ಸುರಪುರ: ದೇಶದ ಜನರ ಮೇಲೆ ಬಲವಂತವಾಗಿ ಸಿಎಎ ಮತ್ತು ಎನ್.ಆರ್.ಸಿ ಹೇರುವ ಮೂಲಕ ದಲಿತ ಅಲ್ಪಸಂಖ್ಯಾತರ ಮತ್ತು ಹಿಂದುಳಿದವರನ್ನು ಹತ್ತಿಕ್ಕಲು ಮುಂದಾಗಿದೆ.ಸಿಎಎ ಮತ್ತು ಎನ್.ಆರ್.ಸಿ ಇವು ಜನವಿರೋಧಿ ಕಾಯಿದೆಗಳಾಗಿವೆ ಎಂದು ಹೋರಾಟಗಾರ ಮಾರುತಿ ಮಾನ್ಪಡೆ ಮಾತನಾಡಿದರು.
ನಗರದ ರಂಗಂಪೇಟೆಯ ಇಸಿತಿಯಾ ಮಜೀದ್ ಆವರಣದಲ್ಲಿ ನಡೆದ ಸಿಎಎ ವಿರೋಧಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಇದೇ ತಿಂಗಳು ೨೧ನೇ ತಾರೀಖು ಕಲಬುರ್ಗಿಯ ಹಾರಗೇರಾಅ ಕ್ರಾಸ್‌ಲ್ಲಿರುವ ಪೀರ್ ಬಂದಾಲಿ ಮಯದಾನದಲ್ಲಿ ಸಿಎಎ ವಿರೋಧಿಸಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಸುರಪುರ ತಾಲೂಕಿನಿಂದ ಎಲ್ಲರು ಭಾಗವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಭಾಗಿಯಾಗಿದ್ದ ಹಿರಿಯ ಮುಖಂಡ ಇಲಿಯಾಸ್ ಸೇಠ್ ಬಾಗವಾನ ಮಾತನಾಡಿ,ಸಂವಿಧಾನದ ಕಲಂ ೧೪ರ ಪ್ರಕಾರ ಯಾವುದೆ ಕಾನೂನು ಧರ್ಮ ಮತ ಪಂಥಗಳ ಆಧಾರದ ಮೇಲೆ ಮಾಡಬಾರದೆಂದು ಹೇಳುತ್ತದೆ.ಆದರೆ ಕೇಂದ್ರದ ಮೋದಿಯವರ ಸರಕಾರ ಈ ದೇಶದಲ್ಲಿನ ದಲಿತ ಮತ್ತು ಅಲ್ಪಸಂಖ್ಯಾತರರನ್ನು ಗುರಿಯಾಗಿಸಿಕೊಂಡು ಸಿಎಎ ಕಾಯಿದೆ ಮಾಡುವ ಮೂಲಕ ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸುತ್ತಿದೆ.ಇದನ್ನು ಪ್ರತಿಯೊಬ್ಬ ಪ್ರಜ್ಞಾವಂತರು ಖಂಡಿಸಬೇಕಿದೆ.ಇಲ್ಲವಾದರೆ ಮುಂದೊಂದು ದಿನ ನಾವೆಲ್ಲರು ಸಂಕಷ್ಟ ಹೆದರಿಸಬೇಕಾಗಲಿದೆ.ಆದ್ದರಿಂದ ಸಿಎಎ ಮತ್ತು ಎನ್.ಆರ್.ಸಿ ವಿರೋಧಿಸಿ ಕಲಬುರ್ಗಿಯಲ್ಲಿ ಲಕ್ಷಾಂತರ ಜನ ಸೇರಿ ಜಾಗೃತಿ ಮತ್ತು ಸಿಎಎ ವಿರೋಧಿಸಿ ಸಮಾವೇಶ ಮಾಡಲಿದ್ದು ತಾವೆಲ್ಲರೂ ಈ ಸಮಾವೇಶದಲ್ಲಿ ಭಾಗವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಸ್ಥಳಿಯ ಮುಖಂಡ ಮಲ್ಲಯ್ಯ ಕಮತಗಿ ಮಾತನಾಡಿ,ಇವತ್ತು ಕೇಂದ್ರ ಸರಕಾರ ಸಿಎಎ ಕೇವಲ ಬಾಂಗ್ಲಾ ಪಾಕಿಸ್ಥಾನ ಮತ್ತು ಅಫ್ಘಾನ ದೇಶದ ಮುಸ್ಲೀಮರ ವಿರೋಧಿಸಿ ಎಂದು ಹೇಳುತ್ತಿದೆ.ಆದದರೆ ಇದರ ಹಿಂದೆ ದೊಡ್ಡ ಷಡ್ಯಂತ್ರವಿದ್ದು ದೇಶದಲ್ಲಿ ಯಾರು ಈ ಸರಕಾರವನ್ನು ಪ್ರಶ್ನಿಸುತ್ತಾರೊ,ಯಾರು ಪ್ರಗತಿಪರವಾಗಿ ಯೋಚಿಸುತ್ತಾರೊ ಅಂತವರನ್ನು ಕಾನೂನಿನ ನೆಪದಲ್ಲಿ ಜೈಲಿಗಟ್ಟು ಹುನ್ನಾರ ನಡೆಸಿದೆ ನಾವೆಲ್ಲರು ಈಗಲೆ ಎಚ್ಚೆತ್ತು ಇದರ ವಿರುಧ್ಧ ಉಗ್ರ ಹೋರಾಟ ನಡೆಸುವ ಅವಶ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಕಲಬುರ್ಗಿಯ ಬಾಬಾಖಾನ್,ಮೌಲಾನಾ ಜಾವೀದ್ ಸಾಬ್,ರಾಹುಲ್ ಹುಲಿಮನಿ,ಸಯ್ಯದ್ ಹದೀಸಾಬಾ ಮಾತನಾಡಿದರು.ಸಭೆಯಲ್ಲಿ ಸಜ್ಜಾದ್ ಸಾಬ್ ಇನಾಂದಾರ,ಖಾಜಿ ಗುಲಾಮ್ ರಸೂಲ್ ಸಾಬ್,ಅಬ್ದುಲ್ ಗಫೂರ ನಗನೂರಿ,ಶೇಖ್ ಮಹಿಬೂಬ ಒಂಟಿ, ಖಾಜಾ ಖಲೀಲಹ್ಮದ ಅಕೇರಿ,ಅಹ್ಮದ ಪಠಾಣ,ಸಜ್ಜು ಉಸ್ತಾದ ವಕೀಲ,ಇಕ್ಬಲ್ ಮುಫ್ತಿ ಒಚಿಟಿ,ಇಂತಿಯಾಜ್ ಗುತ್ತೇದಾರ್,ಮೂರ್ತಿ ಬೊಮ್ಮನಹಳ್ಳಿ,ಸಿದ್ದಯ್ಯಸ್ವಾಮಿ ಸ್ಥಾವರಮಠ,ಭಿಮರಾಯ ಸಿಂಧಗೇರಿ,ಖಾಲೀದ್ ಅಹ್ಮದ ತಾಳಿಕೋಟೆ ಸೇರಿದಂತೆ ಅನೇಕರಿದ್ದರು.ಇಕ್ಬಾಲ್ ಸಯ್ಯದ್ ಮುಫ್ತಿ ಒಂಟಿ ನಿರೂಪಿಸಿದರು.