ಸುರಪುರ: ನಗರದಲ್ಲಿನ ಬೀದಿ ಬದಿಯ ತರಕಾರಿ ಮಾರಾಟಗಾರರಿಗೆ ಜಾಗವಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಅವರಿಗೆ ಸ್ಥಳ ಒದಗಿಸಿಕೊಡುವಂತೆ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಆಗ್ರಹಿಸಿದರು.
ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಬಳಿಯ ರಸ್ತೆಯಲ್ಲಿ ತರಕಾರಿ ವ್ಯಾಪಾರಿಗಳೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿ,ತರಕಾರಿ ಮಾರುಕಟ್ಟೆ ಕಾಮಗಾರಿಗಾಗಿ ಎಲ್ಲವು ಕಿತ್ತಿ ಹಾಕಿ ತೆರವುಗೊಳಿಸಲಾಗಿದೆ.
ವೇಣುಗೋಪಾಲಸ್ವಾಮಿ ದೇವಸ್ಥಾನ ಬಳಿಯಲ್ಲಿ ಹಿಂದೆ ನಿರ್ಮಿಸಲಾದ ಮಾರುಕಕ್ಕೆ ಉದ್ಘಾಟನೆಯಾಗದೆ ಹಾಗೆ ಉಳಿದು ಹಾಳಾಗಿದೆ. ಈಗ ತರಕಾರಿ ಮಾರಟಗಾರರು ಜಾಗವಿಲ್ಲದೆ ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವಂತಾಗಿದೆ. ಅಲ್ಲಿಯೂ ಜಾಗವಿಲ್ಲದೆ ತೊಂದರೆ ಅನುಭವಿಸುತ್ತಿದ್ಧಾರೆ. ಅಲ್ಲದೆ ತರಕಾರಿಗಳಿಗೆ ಧೂಳು ಬಳಿದು ಜನರು ಅಂತಹ ತರಕಾರಿಯನ್ನೆ ತಿನ್ನುವಂತ ಸ್ಥಿತಿ ನಿರ್ಮಾಣವಾಗಿದೆ.ಆದ್ದರಿಂದ ಕೂಡಲೆ ತರಕಾರಿ ಮಾರಟಗಾರರಿಗೆ ಸ್ಥಳವನ್ನು ಒದಗಿಸಿಕೊಡುವಂತೆ ಆಗ್ರಹಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ನಗರಸಭೆ ಸಿರಸ್ತೆದಾರ ವೆಂಕಟೇಶ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ಶರಣಪ್ಪ ಪೊಲೀಸ್ ಪಾಟೀಲ,ದೇವಿಂದ್ರಪ್ಪ ಸೇರಿದಂತೆ ಅನೇಕ ಜನ ವ್ಯಾಪಾರಿಗಳಿದ್ದರು.