ಬಸವ ಬೆಳಕು ವಿಶ್ವದ ಬೆಳಕು: ಶಿವರಂಜನ್ ಸತ್ಯಂಪೇಟೆ

0
132

ಕಲಬುರಗಿ: ವ್ಯಕ್ತಿಯಾಗಿದ್ದ ಬಸವಣ್ಣನವರು ತಮ್ಮ ನಡೆ-ನುಡಿಗಳಿಂದ ತತ್ವ-ಸಿದ್ಧಾಂತವಾಗಿದ್ದಾರೆ. ಅಂತೆಯೇ ದೇವರಾಗುವುದು ಸುಲಭ. ಆದರೆ ಬಸವಣ್ಣನಾಗುವುದು ಕಷ್ಟ ಎಂದು ಶರಣರು ಬಸವಣ್ಣನವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ ಎಂದು ಪತ್ರಕರ್ತ- ಸಾಹಿತಿ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ನಗರದ ಬಸವ ಮಂಟಪದಲ್ಲಿ ಕೂಡಲ ಸಂಗಮದಲ್ಲಿ ನಡೆಯಲಿರುವ ಶರಣ ಮೇಳ ನಿಮಿತ್ತ ರಾಷ್ಟ್ರೀಯ ಬಸವ ದಳದ ಶರಣೆಯರು ಹಮ್ಮಿಕೊಂಡಿದ್ದ ಶರಣ ವ್ರತ ಮುಕ್ತಾಯ ಸಮಾರಂಭದಲ್ಲಿ ವಿಶೇಷ ಅನುಭಾವ ನೀಡಿದ ಅವರು, ಪ್ರಜಾಪ್ರಭುತ್ವ, ಸಮಾನತೆ, ಸ್ವಾತಂತ್ರ್ಯ, ಮಾನವ ಹಕ್ಕುಗಳ ಕುರಿತು 12 ನೇ ಶತಮಾನದಲ್ಲೇ ಮಾತನಾಡಿದ ಬಸವಣ್ಣನವರು ಜ್ಞಾನ, ಬೆಳಕಿನ ಪ್ರತೀಕವಾಗಿದ್ದಾರೆ. ಅಂತೆಯೇ ಬಸವ ಬೆಳಕು ವಿಶ್ವದ ಬೆಳಕಾಗಿದೆ ಎಂದು ವಿವರಿಸಿದರು.

Contact Your\'s Advertisement; 9902492681

ಮುಖ್ಯ ಅತಿಥಿಯಾಗಿದ್ದ ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ ಮಾತನಾಡಿ, ಮಹಿಳೆಯರು ಮೂಡನಂಬಿಕೆ, ಸಂಪ್ರದಾಯದಿಂದ ಹೊರ ಬರುವ ಮೂಲಕ ತಮ್ಮ ಮೇಲೆ ನಡೆಯುತ್ತಿರುವ ಶೋಷಣೆ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಅತಿಥಿಯಾಗಿದ್ದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಕಷ್ಟ ಸಾಧ್ಗವಾದುದೆಲ್ಲ ಸಾಧ್ಯವಾಗಲಿದೆ. ವೈಚಾರಿಕ ಮನೋಭಾವನೆ ಬೆಳೆಸಿಕೊಳ್ಳುವ ಮೂಲಕ ಪ್ರಜ್ಞಾವಂತ ಸಮಾಜ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.

ರಾಷ್ಟ್ರೀಯ ಬಸವ ದಳ, ಮಹಿಳಾ ಘಟಕದ, ಗಿರೀಜಾ ಸಜ್ಜನ್, ಸಂಗೀತಾ ಉಳ್ಳಾಗಡ್ಡಿ, ಪೂಜಾ ಮೂಲಗೆ, ಶಾಂತಾ ವಾಲಿ,ಮ ಲ್ಲಮ್ಮ ಪಾಟೀಲ, ಲಲಿತಾ ಜೀವಣಗಿ, ಕವಿತಾ ಲೊಡ್ಡನ್, ಪುತಳಾಬಾಯಿ ಕಠಾಳೆ, ಶಿವಾನಂದ‌ ಮಠಪತಿ, ಪ್ರಭುದೇವ ಯಳವಂತಗಿ, ರವೀಂದ್ರ ಭಂಟನಳ್ಳಿ, ಯೋಗೇಶ ಹಿರೇಮಠ ಇತರರಿದ್ದರು.

ರಾಷ್ಟ್ರೀಯ ಬಸವ ದಳದ ಶ್ರೀದೇವಿ ಬಿ.ಎಂ. ಏರಿ ಅಧ್ಯಕ್ಷತೆ ವಹಿಸಿದ್ದರು. ಜಗದೇವಿ ಚೆಟ್ಟಿ ನಿರೂಪಿಸಿದರು. ಪೂಜಾ ಪ್ರಾರ್ಥನೆಗೀತೆ ಹಾಡಿದರು. ದೀಪಾಲಿ ಬಿರಾದಾರ ಸ್ವಾಗತಿಸಿದರು. ಸಂಗೀತಾ ಚೆಕ್ಕಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here