ರೈತ ದೇಶದ ಬೆನ್ನೆಲುಬು: ಬಿ.ಎಸ್. ಪಾಟೀಲ್

0
19

ಶಹಾಪುರ: ರೈತ ಈ ದೇಶದ ಬೆನ್ನೆಲುಬು ಈ ದೇಶಕ್ಕೆ ರೈತನ ಕೊಡುಗೆ ಅಪಾರವಾದದ್ದು ಹಾಗೂ ದೇಶದ ಅಭಿವೃದ್ಧಿಗೆ ರೈತರ ಶ್ರಮ ಬಹಳಷ್ಟು ಇದೆ ಎಂದು ಉಪ ಲೋಕಾಯುಕ್ತ ನಿವೃತ್ತ ನ್ಯಾಯಾಧೀಶರಾದ ಬಿ.ಎಸ್. ಪಾಟೀಲ್ ಹೇಳಿದರು.

ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಬಸನಗೌಡ ಪಾಟೀಲ್ ಅವರ ದ್ವಿತೀಯ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಭಾರತದ ಬಹುತೇಕ ಪ್ರತಿಶತ ೭೦ ‘/.ರಷ್ಟು ಹಳ್ಳಿಗಳಲ್ಲಿ ಕೃಷಿ ಆಧಾರಿತ ಬಡ ರೈತ ಕುಟುಂಬಗಳಿದ್ದು ಬರುವ ಕೃಷಿ ಆದಾಯ ಮೂಲದಿಂದ ಬದುಕುತ್ತಿದ್ದಾರೆ ಎಂದು ಹೇಳಿದರೂ ಅವರ ಶ್ರಮ ನಿಜಕ್ಕೂ ಶ್ಲಾಘನೀಯವಾದದ್ದು ಆದ್ದರಿಂದ ರೈತರಿಗೆ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು ವೇದಿಕೆಯ ಮೇಲೆ ವಿಶ್ವನಾಥ ರೆಡ್ಡಿ ದರ್ಶನಾಪುರ, ಡಾ.ಚಂದ್ರಶೇಖರ ಸುಬೇದಾರ್ ನಗರಸಭೆ ಆಯುಕ್ತರಾದ ಬಸವರಾಜ ಶಿವಪೂಜೆ, ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಲೋಕೇಶ್ ಹಾಗೂ ಡಾ. ಮಲ್ಲನಗೌಡ ಉಕ್ಕಿನಾಳ ಹಾಗೂ ಇತರರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here