ಸುರಪುರ: ರಾಷ್ಟ್ರದ ಶ್ರೇಷ್ಠ ಯುವ ಸಂತ ಸ್ವಾಮಿ ವಿವೇಕಾನಂದರ ತತ್ವ, ಚಿಂತನೆ, ವಿಚಾರಗಳು ಯುವ ಜನಾಂಗಕ್ಕೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿವೆ ಎಂದು ಬಸವಪ್ರಭು ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.
ರಂಗಂಪೇಟೆಯ ಬಸವೇಶ್ವರ ಕಾಲೇಜಿನಲ್ಲಿ ಇಂದು ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಚಿಕ್ಯಾಗೋ ಸಮ್ಮೇಳನದ ಮೂಲಕ ವಿಶ್ವದ ಗಮನ ಸೇಳೆದ ಸ್ವಾಮಿ ವಿವೇಕಾನಂದರು ಈ ರಾಷ್ಟ್ರದ ಯುವ ಜನಾಂಗಕ್ಕಾಗಿ ಅನೇಕ ವಿಚಾರಗಳನ್ನು, ಚಿಂತನೆಗಳನ್ನು, ಆಲೋಚನೆಗಳನ್ನು ತಿಳಿಸಿದ್ದಾರೆ.
ಅವರ ದೇಶ ಪ್ರೇಮ, ಯುವ ಜನಾಂಗದ ಮೇಲಿನ ಅಭಿಮಾನ, ರಾಷ್ಟ್ರಭಕ್ತಿ ಆದರ್ಶಪ್ರಾಯವಾಗಿತ್ತು ಇಂದಿನ ಯುವಜನಾಂಗಕ್ಕೆ ವಿವೇಕಾನಂದರ ವಿಚಾರಗಳು ಅತ್ಯಂತ ಅವಶ್ಯಕವಾಗಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಚಂದ್ರಶೇಖರ ಡೋಣ್ಣುರು ಲಕ್ಷ್ಮೀಪೂರ, ಶಿವಶರಣಪ್ಪ ಹೆಡಿಗಿನಾಳ, ಅಂಬ್ರೇಶ ಕುಂಬಾರ, ರಾಘವೇಂದ್ರ ಸಗರ, ಅಂಬ್ರೇಶ ಪರತಾಬಾದ್ ಸೇರಿದಂತೆ ಇತರರಿದ್ದರು. ಕಾರ್ಯಕ್ರಮವನ್ನು ಮೌನೇಶ ಐನಾಪುರ ನಿರೂಪಿಸಿ ವಂದಿಸಿದರು.