NRC, CAA ಕಾಯಿದೆಗಳು ಹಿಂದೂಗಳಿಗೂ ಹಾನಿ ಉಂಟು ಮಾಡಲಿದೆ: ಶಾಸಕ ಖರ್ಗೆ

0
38

ಕಲಬುರಗಿ: ರಾಜ್ಯದಲ್ಲಿ ಬಹುಮತದ ಸರಕಾರವೇನೋ ಇದೆ. ಒಬ್ಬರು ಸಿಎಂ ಹಾಗೂ ಮೂವರು ಡಿಸಿಎಂ ಇದಾರೆ ಅವರಲ್ಲಿ ಒಬ್ಬರು ಶಾಸಕರೇ ಆಗಿಲ್ಲ. ಈಗ ಪರಿಷತ್ ನಲ್ಲಿ ಸದಸ್ಯರಾಗುವ ಯೋಚನೆ ಮಾಡಿದ್ದಾರೆ ಇದನ್ನು ನೋಡಿದರೆ ಇದು ಯಾವುದೇ ನೈತಿಕತೆಯುಳ್ಳ ಸರಕಾರ ಎನಿಸುವುದಿಲ್ಲ ಎಂದು ಶಾಸಕರಾದ ಸನ್ಮಾನ್ಯ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ನಾಲವಾರ ಹೊಸ ಬಡಾವಣೆ, ಗ್ರಾಮ ಪ್ರದೇಶದಲ್ಲಿ ಸುಮಾರು 90 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವ ಸಿಸಿ ರಸ್ತೆ, ಒಳಚರಂಡಿ ಹಾಗೂ ಮತ್ತಿತರ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ‌ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಸಾವಿರಾರು ಕೋಟಿ ಖರ್ಚು ಮಾಡಿ‌ ಅನೈತಿಕ‌ ಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಸರಕಾರ ಜನರಿಗೆ ಹೇಗೆ ಸ್ಪಂದಿಸುತ್ತದೆ ? ಈ ಸರಕಾರ ಕಲ್ಯಾಣ ಕರ್ನಾಟಕ ಅದರಲ್ಲೂ ಕಲಬುರಗಿ ಬಗ್ಗೆ ಹೆಚ್ಚಿನ ಕಾಳಜಿ ಇಲ್ಲ. ಜಿಲ್ಲೆಯ ಜನರ ಸಮಸ್ಯೆ ಬಗೆಹರಿಸಬೇಕಾದ ಜನರು ಈಗ ಬಾಗಲಕೋಟೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕುಟುಕಿದರು‌.

ಜಿಲ್ಲೆಯಲ್ಲಿ ರೈತರು ಬಂಪರ್ ತೊಗರಿ ಬೆಳೆ ಬೆಳೆದಿದ್ದಾರೆ. ಆದರೆ‌ ಸರಕಾರ ಕೇವಲ ಹತ್ತು ಕ್ವಿಂಟಾಲ್ ಮಾತ್ರ ಖರೀದಿಸುತ್ತಿದ್ದಾರೆ. ಹೆಚ್ಚುವರಿ ಕ್ವಿಂಟಾಲ್ ಏರಿಸುವಂತೆ ಒತ್ತಾಯಿಸಲು ಜನರು ಎಲ್ಲಿಗೆ ಹೋಗಬೇಕು. ಹೈ ಕ ವನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸಿರುವುದನ್ನು ಬಿಟ್ಟರೇ ಈ ಮುಂಚಿನ ವಾರ್ಷಿಕ

ರೂ 1500 ಕೋಟಿಗೆ ನಯಾಪೈಸೆ ಅನುದಾನ ಹೆಚ್ಚಿಸಿಲ್ಲ ಎಂದು ಟೀಕಿಸಿ, ಕೇವಲ ಹೆಸರು ಬದಲಾಯಿಸಿರುವುದಕ್ಕೇ ದೊಡ್ಡ ದೊಡ್ಡ ಕಾರ್ಯಕ್ರಮಗಳು ಬೇರೆ ಮಾಡಿದ್ದಾರೆ ಎಂದರು. ಅತಿವೃಷ್ಟಿ ಅನಾವೃಷ್ಟಿಗೆ ಒಟ್ಟು 38000 ಪರಿಹಾರದ ಬೇಡಿಕೆ ಇದ್ದರೆ ಕೇಂದ್ರ ಕೇವಲ 1300 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ನಮ್ಮ ಸರಕಾರ ಯೋಜನೆಗಳನ್ನು ಮುಂದುವರೆಸದೆ, ನಿಗದಿಯಾಗಿರುವ ಬಜೆಟ್ ನ್ನು ತಡೆಹಿಡಿದಿದ್ದಾರೆ. ಯಾಕೆ ಸರಕಾರದವರಿಗೆ ಚಿತ್ತಾಪುರದ ಮೇಲೆ‌ ಕೋಪ? ನಮಗೇಗೆ ಅನ್ಯಾಯ ಮಾಡಲಾಗಿದೆ‌ ? ಎಂದು ಪ್ರಶ್ನಿಸಿದರು.

ಕಲಬುರಗಿ 100 ಕೋಟಿ, ಚಿಂಚೋಳಿ 30ಕೋಟಿ, ವಾಡಿ ಚಿತ್ತಾಪುರಕ್ಕೆ 100 ಕೋಟಿ, ಕಲಬುರಗಿ‌ ದಕ್ಷಿಣ- ಗ್ರಾಮೀಣ, ಆಳಂದ್ ಹಾಗೂ ಗುರುಮಠಕಲ್ ಕ್ಷೇತ್ರಕ್ಕೂ ನಾನು ಸಚಿವನಾಗಿದ್ದಾಗ ಸಮಾಜಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡಿದ್ದೆ. ನಾವೇನು ರಾಜಕೀಯ ಮಾಡಿದ್ದೇವಾ?. ಚಿಂಚೋಳಿಗೆ ಬಿಡುಗಡೆ ಮಾಡಿರುವ ರೂ 30 ಕೋಟಿಯಲ್ಲಿ ರೂ 20 ಕೋಟಿಯನ್ನ ಬಿಜೆಪಿ ಸರಕಾರ ತಡೆ‌ಹಿಡಿದಿದೆ ಈಗ ಉಮೇಶ್ ಜಾಧವ್ ಮತ್ತೆ ಬಿಜೆಪಿ ಬಿಟ್ಟು ಕಾಂಗ್ರೇಸ್ಗೆ ಬರ್ತಾರ? ಎಂದರು.

ಈ ಸರಕಾರದಲ್ಲಿ ಯಾವುದು ಸರಿಯಿಲ್ಲ ಅಂದರೂ ಕೂಡಾ ವರ್ಗಾವಣೆ ಧಂದೆ ಜೋರು ನಡೆದಿದೆ. ಪೊಲೀಸ್ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕೂಡಾ ವರ್ಗಾ ಮಾಡಿದ್ದಾರೆ. ಅವರೆಲ್ಲ ಕೋರ್ಟಿಗೆ ಹೋಗಿ ವಾಪಸ್ ಬಂದಿದ್ದಾರೆ.ಇದನ್ನು ನೋಡಿದರೆ ಪಿಸಿಯಿಂದ ಹಿಡಿದು ಡಿಸಿವರೆಗೂ ಎಲ್ಲ ಹಂತದ ಅಧಿಕಾರಿಗಳನ್ನು ವರ್ಗಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರಕಾರದ NRC, CAA ಕಾಯಿದೆಗಳು ಕೇವಲ ಮುಸಲ್ಮಾನರಿಗೆ ಮಾತ್ರವಲ್ಲ ಹಿಂದೂಗಳಿಗೂ ಕೂಡಾ ಹಾನಿ ಉಂಟು ಮಾಡಲಿದೆ ಎಂದ ಶಾಸಕರು ಜನನ ಪ್ರಮಾಣ ಪತ್ರವನ್ನು ಕೇಳಿದರೆ ಅಕ್ಷರಸ್ಥರಲ್ಲದೇ ಅನಕ್ಷರಸ್ಥರು ಎಲ್ಲಿಂದ ತರಬೇಕು.‌  CAA ಉದ್ಯೋಗ ಸೃಷ್ಠಿ ಮಾಡ್ತದಾ? ಆರ್ಥಿಕ‌ಸ್ಥಿತಿ‌ ಸುಧಾರಿಸುತ್ತಾ? ಎಂದು ಪ್ರಶ್ನಿಸಿದ ಅವರು ಸಿಎಎ ಬಗ್ಗೆ ಬಿಜೆಪಿಯ ಕೆಲ ನಾಯಕರು ದೊಡ್ಡ‌ದೊಡ್ಡ ಭಾಷಣ ಮಾಡಿ ಹೋಗಿದ್ದಾರೆ. ಧೈರ್ಯವಿದ್ದರೆ ಅವರೆಲ್ಲ ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ ನಾನು ಸಿಎಎ ಎಂದರೆ ಏನು ಅಂತ ಹೇಳುತ್ತೇನೆ ಎಂದು ಸವಾಲಾಕಿದರು.

ವೇದಿಕೆಯ ಮೇಲೆ ಭೀಮಣ್ಣ ಸಾಲಿ, ಜಗನಗೌಡ ಪೊಲೀಸ್ ಪಾಟೀಲ್, ಜಗದೀಶ್ ಸಿಂಧೆ,ಶಿವರೆಡ್ಡಿ ಗೌಡ, ಮಲ್ಲನಾಥ ಪಾಟೀಲ್, ರಸೂಲ್‌ಸಾಬ್,‌ಸಲೀಂ, ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here