ಸುರಪುರ: ಸ್ಥಳಿಯ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರ ತಾಯಿ ತಿಮ್ಮಮ್ಮ ಎಸ್.ಗೌಡತಿಯವರು ಬೆಂಗಳೂರಿನ ಕೊಲಂಬೊ ಆಸ್ಪತ್ರೆಯಲ್ಲಿ ಸೋಮವಾರ ಬೆಳಿಗ್ಗೆ ನಿಧನರಾಗಿದ್ದು.ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಸೋಮವಾರ ರಾತ್ರಿ ತಾಲೂಕಿನ ಅವರ ಸ್ವಗ್ರಾಮ ಕೊಡೇಕಲ್‌ನಲ್ಲಿರುವ ಮನೆಯ ಆವರಣದಲ್ಲಿ ಎಲ್ಲರ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ಮಂಗಳವಾರ ಬೆಳಿಗ್ಗೆಯಿಂದ ತಾಯಿಯವರ ಅಂತಿಮ ದರ್ಶನಕ್ಕೆ ಸುರಪುರ ಶಹಾಪುರ ಯಾದಗಿರಿ ಕಲಬುರ್ಗಿ ಸೇರಿದಂತೆ ನಾನಾಕಡೆಗಳಿಂದ ಸಾವಿರಾರು ಜನ ಆಗಮಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು ಈ ಸಂದರ್ಭದಲ್ಲಿ ಶಾಸಕ ನರಸಿಂಹ ನಾಯಕ ಹಾಗು ಅವರ ಸಹೋದರ ಹಣಮಂತ ನಾಯಕರನ್ನು ಕಂಡು ಭಾವುಕರಾದ ಹಲವಾರು ಜನ ಇವರ ಅಭಿಮಾನಿಗಳು ಹಾಗು ಬೆಂಬಲಿಗರು ಭಾವುಕರಾಗಿ ಕಂಬನಿ ಮಿಡಿದರು.ಜಿಲ್ಲಾಧಿಕಾರಿ ಎಂ.ಕೂರ್ಮರಾವ್, ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ,ಕಲಬುರ್ಗಿ ಶಾಸಕ ದತ್ತಾತ್ರೆಯ ಪಾಟೀಲ ರೇವೂರ,ದೇವದುರ್ಗ ಶಾಸಕ ಶಿವನಗೌಡ ನಾಯಕ,ಸೇಡಂ ಶಾಸಕ ರಾಜಕುಮಾರ ಪಾಟೀಲ,ಚಿಂಚೋಳಿ ಶಾಸಕ ಅವಿನಾಶ ಜಾಧವ್,ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್ ಹಾಗು ಮುಖಂಡರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ,ರಾಜಾ ಮದನಗೋಪಾಲ ನಾಯಕ,ರಾಜಾ ಹನಮಪ್ಪ ನಾಯಕ (ತಾತಾ),ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ,ಮೀನಾಕ್ಷಿ ಪಾಟೀಲ, ಸುರೇಶ ಸಜ್ಜನ್,ಶಂಕರ ನಾಯಕ ಸೇರಿದಂತೆ ಅನೇಕ ಜನ ಜನಪ್ರತಿನಿಧಿಗಳು ಮತ್ತು ಉದ್ಯಮಿಗಳು ಹಾಗು ಮುಖಂಡರು ಸೇರಿದಂತೆ ಸುಮಾರು ಐವತ್ತು ಸಾವಿರಕ್ಕು ಹೆಚ್ಚು ಜನ ಭಾಗವಹಿಸಿದ್ದರು.
ನಂತರ ಮದ್ಹ್ಯಾನ ಮೂರು ಗಂಟೆಯ ವೇಳೆಗೆ ತಿಮ್ಮಮ್ಮ ಗೌಡತಿಯವರ ತೋಟದ ಜಮೀನಿನಲ್ಲಿ ಹಿಂದು ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ದೇವಾಪುರ ಜಡಿಶಾಂತಲಿಂಗೇಶ್ವರ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಗೋಲಪಲ್ಲಿ ವಾಲ್ಮೀಕಿ ಪೀಠದ ವರದಾನೇಶ್ವರ ಸ್ವಾಮೀಜಿ,ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ,ಕೊಡೇಕಲ್ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ,ಮುದನೂರ ಕಂಠಿ ಮಠದ ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಅನೇಕ ಜನ ಸ್ವಾಮೀಜಿಗಳು ಹಾಗು ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.