ಕಲಬುರಗಿ,ಆಳಂದ; ತಾಲೂಕಿನ ನಿಂಬರ್ಗಾ ಸಮೀಪದ ಹಿತ್ತಲಶಿರೂರ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿ ದುಷ್ಕೃತ್ಯ ಎಸೆಗಿದ್ದಾರೆ.
ರಾತ್ರೋ ರಾತ್ರಿ ಈ ಕೃತ್ಯ ನಡೆಸಿದ್ದು, ಭಾವಚಿತ್ರಕ್ಕೆ ಸಗಣಿ ಮತ್ತು ಚಪ್ಪಲಿ ಹಾಕಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸಂವಿಧಾನ ಜಾರಿಗೆಯಾದ ಶುಭದಿನದಂದು ಸಂವಿಧಾನ ಶಿಲ್ಪಿಗೆ ಅವಹೇಳನ ಮಾಡಿದ್ದಾರೆ. ಈ ಕುರಿತು ಗ್ರಾಮಸ್ಥ ಅಂಬರಾಯ ಧೂಳಪ್ಪ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೇಚ್ಚರ ವಹಿಸಿದ್ದಾರೆ.
ದಲಿತ ಸೇನೆ ವತಿಯಿಂದ ಪ್ರತಿಭಟನೆ ನಡೆಯುತ್ತಿದ್ದು, ಸ್ಥಳಕ್ಕೆ ನಿಂಬರ್ಗಾ ಪಿಎಸ್ಐ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.