ಸಂಸ್ಕೃತಿಯ ಚಲನೆಯಲ್ಲಿ ಮಹಿಳೆಯ ಪಾತ್ರ ಪ್ರಧಾನ: ಶರಣಬಸಪ್ಪಗೌಡ ದರ್ಶನಾಪುರ

0
59

ಶಹಾಪುರ: ಸಂಸ್ಕೃತಿ ಚಲನೆಯ ಹಾದಿಯಲ್ಲಿ ಮಹಿಳೆಯರ ಪ್ರಧಾನ ಪಾತ್ರವಿದೆ ಎಂಬುದಕ್ಕೆ ಈ ಮಹಿಳಾ ಸಾಂಸ್ಕೃತಿಕ ಉತ್ಸವ ಸಾಕ್ಷೀಕರಿಸಿದೆ ಎಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಹೇಳಿದರು.

ಶಹಾಪುರದ ಶ್ರೀ ಚರಬಸವೇಶ್ವರ ಗದ್ದುಗೆ ಕಲ್ಯಾಣ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಮಹಿಳಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಡೊಳ್ಳು ಭಾರಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಸಂಸ್ಕೃತಿ ಎಂಬುದು ಸದಾ ಹರಿಯುವ ನದಿಯಂತೆ ಅದರ ಪ್ರತಿ ಹನಿ ಹನಿಯಲ್ಲೂ ಮಹಿಳೆ ಇದ್ದಾಳೆ ಅವಳ ಹಾದಿಯಲ್ಲಿ ಸಿಗುವ ಅನುಭವಗಳ ಸಾರವೇ ಈ ಮಹಿಳಾ ಸಂಸ್ಕೃತಿ ಎಂದು ಕನ್ನಡ ಪರ ಹೋರಾಟಗಾರರಾದ ಡಾ. ಶರಣು ಬಿ. ಗದ್ದುಗೆ ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಅಮರಯ್ಯ ಸ್ವಾಮಿ ಜಾಲಿಬೆಂಚಿ ಮಾತನಾಡಿ ಮಹಿಳೆಯ ಜ್ಞಾನ ಮರುಬಳಕೆ ಮಾಡುವ ಜಾಣತನ ಜೀವ ಗೊಳಿಸುವ ಗ್ರಾಮೀಣ ಸೊಗಡಿನ ಜಾನಪದ ಇಂದಿಗೂ ಉಳಿಸಿ ಬೆಳೆಸಿಕೊಂಡು ಬಂದಿರುವುದು ಗ್ರಾಮೀಣ ಭಾಗದ ಮಹಿಳೆಯರೇ ಎಂದು ಹೇಳಿದರು.

ನಗರದ ಹಳೆ ಬಸ್ ನಿಲ್ದಾಣದಿಂದ ಚರಬಸವೇಶ್ವರ ಗದ್ದುಗೆವರಿಗೆ ಮೆರವಣಿಗೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀಮತಿ ಸವಿತಾ ಚಿರಕುನಯ ತಂಡದಿಂದ ಪೂಜಾ ಕುಣಿತ ,ಶಿವಮೊಗ್ಗದ ಶ್ರೀಮತಿ ಶಾಂತಮ್ಮ ಮಹಿಳಾ ಡೊಳ್ಳಿನ ತಂಡ ,ಶ್ರೀಮತಿ ಪರೇಗಾ ಮತ್ತು ತಂಡ ಬೀದರ್ ಅವರಿಂದ ಲಂಬಾಣಿ ಜನಪದ ನೃತ್ಯ,ಶ್ರೀಮತಿ ಆಶಾ ಮತ್ತು ತಂಡ ದಾವಣಗೆರೆ ಜಿಲ್ಲೆಯಿಂದ ಕೊಂಬು ಕಹಳೆ ಶ್ರೀಮತಿ ಕಮಲಮ್ಮ ಚಪ್ಲಿ ಮತ್ತು ತಂಡ ಅವರಿ೦ದ ಮಹಿಳಾ ತಮಟೆ ವಾದನ ಕೆ.ಎಂ. ದೊಡ್ಡಿಯ ಶ್ರೀಮತಿ ರಾಜಮ್ಮ ಮತ್ತು ತಂಡದವರಿಂದ ನಂದಿಧ್ವಜ ಕುಣಿತ ನೋಡುಗರನ್ನು ಮನಸೂರೆಗೊಳಿಸಿದವು. ನಂತರ ಹಲವಾರು ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು .

ನಂತರ ಮಹಿಳಾ ಕವಿಗೋಷ್ಠಿ ಜರುಗಿತು ಸುಮಾರು ಹದಿನೈದಕ್ಕೂ ಹೆಚ್ಚು ಮಹಿಳಾ ಕವಯತ್ರಿಯರು ತಮ್ಮ ಸ್ವರಚಿತ ಕವನವನ್ನು ವಾಚಿಸಿ ಸಮಾಜದ ಅಂಕು ಡೊಂಕುಗಳನ್ನು ಎತ್ತಿ ಹಿಡಿಯುವುದರ ಮುಖಾಂತರ ಹಾಸ್ಯ ಚಟಾಕಿಗಳನ್ನು ಹಾರಿಸಿದರು.

ಕಾರ್ಯಕ್ರಮದ ವೇದಿಕೆಯ ಮೇಲೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀ ನಾಗಣ್ಣ ಪೂಜಾರಿ ರಸ್ತಾಪುರ, ಬಸವರಾಜ್ ಹೇರುಂಡಿ, ಕವಯತ್ರಿಯರಾದ ಶ್ರೀಮತಿ ಭಾಗ್ಯ ದೊರೆ, ಶಕುಂತಲಾ ಹಡಗಲಿ, ಹಾಗೂ ಇತರರು ಇದ್ದರು ಮಹೇಶ್ ಪತ್ತಾರ ಪ್ರಾರ್ಥಿಸಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಬಸವರಾಜ ಸಿನ್ನೂರು ನಿರೂಪಿಸಿದರು, ಬೂದಯ್ಯ ಹಿರೇಮಠ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here