ರಂಗಂಪೇಟೆ ರಸ್ತೆ ಅಗಲೀಕರಣದ ವಿಸ್ತೀರ್ಣ ಕಡಿಮೆಗೊಳಿಸಲು ಸಾರ್ವಜನಿಕರ ಮನವಿ

0
135

ಸುರಪುರ: ನಗರದ ರಂಗಂಪೇಟೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ನಗರಸಭೆಯ ಅಧಿಕಾರಿಗಳು ರಸ್ತೆ ಅಗಲೀಕರಣಕ್ಕಾಗಿ ಎಲ್ಲಾ ರಸ್ತೆಗಳನ್ನು ಅಳತೆ ಮಾಡಿ ೪೬ ಫೀಟ್ ರಸ್ತೆ ನಿರ್ಮಾಣಕ್ಕಾಗಿ ಗುರುತು ಹಾಕಲಾಗಿದ್ದು ಇದರಲ್ಲಿ ರಸ್ತೆ ಪಕ್ಕದಲ್ಲಿರುವ ಅನೇಕ ಮನೆಗಳು ಹೋಗುತ್ತಿದ್ದು ಇದಕ್ಕಾಗಿ ಅಗಲೀಕರಣದ ವಿಸ್ತೀರ್ಣ ಕಡಿಮೆಗೊಳಿಸಲು ಕ್ರಮಕೈಗೊಳ್ಳುವಂತೆ ರಂಗಂಪೇಟೆಯ ಜನತೆ ಶಾಸಕ ನರಸಿಂಹ ನಾಯಕ (ರಾಜುಗೌಡ)ರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಮಾಡಿಕೊಂಡರು.

ಸಾರ್ವಜನಿಕರ ಮನವಿ ಆಲಿಸಿದ ಶಾಸಕರು ಮಾತನಾಡಿ,ಈಗಾಗಲೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವಿಸ್ತೀರ್ಣ ಕಡಿಮೆಗೊಳಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.ರಂಗಂಪೇಟೆಯಲ್ಲಿ ಅತೀ ದೊಡ್ಡದಾದ ರಸ್ತೆಗಳ ಅವಶ್ಯಕತೆಯಿಲ್ಲ.ಭಾರಿ ವಾಹನಗಳ ಓಡಾಟವಿಲ್ಲದ್ದರಿಂದ ೪೬ ಫೀಟ್ ಅಗಲದ ಅವಶ್ಯಕತೆಯಿಲ್ಲವೆಂಬುದನ್ನು ಮನವರಿಕೆ ಮಾಡಿರುವುದಾಗಿ ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಾರ್ವಜನಿಕರು ’ನಲವತ್ತಾರು ಫೀಟ್ ಬದಲಾಗಿ ಮೂವತ್ತೆಂಟು ಫೀಟ್ ಮಾಡಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು’ ಇದಕ್ಕೆ ಸ್ಪಂಧಿಸಿದ ಮತ್ತೊಮ್ಮೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸುವುದಾಗಿ ತಿಳಿಸಿದರು.

ನಂತರ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಸಂಪೂರ್ಣ ಮನೆಗಳನ್ನು ಕಳೆದುಕೊಳ್ಳುವ ವಸತಿರಹಿತ ಕುಟುಂಬಗಳಿಗೆ ಸರಕಾರದಿಂದ ಮನೆಗಳನ್ನು ನಿರ್ಮಿಸಿ ಕೊಡಲು ಯೋಚಿಸಲಾಗಿದೆ.ಇದಕ್ಕಾಗಿ ಹನ್ನೆರಡು ಎಕರೆ ಜಾಗವನ್ನು ಗುರುತಿಸಲಾಗುತ್ತಿದೆ.ಆದ್ದರಿಂದ ರಸ್ತೆ ಅಗಲೀಕರಣದಲ್ಲಿ ಸಂಪೂರ್ಣ ಮನೆಗಳನ್ನು ಕಳೆದುಕೊಳ್ಳುವ ಕುಟುಂಬಗಳು ಚಿಂತಿಸುವ ಅವಶ್ಯಕತೆಯಿಲ್ಲ ಎಂದು ಭರವಸೆ ತುಂಬಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಹಾಗು ರಂಗಂಪೇಟೆಯ ಸಾರ್ವಜನಿಕರಾದ ವೀರಣ್ಣ ಗುಡೂರ,ಮಾನಪ್ಪ ನಾಲವಾರ,ನಾಗೇಶ ಅಂಬುರೆ,ಬಾಬು ಅಗ್ರಹಾರ,ಚಿದಾನಂದ ಸ್ವಾಮಿ,ಚಂದ್ರು ದೋತ್ರೆ,ರವಿ ಪತ್ತಾರ,ಶಶಿಧರ ವಿಭೂತಿ,ಶರಣಪ್ಪ ಕಲಕೇರಿ,ಪ್ರಾಣೇಶ ಪೋಲಂಪಲ್ಲಿ,ಮುರಳಿಧರ ಅಂಬುರೆ,ಅಮೂಲ ಅಂಬುರೆ,ಶೇಖಪ್ಪ ಸಪ್ಪಂಡಿ,ಗೋಪಾಲ ಕಿಡಕಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here