ಕಲಬುರಗಿ: ಫೆ. ೫, ೬. ಮತ್ತು ೭ ರಂದು ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ತಾರುತುರಿಯಲ್ಲಿ ಆಯೋಜಿಸಲಾಗುತ್ತಿದ್ದು, ಈ ಭಾಗದ ಹೋರಾಟಗಾರರನ್ನು ಕಡೆಗಣಿಸಲಾಗುತ್ತಿದೆ. ಪರಿಷತ್ತನ ಅಧ್ಯಕ್ಷರುಗಳ ವಿರುದ್ಧ ಉದ್ಘಾಟನ ಸಮಾರಂಭದಲ್ಲಿ ಕಪ್ಪು ಪಟ್ಟಿ ಪ್ರದರ್ಶನ ಮಾಡಲಾಗುವದು ಎಂದು ಜಿಲ್ಲಾ ಪಂಚಾಯತನ ಮಾಜಿ ಸದಸ್ಯ ಗುರುಶಾಂತ ಪಟ್ಟೇದಾರ ಅಸಮದಾನ ಹೊರಹಾಕಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಧಿಕಾರ ಅವಧಿಯನ್ನು ಮುಗಿದರೂ ಪರಿಷತ್ತನ ರಾಜ್ಯಾಧ್ಯಕ್ಷರಾದ ಡಾ. ಮನು ಬಳಿಗಾರ ಅವರು ಬೈಲಾಗೆ ತಿದ್ದುಪಡಿ ತಂದು ಅವಧಿಯನ್ನು ಮೂರು ವರ್ಷದಿಂದ ಐದು ವರ್ಷಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಜಿಲ್ಲಾ ಅಧ್ಯಕ್ಷರಾದ್ ವೀರಭದ್ರ ಸಿಂಪಿಯವರು ತಮ್ಮ ಇತಿ ಮಿತಿಯಲ್ಲಿ ಕೆಲಸ ಮಾಡಬೇಕು ಆದರೆ ಎಲ್ಲವೂ ನನ್ನಿಂದಲೇ ಆಗಬೇಕು ಎನ್ನುವದು ಸರಿಯಲ್ಲ ಎಲ್ಲರನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಅಸಮಧಾನ ವ್ಯಕ್ತ ಪಡಿಸಿದರು.
ಸಂವಿಧಾನದ ಕಲಂಗೆ ೩೭೧ ತಿದ್ದುಪಡಿಮಾಡಬೇಕು ಎಂದು ಮಾಜಿ ಸಚಿವರಾದ ದಿ. ವೈಜನಾಥ ಪಾಟೀಲ ಹೋರಾಟ ಆರಂಭಿಸಿದರು. ಸ್ವಾತಂತ್ರ್ಯ ಹೋರಾಟಗಾರಾದ ವಿದ್ಯಾಧರ ಗುರುಜಿ ಸೇರಿದಂತೆ ಅನೇಕರ ಕುರಿತು ವಿಚಾರ ಗೋಷ್ಠಿಗಳನ್ನು ಆಯೋಜಿಸಬೇಕಿತ್ತು. ಕೇವಲ ದ್ವಾರಕ್ಕೆ ಹಸರು ಹಾಕಿದರೆ ಏನು ಪ್ರಯೋಜನ ಬದಲಿಗೆ ಅವರ ಹೋರಾಟಗಳ ಕುರಿತು ಯುವ ಪೀಳಿಗೆಗೆ ತಿಳಿಸಬೇಕು ಎಂದರು.
ಸಮ್ಮೇಳನದ ದಿನದಂದು ವೇದಿಕೆ ಮುಂಬಾಗದಲ್ಲಿ ಕಪ್ಪು ಭಾವುಟ ಅಥವಾ ಕಪ್ಪು ಪಟ್ಟಿ ಪ್ರದರ್ಶನ ಮಾಡಲು ಸಿದ್ದರಾಗಿದ್ದೇವೆ. ಒಂದ ವೇಳೆ ಎಲ್ಲರನ್ನು ಗಣನೆಗೆ ತೆಗೆದುಕೊಂಡು ಹೋದರೆ ಮಾತ್ರ ನಮ್ಮ ಹೋರಾಟ ಹಿಂದಕ್ಕೆ ಪಡೆಯಬಹುದು ಇಲ್ಲವಾದಲ್ಲಿ ಹೋರಾಟ ಅನಿಯವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸೂರ್ಯಕಾಂತ, ಮಹಾದೇವ ನಾಗನಳ್ಳಿ, ದಿಗಂಬರ್ ಕಾಂಬಳೆ, ಶಿವಮೂರ್ತಿ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.