ನವದೆಹಲಿ: ಮತ್ತೊಮ್ಮೆ ಜೆಎನ್ ಯೂ ಚರ್ಚೆಯ ಕೇಂದ್ರ ಬಿಂದುವಾಗಿದೆ. ಇದ್ದಕ್ಕಿದ್ದ ಹಾಗೆ ಜೆಎನ್ ಯೂ ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜವಹರ್ ಲಾಲ್ ನೆಹರು ಯೂನಿವರ್ಸಿಟಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಯೆಷಾ ಘೋಷ್ ಗೆ ದುಷ್ಕರ್ಮಿಗಳು ತೀವ್ರ ಹಲ್ಲೆ ನಡೆಸಿದ್ದಾರೆ. ರಾಷ್ಟ್ರೀಯ ಸುದ್ದಿ ಸಂಸ್ಥೆಗಳಿಗೆ ಜೆಎನ್ ಯೂ ನೀಡಿರುವ ಹೇಳಿಕೆ ಪ್ರಕಾರ ” ಕಾಲೇಜಿನ ಸಬರಮತಿ ಹಾಗೂ ಇತರ ಹಾಸ್ಟೆಲ್ ಗೆ ನುಗ್ಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದೀಗ ಮತ್ತೊಂದು ಚರ್ಚೆಗೆ ನಾಂದಿ ಹಾಡಿದೆ.
ಇತ್ತೀಚೆಗೆ ಪೌರತ್ವ ಕಾಯ್ದೆ ವಿರೋಧಿಸಿ ಜಾಮೀಯ ವಿಶ್ವ ವಿದ್ಯಾಲಯ ನಡೆಸಿದ ಹೋರಾಟ ದೇಶವ್ಯಾಪಿ ಸದ್ದು ಮಾಡಿತ್ತು. ಅದಾಗಿ ಜಾಮೀಯ ಸಾಲಿಗೆ ಹಲವು ಕ್ಯಾಂಪಸ್ ಗಳು ಸೇರಿಕೊಂಡಿದ್ದವು. ಈ ರೀತಿಯ ಹೋರಾಟಗಳಲ್ಲಿ ಜೇನ್ ಯೂ ಎಂದಿಗೂ ಮುಂಚೂಣಿಯಲ್ಲಿರುತ್ತದೆ. ಇದೇ ಕಾರಣಕ್ಕೆ ಹಲವು ಬಾರಿ ಜೆಎನ್ ಯೂ ಸುದ್ದಿಯ ಕೇಂದ್ರ ಬಿಂದುವಾಗಿತ್ತು. ಹೀಗಾಗಿ ಎಬಿವಿಪಿ ಗೂಂಡಾಗಳು ಅಮಾನವೀಯವಾಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಶುಲ್ಕ ಹೆಚ್ಚಳದ ವಿರುದ್ಧ ಜೆಎನ್ ಯೂಎಸ್ ಯೂ ಶಾಂತಿಯುತ ಪ್ರತಿಭಟನೆ ನಡೆಸಿತ್ತು. ಇದನ್ನ ಸಹಿಸಿಕೊಳ್ಳಲಾಗದ ಹೇಡಿ ಎಬಿವಿಪಿ ಕಾರ್ಯಕರ್ತರು ವಿದ್ಯಾರ್ಥಿಗಳ ಮೇಲೆ ನಡೆಸಿದ್ದಾರೆ ಅಂತ ಹೇಳಲಾಗ್ತಿದೆ. ಮುಖ್ಯವಾಗಿ ದೊಣ್ಣೆ, ಕಲ್ಲು ಹಾಗೂ ಆಸಿಡ್ ಆಕ್ರಮಣಕ್ಕೆ ಬಳಸಿಕೊಳ್ಳಲಾಗಿದೆ ಅಂತ ಜೆಎನ್ ಯೂ ವಿಧ್ಯಾರ್ಥಿಗಳು ಆರೋಪಿಸಿದ್ದಾರೆ.
ಇದು ಈಗ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು #ShameonuABVP ಎಂಬ ಹ್ಯಾಶ್ ಟ್ಯಾಗನ್ನ ಮುನ್ನೆಲೆಗೆ ತಂದಿದ್ದಾರೆ. ಈ ಕುರಿತ ಕೆಲವು ಸ್ಕ್ರೀನ್ ಶಾರ್ಟ್ ಗಳು ವೈರಲ್ ಆಗಿದೆ. ದಾಳಿ ಮಾಡೋದಕ್ಕು ಮೊದಲು ವ್ಯಾಟ್ಸಪ್ ನಲ್ಲಿ ಎಬಿವಿಪಿ ಕಾರ್ಯಕರ್ತರು ನಡೆಸಿದ ಪ್ಲ್ಯಾನ್ ಇದಾಗಿದ್ದು, ನೆಟ್ಟಗರ ಕೋಪ ನೆತ್ತಿಗೆರಿದೆ. ಮೋದಿ ಸರ್ಕಾರದ ವಿರುದ್ಧ ಧಿಕ್ಕಾರದ ಕೂಗು ಕೇಳಿ ಬರ್ತಿದೆ. ಪೊರೆಯುವ ಕೈಗಳೇ ರಕ್ತದಾಹಿಗಳಾದರೆ ಏನು ಮಾಡುವುದು..? ಎಂಬ ಆತಂಕವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.