುಲಿ, ವಿಜ್ಜು ಮುನ್ನಳ್ಳಿ, ಶಾಂತು ಖೇಮಜಿ, ಶಾಂತು ಬಿರಾದಾರ, ಸತೋಂಷ ರಾಮಪೂರೆ, ರಾಚಪ್ಪ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.