ಬೆಳಗಾವಿ: ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸೀಟ್ ಬಂದರೆ ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಕೈ ಹಾಕುವುದು ನಿಶ್ಚಿತ ನಿಶ್ಚಿತ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಅವರು ಬೆಳಗಾವಿಯಲ್ಲಿ ಮಾತನಾಡಿ, ಬಿಜೆಪಿಗೆ 2014 ರಲ್ಲಿ ಬಂದ ಸಂಖ್ಯಾಬಲ ಬಿಜೆಪಿಗೆ ಬಂದ್ರೆ, ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ಮಾಡ್ತಾರೆ. 23 ರ ನಂತರ ಕೆಂಪುಗೂಟದ ಕಾರುಗಳಲ್ಲಿ ಓಡಾಡುತ್ತಿರುವವರು ಮಾಜಿಯಾಗಲಿದ್ದಾರೆ ಎಂದು ಕುಟುಕಿದ ಅವರು, ರಮೇಶ ಜಾರಕಿಹೊಳಿಗೆ ಕಾರುಗಳ ಮೇಲಿನ ಕೆಂಪು ದೀಪ ನಿಷೇಧವಾಗಿರೋದು ಗೊತ್ತಿಲ್ಲ ಅನಿಸುತ್ತೆ. ಅವನಿಗೆ ಏನೂ ಗೊತ್ತಿರೋದಿಲ್ಲ, ಗೊತ್ತಿಲ್ದೆ ಮಾತಾಡ್ತಾನೆ. ಅಧಿಕಾರ ಹೋದವರು ಮಾಜಿ ಆಗೇ ಆಗ್ತಾರೆ. ಮೇ 23 ಬಂದಾದ್ರೂ ಬರಲಿ ನೋಡೋಣ ಎಂದರು.
ಪ್ರಧಾನಿ ಮೋದಿ ವಿರುದ್ದ ಸತೀಶ್ ಜಾರಕಿಹೊಳಿ ಗರಂ:
ಪ್ರಧಾನಿ ಮೋದಿ ಎಲ್ಲ ಕಡೆ ಆಪರೇಷನ್ ಕಮಲ ಮಾಡ್ತಿದಾರೆ. ಇರೋ ಸರ್ಕಾರವನ್ನ ಅಸ್ಥಿರ ಮಾಡ್ತಿದಾರೆ. ಪ್ರಜಾಪ್ರಭುತ್ವದಲ್ಲಿ ಮೋದಿ ನಡೆ ಸರಿಯಲ್ಲ. ಮೋದಿ ಕಾಲದಲ್ಲಿ ಇದು ಕಾಮನ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ. ಅಲ್ಲಲ್ಲಿ ಅಸಮಾಧಾನ ಇದೆ. ಮುಂದಿನ ದಿನಗಳಲ್ಲಿ ಎಲ್ಲ ಸರಿಹೋಗಲಿದೆ. ಅದರಿಂದ ಸರ್ಕಾರಕ್ಕೆ ಏನೂ ಧಕ್ಕೆ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕೃಷ್ಣಾ ನದಿಗೆ ನೀರು ಬಿಡುವ ವಿಚಾರವಾಗಿ ಈಗಾಗಲೇ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದೆ. ಇಂದು ಅಥವಾ ನಾಳೆ ನೀರು ಬರುವ ವಿಶ್ವಾಸವಿದೆ ಎಂದರು.
ಡಿ.ಕೆ.ಶಿವಕುಮಾರ ಕುಂದಗೋಳ ಉಪ ಚುನಾವಣೆ ಉಸ್ತುವಾರಿ ವಹಿಸಿದ್ದಕ್ಕೆ ನನಗೆ ಅಸಮಾಧಾನವಿಲ್ಲ. ನಾನು ಆ ಬಗ್ಗೆ ಮಾತನಾಡೇ ಇಲ್ಲ. ಡಿಕೆಶಿ ಗೆ ಈಗ ಕನ್ವಿನೆನ್ಸ್ ಆಗಿದೆ ನಾನು ಮಾತನಾಡಿಲ್ಲ ಎಂದು ಸ್ಪಷ್ಟ ಪಡಿಸಿದರು.