ವಿ.ವಿ.ಗೆ ನುಗ್ಗಿ ಮಾರಕಾಸ್ತ್ರಗಳಿಂದ ವಿದ್ಯಾರ್ಥಿಗಳ ಮೇಲೆ ದಾಳಿ: ಗುಂಡಾ ಸಂಘಟನೆ ನಿಷೇದಕ್ಕೆ ಆಗ್ರಹ

0
132

ಕಲಬುರಗಿ: ಜವಹಾರಲಾಲ ನೆಹರು ವಿಶ್ವವಿದ್ಯಾಲಯಕ್ಕೆ ಕ್ಯಾಂಪಸ್ ಗೆ ನುಗ್ಗಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಮೇಲೆ ಗುಂಡಾ ಸಂಘಟನೆಗಳು ನಡೆಸಿದ ಮಾರಣಾಂತಿಕ ಹಲ್ಲೆಯನ್ನು ನಯಾ ಸವೇರಾ ಸಂಘಟನೆಯ ಮುಖಂಡರು ಖಂಡಿಸಿ ಇಂತಹ ಸಂಘಟನೆಯನ್ನು ರದ್ದು ಪಡಿಸಬೇಕೆಂದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ  ಮೋಹಸಿನ್ ಪಟೇಲ ಆಣಬಿ ಮಾತನಾಡಿ ಘಟನೆಯಲ್ಲಿ ಜೆ.ಎನ್.ಯು ವಿವಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಆರುಶಿ ಘೋಷ್, ಕಾರ್ಯದರ್ಶಿ ಸತೀಶ್ಚಂದ್ರ, ಪ್ರೊ. ಸುಚಿತ್ರಾ ಶೆನ್, ಇವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಮತ್ತು ಹಲವಾರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು, ಒಟ್ಟು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Contact Your\'s Advertisement; 9902492681

ಕ್ಯಾಂಪಸನಲ್ಲಿರುವ ಸಾಬರಮತಿ ಹಾಸ್ಟೆಲ್ ಬಳಿ ಕಲ್ಲು ತೂರಾಟ ನಡೆಸಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿ ಒಣೋಪಕರಣಗಳನ್ನು ಧ್ವಂಸಗೊಂಡಿರುವ ಇಡೀ ರಾಷ್ಟ್ರಾದ್ಯಾಂತ ಹೋರಾಟಗಳು ನಡೆಸುವ ಮೂಲಕ ಖಂಡಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲಾಲ್ ಅಹ್ಮದ್ ಸೇಠ್, ಶೇಖ ಯುನುಸ್ ಅಲಿ, ರಹಿಮಾನ್ ಮುಲ್ಲಾ, ಸೈಯದ್ ಎಜಾಜ ಎಜಾಜ ಅಲಿ ಇನಾಮದಾರ, ರಹೇಮಾನ ಹೊಟೇಲ ಜೀವರ್ಗಿ, ಸಾಜೀದ ಅಲಿ ರಂಜೋಳವಿ, ಶೇಖ ಸಿರಾಜ ಪಾಶಾ, ಹೈದಾರ ಅಲಿ, ಇನಾಮದಾರ, ಮೇಹರಾಜ್ ರೇಖಾ, ಮೇಹರಾಜ ಕಲ್ಯಾಣವಾಲಾ, ರಜಾಕ ಚೌಧರಿ, ಖಾಲಿಕ ಅಹ್ಮದ್, ಗೀತಾ, ಸಂಗೀತಾ ಪಾಟೀಲ, ಸರಾ ಬಾನು, ರಾಬಿಯ ಶಿಕಾರಿ, ಸುಗ್ರ ಬೇಗಂ, ಫೌಜಿಯಾ ಬೇಗಂ, ಶಕೀಲಾ ಬೇಗಂ, ಫರ್ಜನಾ ಬೇಗಂ, ಆಯಿಶಾ ಶಿಕಾರಿ, ಆಬ್ದುಲ್ ಜಬ್ಬಾರ ಕಿಣಗಿ, ಜಾಫರ ಪಟೇಲ, ಬಾಷಾ ಪಟೇಲ, ಅಬ್ದುಲ್ ವಾಹಿದ್ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here