ಮಹಾತ್ಮ ಶ್ರೀ ಶರಣಬಸವೇಶ್ವರರ ತೊಟ್ಟಿಲು ಕಾರ್ಯಕ್ರಮ

0
299

ಕಲಬುರಗಿ: ಸಮಸ್ತ ನಾಡಿನ ಆರಾಧ್ಯ ದೈವ ಮಹಾತ್ಮ ಶ್ರೀ ಶರಣಬಸವೇಶ್ವರ ಹುಟ್ಟಿದ ದಿನದ ಪ್ರಯುಕ್ತ ರೈತರು ಶರಣಬಸವೇಶ್ವರರ ದೇವಸ್ಥಾನಕ್ಕೆ ಆಗಮಿಸಿ ಶರಣಬಸವೇಶ್ವರರ ಗದ್ದುಗೆ ಆವರಣದಲ್ಲಿ ಅಪಾರ ಶರಣ ಶರಣಿಯರ ಭಕ್ತರ ಸಮ್ಮುಖದಲ್ಲಿ ಮಹಾತ್ಮ ಶ್ರೀ ಶರಣಬಸವೇಶ್ವರರ ತೊಟ್ಟಿಲು ಕಾರ್ಯಕ್ರಮವನ್ನು ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ನೇತೃತ್ವದಲ್ಲಿ ಸಂಭ್ರಮ ಸಡಗರದಿಂದ ಜರುಗಿತು.

ಮಾತೋಶ್ರಿ ದಾಕ್ಷಾಯಿಣಿ ಅವ್ವಾಜಿಯವರ ಸಾನಿಧ್ಯದಲ್ಲಿ ಭಕ್ತ ಸಮೂಹದ ಜಯ ಘೋಷಗಳ ಮಧ್ಯೆ ಶರಣಿಯರು ಜೋಗುಳ ಪದ ಹಾಡುವ ಮೂಲಕ ಶರಣಬಸವೇಶ್ವರರನ್ನು ತೊಟ್ಟಿಲಿನಲ್ಲಿ ಹಾಕುವ ಮೂಲಕ ಕೃತಾರ್ಥರಾದರು. ವಿವಿಧ ಸಂಪ್ರಾದಾಯಿಕ ಮಂತ್ರ ಪಠಣಗಳ ಮೂಲಕ ಭಕ್ತರು ತೊಟ್ಟಿಲು ಕಾರ್ಯಕ್ರಮವನ್ನು ನೆರವೇರಿಸಿದರು.

Contact Your\'s Advertisement; 9902492681

ಶರಣಬಸವೇಶ್ವರರು ತಮ್ಮ ಹೊಲದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರುಣಿಸಿದ ಮತ್ತು ಹಸಿದ ಪ್ರಾಣಿಗಳಿಗೆ ದವಸ ಧಾನ್ಯ ಹಾಕಿ ಮಾನವೀಯ ಪ್ರೀತಿ ತೋರಿಸಿದ ಪ್ರಸಂಗವನ್ನು ರೈತರು ನೆನೆದು ತಮ್ಮ ಹಾಡಿನಲ್ಲಿ ವ್ಯಕ್ತಪಡಿಸಿ ಸಂಭ್ರಮಿಸಿದರು. ಮಕ್ಕಳು ರೈತರು ಸೇರಿಂದತೆ ಅಪಾರ ಭಕ್ತ ಸಮೂಹ ತೊಟ್ಟಿಲು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದೇ ಸಂದರ್ಭದಲ್ಲಿ ಶರಣಬಸವೇಶ್ವರರು ಮಾಡಿದ ಹಲವು ಪವಾಡಗಳನ್ನು ಭಕ್ತರು ನೆನೆದು, ರೈತರ ಕೃಷಿ ಚಟುವಟಿಕೆಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿ ಸ್ವತಃ ತಾವೇ ಕೃಷಿಯಲ್ಲಿ ತೊಡಗಿ ಇಡೀ ರೈತ ಸಮೂಹಕ್ಕೆ ದಾರಿ ದೀಪವಾಗಿದ್ದು ಇಂದಿಗೂ ಮರೆಯುವಂತಿಲ್ಲ ಎಂದು ಬಂದ ರೈತರು ಶರಣಬಸವೇಶ್ವರರ ಲೀಲೆಗಳನ್ನು ಸ್ಮರಿಸಿಕೊಂಡರು.

ಮಹಾತ್ಮ ಶ್ರೀ ಶರಣಬಸವೇಶ್ವರರ ಹುಟ್ಟಿದ ದಿನದ ಪ್ರಯುಕ್ತ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪೂಜ್ಯ ಡಾ. ಶರಣಬಸವಪ್ಪಾ ಅಪ್ಪ ಹಾಗೂ ಮಾತೋಶ್ರಿ ದಾಕ್ಷಾಯಿಣಿ ಅವ್ವಾಜಿಯವರು ಹಿರಿಯ ನಾಗರಿಕರಿಗೆ ಶಾಲು ಹೊದಿಸಿ, ಮಕ್ಕಳಿಗೆ ಪುಸ್ತಕ ಪೆನ್ನು ಇತರ ಪಠ್ಯದ ಸಾಮಾಗ್ರಿಗಳನ್ನು ವಿತರಿಸಿದರು. ಇದೇ ಸಂಧರ್ಭದಲ್ಲಿ ಮಾತೋಶ್ರೀ ದಾಕ್ಷಯಿಣಿ ಅವ್ವಾಜಿ ಅವರು ಮುತೈದೆಯರಿಗೆ ಹೂವು, ಹಣ್ಣು ಮತ್ತು ಕುಪ್ಪಸವನ್ನು ನೀಡಿ ಗೌರವಿಸಿದರು.

ನಾಡಿನ ಹೆಸರಾಂತ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಅಹೋರಾತ್ರಿ ನಡೆಯುವ ಸಂಗೀತ ಕಾರ್ಯಕ್ರಮವನ್ನು ಶ್ರೀ ಶರಣಬಸವೇಶ್ವರ ಸಂಗೀತ ಕಲಾ ಬಳಗ ಕಲಬುರಗಿ ಇವರ ವತಿಯಿಂದ ಏರ್ಪಡಿಸಲಾಗಿತ್ತು. ತೊಟ್ಟಿಲು ಕಾರ್ಯಕ್ರಮಕ್ಕೆ ಬಂದ ಭಕ್ತ ಸಮೂಹಕ್ಕೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here