ಗುಲಬರ್ಗಾ ವಿವಿಯ ಮ್ಯಾನ್ ಪವರ್ ಟೆಂಡರ್ ರದ್ದತಿಗೆ ಜಿಲ್ಲಾ ಉಸ್ತುವಾರಿಗೆ ಮನವಿ

0
69

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕರೆದಿರುವ ಮ್ಯಾನ್ ಪವರ್ ಟೆಂಡರ್ ರದ್ದು ಮಾಡಿ, ಬೇಸಿಕ್ ಜಾರಿ ಆಗೂವರೆಗೆ ತಾತ್ಕಾಲಿಕವಾಗಿ ಕಿಯೋನಿಕ್ಸ ಸಂಸ್ಥೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಇಂದು ನಗರಕ್ಕೆ ಆಗಮಿಸಿದ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ರವರಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಗುತ್ತಿಗೆ ನೌಕರರ ಕಲ್ಯಾಣ ಸಂಘದಿಂದ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾಧ ವಿಜಯಕುಮಾರ ಕೆಂಗಲ್, ಅಧ್ಯಕ್ಷ ಶೀಲಪ್ರಕಾಶ ದೊಡ್ಡಮನಿ, ಕಾರ್ಯದರ್ಶಿ ರಾಕೇಶ ಎಮ್., ಪದಾಧಿಕಾರಿಗಳಾದ ನಾಗೇಂದ್ರಪ್ಪ ಪಟ್ಟೇದ, ಸಂಜೀವಕುಮಾರ ಕಾಂಬಳೆ, ಶಿವಕುಮಾರ ಹಿರೇವ್ಮಠ, ಚಂದ್ರಶೇಖರ್ ಸಾವಳಗಿ, ಮಲ್ಲಿಕಾರ್ಜುನ ಅಪ್ಚಂದ, ದಿಲೀಪ್ ಪಾಟೀಲ್, ಶಿವಲಿಂಗ ಕಲಕೇರಿ, ಭೀಮಪ್ಪ ಹಾಳಿ, ವಿಜಯಕುಮಾರ ಚವ್ಹಾಣ ಇತರ ನೌಕರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here