ಬೆಂಗಳೂರು: ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಂತರಾಳ ಸಂಸ್ಥೆಯ ವತಿಯಿಂದ ಕಲಾವಿದರಿಂದ ಡಾ. ರಾಜ ಕುಮಾರ್ ಅವರ ಕುರಿತ ರೇಖಾ ಚಿತ್ರಗಳಿಗೆ ಸರ್ಧೆ ಎರ್ಪಡಿಸಲಾಗಿದೆ ಎಂದು ಅಂತರಾಳ ಸಂಸ್ಥೆಯ ಅಧ್ಯಕ್ಷರು ನಾಗರಾಜ ರೋಣೂರ್ ಅವರು ತಿಳಿಸಿದ್ದಾರೆ.
ಸ್ಪರ್ಧೆವಿವರ: ಡಾ. ರಾಜಕುಮಾರ್‌ಅಂದರೆ ಸರಳ ನಡೆ, ನುಡಿ ಹಾಗೂ ಬದುಕಿನ ಅತೀ ವಿರಳ, ಶ್ರೇಷ್ಠ ವ್ಯಕ್ತಿತ್ವದ ಪ್ರತಿರೂಪ. ಅವರ ವ್ಯಕ್ತಿತ್ವವನ್ನುಅತ್ಯಂತಕಡಿಮೆ ರೇಖೆಗಳಲ್ಲಿ, ಸರಳವಾಗಿ ಚಿತ್ರಿಸಿ ಕಳಿಸಬೇಕು. ಡಾ. ರಾಜಕುಮಾರ್‌ಅವರ ಹುಟ್ಟುಹಬ್ಬದ ಸಮಾರಂಭದಲ್ಲಿಆಯ್ಕೆಯಾದಕೃತಿಗೆ ಸೂಕ್ತ ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಪ್ರಮಾಣಪತ್ರ ವಿತರಿಸಲಾಗುವುದಲ್ಲದೇ ಸಮಾರಂಭದಲ್ಲಿ ಚಿತ್ರಗಳನ್ನು ಪ್ರದರ್ಶಿಸಲಾಗುವುದು.
ನಿಬಂಧನೆಗಳು: ಅಣ್ಣಾವ್ರಘನತೆಯನ್ನುಎತ್ತಿಹಿಡಿಯುವಕಪ್ಪು-ಬಿಳುಪುರೇಖಾಚಿತ್ರವಾಗಿರಬೇಕು. ವ್ಯಂಗ್ಯಚಿತ್ರ ಅಥವಾ ಹಾಸ್ಯ ಚಿತ್ರವಾಗಿರಬಾರದು. ಸ್ವರಚಿತ ಕೃತಿಯಾಗಿದ್ದು ಎಲ್ಲಿಯೂ ಪ್ರಕಟವಾಗಿರಬಾರದು. ಚಿತ್ರವನ್ನು ಸ್ಕ್ಯಾನ್ ಮಾಡಿ ಕಳುಹಿಸಬೇಕು.A4 ಅಳತೆಯಲ್ಲಿ 300DP ರೆಸಲ್ಯೂಶನ್ ಜೆಪೆಗ್ ರೂಪದಲ್ಲಿ ರೇಖಾಚಿತ್ರಗಳನ್ನು ಜನವರಿ 25ನೇ ತಾರೀಖಿನೊಳಗಾಗಿ“antaralatrust@gmail”ಗೆ ಕಳುಹಿಸತಕ್ಕದ್ದು. ಫೋಟೋತೆಗೆದು ಕಳುಹಿಸಬಾರದು. ವೆಕ್ಟರ್ ರೂಪದಲ್ಲಿ ಉತ್ತಮ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.