ಫೇಬ್ರವರಿ 16 ರಂದು ಬೆಂಗಳೂರಲ್ಲಿ ಅಸಂಖ್ಯ ಪ್ರಮಥ ಗಣಮೇಳ

0
183

ಸುರಪುರ: ಅಂದು ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಬೆಳಗಿ ಕಲ್ಯಾಣ ನಾಡ ಕಟ್ಟಿದ್ದರು,ಇಂದು ೨೧ ನೇ ಶತಮಾನವು ಬಸವಯುವವಾಗಿದೆ,ಲಂಡನ್ ನಗರದಲ್ಲಿ,ಭಾರತದ ಸಂಸತ್ ಬಳಿಯಲ್ಲಿ,ಆಸ್ಟ್ರೇಲಿಯಾ ಹೀಗೆ ಜಗತ್ತು ಇಂದು ಬಸವಣ್ಣನವರತ್ತ ತಿರುಗಿ ನೋಡುವಂತಾಗಿದೆ.ಥೇನ್ಸ್ ನದಿ ತಟದಲ್ಲಿ ಬಸವಣ್ಣನವರ ಮೂರ್ತಿ ಉದ್ಘಾಟನೆಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಸವಣ್ಣ ಪ್ರಜಾಪ್ರಭುತ್ವದ ಪಿತಾಮಹ ಎಂದಿದ್ದಾರೆ ಇದು ಬಸವಣ್ಣನ ಕುರಿತು ಜಗತ್ತಿಗೆ ತಿಳಿಸಿದ ಸಂದೇಶವಾಗಿದೆ ಎಂದು ದಾವಣಗೆರೆ ಮುರುಘಾ ಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿದರು.

ನಗರದ ತಿಮ್ಮಾಪುರದ ಖಾದಿ ಕೇಂದ್ರದ ಬಳಿಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಒಂಬೈನೂರು ವರ್ಷಗಳ ಹಿಂದೆ ಬಸವಣ್ಣನವರು ಕೊಟ್ಟ ಸಮಾನತೆಯ ತತ್ವವನ್ನು ಇಂದು ಎಲ್ಲರಲ್ಲಿ ಮೂಡಿಸಲು ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ನಾಡಿನ ಎಲ್ಲಾ ಬಸವ ಸಂಘಟನೆಗಳು ಮತ್ತು ಬಸವ ಕೇಂದ್ರಗಳ ಸಹಯೋಗದಲ್ಲಿ ಬೆಂಗಳೂರಿನ ತುಮಕೂರು ಮುಖ್ಯ ರಸ್ತೆಯ ನೈಸ್ ರೋಡ ಬಳಿಯ ನಂದಿ ಹೈಗ್ರೌಂಡ್ಸ್‌ನಲ್ಲಿ ಫೆಬ್ರವರಿ ೧೬ ನೇ ತಾರೀಖು ಅಸಂಖ್ಯ ಪ್ರಮಥ ಗಣಮೇಳವನ್ನು ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ ೮ ಗಂಟೆಗೆ ಶಿವಯೋಗ ಹಾಗು ೧೧ ಗಂಟೆಗೆ ಅಸಂಖ್ಯ ಪ್ರಮಥ ಗಣಮೇಳ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ನಾಡಿನ ಎಲ್ಲಾ ಪೂಜ್ಯ ಮಠಾಧೀಶರು ಹಾಗು ಹಿಂದು ಕ್ರೈಸ್ತ ಬೌಧ್ಧ ಮುಸ್ಲೀಂ ಹೀಗೆ ಸರ್ವ ಧರ್ಮಗಳ ಸ್ವಾಮೀಜಿಗಳು ಸಂತ ಮಹಾಂತರು ಭಾಗವಹಿಸಲಿದ್ದಾರೆ.ಆದ್ದರಿಂದ ಸುರಪುರ ತಾಲೂಕು ಮತ್ತು ಯಾದಗಿರಿ ಜಿಲ್ಲೆ ಹಾಗು ಕಲ್ಯಾಣ ಕರ್ನಾಟಕ ಭಾಗದ ಎಲ್ಲರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಭಾಗವಹಿಸಿ ಬ್ಯಾಡಗಿ ವಿರಕ್ತ ಮಠದ ಚೆನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ ಮಾತನಾಡಿ,೧೨ನೇ ಶತಮಾನದ ಅನುಭವ ಮಂಟಪದಲ್ಲಿ ಸರ್ವ ಕಾಯಕಗಳ ಶರಣರು ಭಾಗವಹಿಸುತ್ತಿದ್ದರು,ಅದೇ ಮಾದರಿಯಲ್ಲಿ ಇಂದು ಎಲ್ಲ ಸಮುದಾಯಗಳ ಜನತೆ ಒಂದುಗೂಡಿ ಕಲ್ಯಾಣ ರಾಜ್ಯ ನಿರ್ಮಾಣ ಮಾಡಬೇಕೆಂಬ ಆಶಯದೊಂದಿಗೆ ಪೂಜ್ಯರಾದ ಮುರುಘಾ ಶರಣರ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸವಾದಿ ಶರಣರ ಅಭಿಮಾನಿಗಳು ಅನುಯಾಯಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೈತ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ,ಸುರಪುರ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯ ಜನರು ಬರಲಿದ್ದೆವೆ,ಇಲ್ಲಿಯ ಯುವಕರಲ್ಲಿ ಬಸವಾದಿ ಶರಣರ ಒಲವು ಹೆಚ್ಚಿನದಾಗಿದ್ದು ಯುವಕರು ಮುಂದಾಳತ್ವದಲ್ಲಿ ನೂರಾರು ಸಂಖ್ಯೆಯ ಬಸವ ಭಕ್ತರು ಆಗಮಿಸುವುದಾಗಿ ತಿಳಿಸಿದರು.ನಂತರ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಉಪಾಧ್ಯಕ್ಷ ಮಂಜುನಾಥ ಜಾಲಹಳ್ಳಿ ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು,ವೇದಿಕೆ ಮೇಲೆ ತವಳಿ ಮುರುಘಾ ಮಠದ ಬಸವಲಿಂಗ ಮಹಾಸ್ವಾಮೀಜಿ,ಎಪಿಎಂಸಿ ಸದಸ್ಯ ಮಲ್ಲಣ್ಣ ಸಾಹು ಮುಧೋಳ,ಮಲ್ಲಣ್ಣ ಸಾಹು ಮುಧೋಳ,ಶಿವಲಿಂಗಪ್ಪ ಜೆ ಇದ್ದರು.ಶಿವಶರಣಪ್ಪ ಹೆಡಗಿನಾಳ,ವಿರೇಶ ನಿಷ್ಠಿ ದೇಶಮುಖ,ಜಗದೀಶ ಪಾಟೀಲ,ಶಿವರಾಜ ಕಲಕೇರಿ,ಶಿವರುದ್ರ ಉಳ್ಳಿ,ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ,ಮಲ್ಲು ಬಾದ್ಯಾಪುರ,ಸಿದ್ದು ಚೊಕ್ಕಾ,ಮಲ್ಲು ಸುಬೇದಾರ,ವಿರೇಶ ಹಳಿಮನಿ,ಪ್ರಕಾಶ,ಶಂಕ್ರಪ್ಪ ಬಸಣಗಾರ,ಗುರುಲಿಂಗಪ್ಪ ಖಾದಿ,ಮಲ್ಲಯ್ಯ ಸ್ವಾಮಿ,ಮಲ್ಲು ಹೂಗಾರ,ವಿರೇಶ ಪಟ್ಟಣ,ರುದ್ರಪ್ಪ ಕೆಂಭಾವಿ ಸೇರಿದಂತೆ ಅನೇಕರಿದ್ದರು.ಚನ್ನಮಲ್ಲಿಕಾರ್ಜುನ ಗುಂಡಾನೂರ ವಚನ ಗಾಯನ ಮಾಡಿದರು,ಚಂದ್ರು ಡೊಣೂರ ಸ್ವಾಗತಿಸಿದರು,ಪ್ರಕಾಶ ಅಂಗಡಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here