ಸರಕಾರಿ ಶಾಲೆಯ ಅದ್ಧೂರಿ ಗಣರಾಜ್ಯೋತ್ಸವ ಆಚರಣೆ: ಚಿಣ್ಣರಿಂದ ಸಂಸ್ಕೃತಿಕ ಮೆರಗು

0
124

ಕಲಬುರಗಿ; ಜಿಲ್ಲೆಯ ನಾಗೂರುಗ್ರಾಮದ ಸರಕಾರಿ ಹಿರಿಯ ಪ್ರಥಾಮಿಕ ಪ್ರೌಢ ಶಾಲೆ ಹಾಗೂ ಉರ್ದು ಪ್ರಥಾಮಿಕ ಶಾಲೆಯಲ್ಲಿ 71ನೇ ಗಣರಾಜ್ಯೋತ್ಸವದ ನಿಮಿತ್ತ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಡಾ.ಶಾಂತಾಬಾಯಿ, ತಾ.ಪಂ ಸದಸ್ಯ ಪ್ರವೀಣ ಅಡವಿಕರ, ಗ್ರಾ.ಪಂ ಅಧ್ಯಕ್ಷ ಶರಣ ಗೌಡ ಪಾಟೀಲ ನಾಗೂರ, ಸಿ.ಆರ್.ಪಿ, ಪಂಡಿತ ಬಿರಾದಾರ, ಗ್ರಾ.ಪಂ ಮಾಜಿ ಅಧ್ಯಕ್ಷ ಕೇದರನಾಥ, ಎಸ್.ಡಿ.ಎಮ್.ಸಿ ಸದಸ್ಯ ವಿಜಯಕುಮಾರ, ಕಲಕೋರಿ, ಗ್ರಾ.ಪಂ ಸದಸ್ಯ ಶರಣು ಬೆಳ್ಳಿ, ಎಸ್.ಡಿ.ಎಮ್.ಸಿ ಅಧ್ಯಕ್ಷರು, ಶಿಕ್ಷಕರು ಹಾಗೂ ಶಾಲೆಯ ಮುಖ್ಯಪಾಧ್ಯಾಯರು ಇದ್ದರು.

Contact Your\'s Advertisement; 9902492681

ಹಿರಿಯ ಪ್ರಥಾಮಿಕ ಶಾಲೆ ಮುಖ್ಯಗುರುಗಳಾದ ವೆಂಕಟ್ ಜೋಶಿ ಪ್ರಸ್ತಾವಿಕ ಮಾತನಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಬಸವರಾಜ ಸಿಂದನಕೇರಿ ಸ್ವಾಗತಿಸಿದರು. ಶಿಕ್ಷಕಿ ರಾಜೇಶ್ವರಿ,ಜಲಜಾಕ್ಷಿ, ರಾಜೇಶ್ವರಿ ಕಾರ್ಯಕ್ರಮ ಸಂಚಾಲನೆ ವಹಿಸಿದ್ದು, ಉರ್ದು ಶಾಲೆಯ ಮುಖ್ಯಪಾಧ್ಯಾಯ ಗೇಸುದರಾಜ ವಂದಿಸಿದರು.

ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನಿಸಿ ನಂತರ ಚಿಣ್ಣರಿಂದ ಸಂಸ್ಕೃತಿ ಕಾರ್ಯಕ್ರಮದ ಮೆರಗು ಆರಂಭವಾಗಿ ಪ್ರೇಕ್ಷಕರ ಮನರಂಜಿಸಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here