ಮೌಢ್ಯದ ವಿರುದ್ಧ ಸಿಡಿದೆದ್ದ ಅಂಬಿಗರ ಚೌಡಯ್ಯ: ಡಾ. ಮೋನಪ್ಪ ಶಿರವಾಳ.

0
34

ಶಹಾಪುರ: ಸಮಾಜಕ್ಕೆ ಅಂಟಿಕೊಂಡಿರುವ ಮೌಢ್ಯ ಕಂದಾಚಾರದ ವಿರುದ್ಧ ಸಿಡಿದೆದ್ದು ಅವುಗಳ ವಿರುದ್ಧ ವಚನಗಳು ಹಾಗೂ ವೈಜ್ಞಾನಿಕತೆಯ ನೆಲೆಗಟ್ಟಿನಲ್ಲಿ ಮೂಲಕ ಜನಸಾಮಾನ್ಯರಲ್ಲಿ ಅರಿವು ಮೂಡಿಸಿದ ಮಹಾನ್ ಶರಣ ಅಂಬಿಗರ ಚೌಡಯ್ಯ ಎಂದು ಖ್ಯಾತ ಸಂಶೋಧಕ ಸಾಹಿತಿ ಡಾ.ಮೊನಪ್ಪ ಶಿರವಾಳ ಹೇಳಿದರು.

ಬಸವಮಾರ್ಗ ಪ್ರತಿಷ್ಠಾನ ಹಾಗೂ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಬಸವ ಬೆಳಕು ೯೫ ನೇ ಕಾರ್ಯಕ್ರಮದಲ್ಲಿ ಅನುಭವಗಳನ್ನು ಹಂಚಿಕೊಂಡರು. ಅಂದಿನ ಶರಣರು ಕಾಯಕ ತತ್ತ್ವ ನಿಷ್ಠೆ ಎಲ್ಲವುಗಳನ್ನು ಮೈಗೂಡಿಸಿಕೊಂಡು ಬದುಕಿ ಇತರರಿಗೂ ಮಾರ್ಗದರ್ಶಕರಾಗಿದ್ದರು ಎಂದು ಅವರನ್ನು ಬಣ್ಣಿಸಿದರು.

Contact Your\'s Advertisement; 9902492681

ಈ ಸಮಾರಂಭವನ್ನು ದಲಿತ ಮುಖಂಡ ರಾಯಣ್ಣ ಸಾಲಿಮನಿ ಉದ್ಘಾಟಿಸಿದರು ಜೆಡಿಎಸ್ ಮುಖಂಡರಾದ ಬಸವರಾಜ ಅರುಣಿ ಅಧ್ಯಕ್ಷತೆ ವಹಿಸಿದ್ದರು. ರ್ಯಕ್ರಮಕ್ಕಿಂತ ಪ್ರಾರಂಭದಲ್ಲಿ ಮಕ್ಕಳಿಂದ ವಚನ ಗಾಯನ ಏರ್ಪಡಿಸಲಾಗಿತ್ತು ಜೊತೆಗೆ ಮುಡಬೂಳ ಗ್ರಾಮದ ಶರಣ ಕಲಾವಿದರು ಶಿಶುನಾಳ ಶರೀಫರ ತತ್ವಪದಗಳನ್ನು ಹಾಡಿದರು.

ಬಸವರಾಜ ಸಿನ್ನೂರು ಸ್ವಾಗತಿಸಿದರು ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ವಿಶ್ವರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕ ನುಡಿಗಳನ್ನಾಡಿದರು ಶಿವಣ್ಣ ಇಜೇರಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here