ಕಲಬುರಿಗಿ: ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಸತ್ಯಾಸತ್ಯತೆ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಲು ರಾಜ್ಯ ಸಭಾ ಸಂಸದರಾದ ಸುದಾಂಶು ತ್ರಿವೇದಿ ಅವರು ಜ. ೨೯ ರಂದು ನಗರಕ್ಕೆ ಆಗಮಿಸಲಿದ್ದಾರೆ ಎಂದು ವಿಶ್ವಹಿಂದು ಪರಿಷತ್ತನ ಜಿಲ್ಲಾ ಅಧ್ಯಕ್ಷ ಸುಭಾಷ ಕಾಂಬಳೆ ಹೇಳಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಸಂಜೆ ೬ ಗಂಟೆಗೆ ನಗರದ ರೋಟರಿ ಕ್ಲಬ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುವರು.
ಮುಖ್ಯ ಅತಿಥಿಗಳಾಗಿ ರಾಜಾಸ್ಥಾನ ಕ್ಷೇತ್ರೀಯ ಸಂಘಟಕ ಗೋಪಾಲ ಅವರು ಆಗಮಿಸುವರು ಎಂದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಲಿಂಗರಾಜಪ್ಪ ಅಪ್ಪಾ, ಶೇಷಾದ್ರಿ ಕುಲಕರ್ಣಿ ಹಾಗೂ ಇತರರು ಉಪಸ್ಥಿತರಿದ್ದರು.