ಕಲಬುರಗಿ: ಪಬ್ಜಿ ಅಂತಹ ಗೇಮ್ ಸಹ ಬಂದು ಮಕ್ಕಳು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬರ್ತಿದ್ದು, ಸಂಜೆ ಟಿವಿ ನೋಡೋದಿಲ್ಲ, ಓದುವಾಗ ಬಳಿ ಕೂತ್ಕೋತಾರೆ, ಮೊಬೈಲ್ ಫ್ರೀ ಟೈಂ ಇರಬೇಕು. ನಿತ್ಯ ಕುಟುಂಬದ ಜೊತೆ ಸಂತಸದಿಂದ ಕಳೆಯಬೇಕು ಅಂತಹ ವಾತಾವತಣ ಸೃಷ್ಟಿಯಾಗ್ತಿದ್ದು, ಮೊಬೈಲ್ ಡಿ ಆಡಿಕ್ಷನ್ ಬಗ್ಗೆ ನಿಮಾನ್ಸ ಸಹ ಗಂಭೀರವಾಗಿ ಯತ್ನಿಸುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ ಆತಂಕ ವ್ಯಕ್ತಪಡಿಸಿದರು.
ಇಂದು ನಗರದಲ್ಲಿ ಮಾಧ್ಯರೊಂದಿಗೆ ಮಾತನಾಡಿ, ಮೊಬೈಲ್ ಬಳಕೆಗೆ ಕಡಿವಾಡ ವಿಚಾರದಲ್ಲಿ ಶಾಲೆ ಮತ್ತು ಮನೆಗಳಲ್ಲಿ ದೊಡ್ಡವರು ಮೇಲ್ಪಂತಿ ಆಗಬೇಕು, ಮೊಬೈಲ್ ನಮ್ಮ ಕಂಟ್ರೋಲ್ ಇರಬೇಕು, ನಾವು ಮೊಬೈಲ್ ಕಂಟ್ರೋಲ್ನಲ್ಲಿ ಇರಬಾರದು.ಈ ದಿಕ್ಕಿನಲ್ಲಿ ಹೆಚ್ವು ಪ್ರಯತ್ನ ಮಾಡುತ್ತಿದ್ದೆವೆ ಎಂದರು.
ಬ್ಯಾಗ್ ಲೆಸ್ ಡೇ: ಮುಂದಿನ ಶೈಕ್ಷಣಿಕ ವರ್ಷದಿಂದ ಶನಿವಾರ ಬ್ಯಾಗಲೆಸ್ ಡೆ. ಅಂದು ಪಾಠ ಇರೋದಿಲ್ಲ.. ಕಥೆ ಇತರ ಮೂಲಕ ಪಾಠ, ಮೌಲ್ಯ ತುಂಬಿಸಲು ಯತ್ನಚರ್ಚೆಯಲ್ಲಿದೆ. ಎಲ್ಲಾ ಶನಿವಾರ ಅಥವಾ ಎರಡು ಶನಿವಾರ ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ, ಶೈಕ್ಷಣಿಕ ವರ್ಷ ಬಂದಾಗ ಘೋಷಿಸ್ತೆವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪಕ್ಕೆಲುಬು ಪ್ರಕರಣ ತೀವ್ರ ಬೇಸರ ತರುವ ಸಂಗತಿ ಪಕ್ಕೆಲುಬು ಪ್ರಕರಣ ಪುಡಿಒಗರೆ, ನಪುಂಸಕ, ನಾಲ್ಕೆ ಕ್ಲಾಸ್ ಮಗು ಕ್ಲಾಸ್ ಗೆ ಬರ್ತಿಲ್ಲ ಅಂತ ಬಾರಕೋಲ್ ನಿಂದ ಹೊಡೆದ್ರು ರೆಕಾರ್ಡ ಮಾಡಿಕೊಂಡಿದ್ದಾರೆ. ಮಕ್ಕಳಿಗೆ ಅಪಹಾಸ್ಯ ಮಾಡೋದು ಸೋಷಿಯಲ್ ಮೀಡಿಯಾಗೆ ಬಿಡೋದು ಸಹಿಸೊಲ್ಲ ಎಂದು ಕಿವಿಮಾತು ಹೇಳಿ, ಶಾಲಾ ಅವಧಿಯಲ್ಲಿ ಮೊಬೈಲ್ ಬಳಕೆ ಶೈಕ್ಷಣಿಕ ಕೆಲಸ ಬಿಟ್ಟು ಬಳಕೆ ಬೇಡ ಕಟ್ಟು ನಿಟ್ಟಿನ ಆದೇಶ ಮಾಡಿದ್ದೇವೆ ಎಂದು ತಿಳಿಸಿದರು.
ಪಕ್ಲೆಲುಬು ಖ್ಯಾತಿಯ ಮೇಷ್ಟ್ರು ನನ್ನ ಬಳಿ ಬಂದಿದ್ರು, ವಿಡಿಯೋ ಮಾಡಿಕೊಂಡ ಬಗ್ಗೆ ಸಮರ್ಪಕ ಉತ್ತರ ಕೊಟ್ಟಿಲ್ಲ, ಇದಕ್ಕೆ ಇತಿಶ್ರೀ ಹಾಡಲೇಬೆಕು, ಎಲ್ಲರೂ ಸೇರಿ ಗಂಭೀರವಾಗಿ ಪ್ರಯತ್ನಿಸಬೇಕಾಗಿದ್ದು, 7 ನೇ ತರಗತಿ ಪರೀಕ್ಷೆ ಮೌಲ್ಯಾಂಕನ ಪರೀಕ್ಷೆ ಮಾಡಬೇಕು ಅಂತಿದ್ದಿವಿ, ಬೆಳಗಾವಿ ಜಿಲ್ಲೆಯವರು ಮಾದರಿ ಮಾಡಿದ್ದಾರೆ, ಶೈಕ್ಷಣಿಕ ಜಿಲ್ಲೆ ಬೆಳಗಾವಿ ಮತ್ತು ತುಮಕೂರು ಎರಡು ಜಿಲ್ಲೆಗಳಿಗೆ ಮುಂದಿನ ಶೈಕ್ಷಣಿಕ ಅವಧಿ ಹೊತ್ತಿಗೆ ಯೋಚಿಸಿ ನಿರ್ಣಯ ತಗೋತಿವಿ ಎಂದರು.
ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಸಿದ ಸಚಿವರು ನಿಮ್ಮಂಥವರ ಬಗ್ಗೆ ಮಾತನಾಡುತ್ತೆನೆ ದೊಡ್ಡವರ ಬಗ್ಗೆ ಮಾತನಾಡಲಾರೆ. ಕ್ಯಾಬಿನೇಟ್ ವಿಸ್ತರಣೆ ಸಿಎಂಗೆ ಕೇಳಬೇಕು ನನಗಲ್ಲ ಎಂದು ನೂನುಚಿಕೊಂಡರು.