ಸುರಪುರ: ಇದೇ ತಿಂಗಳು ೧೮ನೇ ತಾರೀಖು ಬೆಳಿಗ್ಗೆ ೧೧ ಗಂಟೆಗೆ ಬಸವೇಶ್ವರ ಪತ್ತಿನ ಸಹಕಾರ ಸಂಘದ ಬೆಳ್ಳಿಹಬ್ಬ ಹಾಗು ರಂಗಂಪೇಟೆಯ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದ ಬಳಿಯ ಮುಖ್ಯ ರಸ್ತೆಯಲ್ಲಿ ಬಸವೇಶ್ವರರ ಪುತ್ಥಳಿ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭವಿದ್ದು ತಾಲೂಕಿನ ಎಲ್ಲಾ ಗ್ರಾಮಗಳ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಉಪಾಧ್ಯಕ್ಷ ಮಂಜುನಾಥ ಜಾಲಹಳ್ಳಿ ತಿಳಿಸಿದರು.
ತಾಲೂಕಿನ ಹೆಮನೂರ ಗ್ರಾಮದಲ್ಲಿನ ಬಸವೇಶ್ವರ ವೃತ್ತದಲ್ಲಿ ಸಭೆ ನಡೆಸಿ ಮಾತನಾಡಿ,೧೮ ರಂದು ನಡೆಯುವ ಕಾರ್ಯಕ್ರಮದಲ್ಲಿ ಅನೇಕ ಜನ ಸ್ವಾಮೀಜಿಗಳು,ರಾಜಕೀಯ ನೇತಾರರು ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳು ಮತ್ತು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.ಅಲ್ಲದೆ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಅಡಿಗಲ್ಲು ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ಜರುಗಲಿದೆ.ಆದ್ದರಿಂದ ಹೆಮನೂರ ಗ್ರಾಮದ ವಿಶ್ವಗುರು ಬಸವಣ್ಣನವರ ಅನುಯಾಯಿಗಳು,ಅಭಿಮಾನಿಗಳು ಹಾಗು ವೀರಶೈವ ಲಿಂಗಾಯತ ಸಮುದಾಯದ ಜನತೆ ಹೆಚ್ಚಿನ ಸಂಖ್ಯೆಂiiಲ್ಲಿ ಭಾಗವಹಿಸಲು ಮನವಿ ಮಾಡಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಡೊಣೂರ,ರವಿಕುಮಾರಗೌಡ ಹೆಮನೂರ,ವಿರೇಶ ಪಂಚಾಂಗಮಠ,ಸಿದ್ದನಗೌಡ ಹೆಬ್ಬಾಳ,ಈಶ್ವರಪ್ಪ ಅಂಗಡಿ,ದೇವನಗೌಡ ಮಾಲಿ ಪಾಟೀಲ,ನಾಗರಾಜ ಬಳಿ,ಶರಣಪ್ಪ ಕಲ್ಯಾಣಿ,ಚೆನ್ನಪ್ಪ ಸಂಗಾಣಿ,ವಿಶ್ವನಾಥರಡ್ಡಿ,ರಾಘಣ್ಣ ಕುಲಕರ್ಣಿ ಸೇರಿದಂತೆ ಅನೇಕರಿದ್ದರು.