ಜೆಎನ್‌ಯು ಮೇಲಿನ ದಾಳಿ ಹೇಡಿತನದ್ದು: ಡಾ.ಅರುಣಕುಮಾರ ಕುರ್ನೇ

0
157

ಕಲಬುರಗಿ: ದೆಹಲಿಯ ಜವಾಹರಲಾಲ್ ನೆಹರು ವಿವಿ ವಿದ್ಶಾರ್ಥಿಗಳ ಮೇಲೆ ಕಬ್ಬಿಣದ ಸರಳುಗಳಂತಹ ಶಸ್ತ್ರಗಳಿಂದ ಮುಖವಾಡ ಧರಿಸಿದ ಗೂಂಡಾಗಳು ನಡೆಸಿರುವ ಹಿಂಸಾತ್ಮಕ ದಾಳಿ ಹೇಡಿತನದ್ದು ಎಂದು ಗುಲಬರ್ಗಾ ವಿಶ್ವವಿದ್ಶಾಲಯದ ಅತಿಥಿ ಉಪನ್ಶಾಸಕರ ಸಂಘದ ಅಧ್ಶಕ್ಷ ಡಾ.ಅರುಣಕುಮಾರ ಕುರ್ನೇ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.

ಗುಲಬರ್ಗಾ ವಿಶ್ವವಿದ್ಶಾಲಯದ ಆಡಳಿತ ಕಚೇರಿ ಮುಂದೆ ಜೆಎನ್ ಯು ವಿದ್ಶಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ದೆಹಲಿ ಪೊಲೀಸರು ತ್ವರಿತವಾಗಿ ಮತ್ತು ನಿರ್ಣಾಯಕವಾಗಿ ವರ್ತಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವ ಹಾಗೆ ಮಾಡಬೇಕು. ಈ ರೀತಿ ಮಾಡಲು ವಿಫಲವಾದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವಿಫಲವಾಗಿದ್ದೀರಿ ಎಂದೇ ಅರ್ಥ ಎಂದು ಡಾ.ಕುರ್ನೇ ಎಚ್ಚರಿಕೆ ನೀಡಿದರು.

ಜೆಎನ್ ಯು ವಿದ್ಶಾರ್ಥಿಗಳು ಭಯಭೀತರಾಗಿದ್ದಾರೆ ಮತ್ತು ಕೋಪಗೊಂಡಿದ್ದಾರೆ. ನಾವೆಲ್ಲರೂ ಒಗ್ಗೂಡಿ ಅವರಲ್ಲಿ ವಿಶ್ವಾಸ ಮೂಡಿಸಬೇಕಾಗಿದೆ. ನಮ್ಮ ಯುವಜನರು ಹೇಡಿಗಳಲ್ಲ. ಯುವಜನರನ್ನು ಪ್ರಚೋದಿಸುವ ಕೆಲಸ ಮಾಡಬೇಡಿ.

ಈ ಹಿಂಸೆಯು ಭಿನ್ನಾಭಿಪ್ರಾಯದ ಪ್ರತಿಧ್ವನಿಯನ್ನು ನಿಗ್ರಹಿಸಲು ಮತ್ತು ವಶಪಡಿಸಿಕೊಳ್ಳಲು ಸರ್ಕಾರವು ಎಂತಹ ಮಟ್ಟಕ್ಕೂ ಹೋಗಬಹುದು ಎಂಬುವುದನ್ನು ದೇಶದ ಜನ ಅರ್ಥ ಮಾಡಿಕೊಳ್ಳಬೇಕು ಎಂದರು.

ನಂತರ ಮಾತನಾಡಿದ ಸಂಶೋಧನ ವಿದ್ಶಾರ್ಥಿಗಳ ಒಕ್ಕೂಟದ ಅಧ್ಶಕ್ಷ ಮಿಲಿಂದ ಸುಳ್ಳದ್ˌ ಭಾರತದ ಯುವಜನರ ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಪ್ರತಿದಿನ ನಿಗ್ರಹಿಸಲಾಗುತ್ತಿದೆ. ಆಡಳಿತಾರೂಢ ಮೋದಿ ಸರ್ಕಾರವನ್ನು ಸಕ್ರಿಯವಾಗಿ ಬೆಂಬಲಿಸುವ ಗೂಂಡಾಗಳು ಭಾರತದ ಯುವಜನರ ಮೇಲೆ ನಡೆಸಿದ ಭಯಾನಕ ಹಿಂಸಾಚಾರವು ಶೋಚನೀಯವಾಗಿದೆ ಎಂದರು. ಅಲ್ಲದೆ ದೇಶದ ಜನರಿಗೆ ಇದು ಸ್ವೀಕಾರಾರ್ಹವಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಕಾನೂನು ವಿಭಾಗದ ಸಂಶೋಧನಾ ವಿದ್ಶಾರ್ಥಿ ರಮೇಶ್ ಎಸ್ ಹೂವಿನಳ್ಳಿˌ ಜೆಎನ್‌ಯು ಹಿಂಸಾಚಾರದ ಈ ಘಟನೆಯು ಬಹುಶಃ ನಾವು ಅರಾಜಕತೆಗೆ ವೇಗವಾಗಿ ಇಳಿಯುತ್ತಿದ್ದೇವೆ ಎಂಬುದಕ್ಕೆ ಅತ್ಯಂತ ಸಾಕ್ಷಿಯಾಗಿದೆ. ಇದು ಕೇಂದ್ರ ಸರ್ಕಾರ, ಗೃಹ ಸಚಿವ, ಲೆಫ್ಟಿನೆಂಟ್‌ ಗರ್ವನರ್‌ ಮತ್ತು ಪೊಲೀಸ್ ಆಯುಕ್ತರ ಮೇಲ್ವಿಚಾರಣೆಯಲ್ಲಿ ದೆಹಲಿಯಲ್ಲಿರುವ ಭಾರತದ ಅಗ್ರಗಣ್ಯ ವಿಶ್ವವಿದ್ಯಾಲಯದಲ್ಲಿ ಸಂಭವಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವೇ ಹಿಂಸೆಗೆ ಪ್ರಚೋಧನೆ ನೀಡುತ್ತಿದೆ. ಮುಖವಾಡದ ದಾಳಿಕೋರರು ದೆಹಲಿಯ ಜೆಎನ್‌ಯು ಕ್ಯಾಂಪಸ್‌ಗೆ ಹೇಗೆ ಪ್ರವೇಶಿಸಿದರು ಮತ್ತು ಯೋಜಿತ ರೀತಿಯಲ್ಲಿ ಹೇಗೆ ದಾಳಿ ಮಾಡಿದರು ಎಂಬುದನ್ನು ದೇಶ ಮತ್ತು ಜಗತ್ತು ನೋಡಿದೆ. ನ್ಯಾಯಯುತ ತನಿಖೆ ಅಗತ್ಯವಿದೆ ಏಕೆಂದರೆ ಇದರ ಹಿಂದೆ ಮುಖ್ಯ ಸಂಚುಕೋರರು ಯಾರು ಎಂದು ನಾವು ತಿಳಿದುಕೊಳ್ಳಬೇಕಿದೆ ಎಂದು ರಮೇಶ್ ಹೂವಿನಹಳ್ಳಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಶೋಧನಾ ವಿದ್ಶಾರ್ಥಿ ಒಕ್ಕೂಟದ ಮಾಜಿ ಅಧ್ಶಕ್ಷ ಗೌತಮ್ ಕರಿಕಲ್ˌ ಡಾ.ಪ್ರಕಾಶ ಬಡಿಗೇರˌ ಡಾ.ಎಂ.ಬಿ.ಕಟ್ಟಿ. ಡಾ.ಸಂತೋಷ ಕಂಬಾರˌ ಮಹಾಲಿಂಗ ಮಂಗಳೂರˌ ರವಿಕುಮಾರ ಬಿಳವಾರˌ ಮಲ್ಲಿಕಾರ್ಜುನ ಮ್ಶಾಗೇರಿˌ ಯುಥ್ ಕಾಂಗ್ರೆಸ್ ಅಧ್ಶಕ್ಷ ಈರಣ್ಣ ಪಾಟೀಲ್ ಜಳಕಿˌ ಉದಯಕುಮಾರ ಪಾಟೀಲ್ˌ ಮಹಾದೇವಸ್ವಾಮಿˌ ಭೀಮಾಶಂಕರ್ ಸೇರಿದಂತೆ ನೂರಾರು ವಿದ್ಶಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here