ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರುವುದು ಸರಿಯಲ್ಲ: ಶೈಲಜಾ

0
37

ಕಲಬುರಗಿ: ನಗರದ ಹೀರಾಪೂರದಲ್ಲಿ ಪ್ರಜ್ಞಾ ಯುವಕ ಸಂಘ ಹೀರಾಪೂರ ವತಿಯಿಂದ ನೂತನ ಸಮುದಾಯ ಭವನದಲ್ಲಿ ೭೦ನೇ ಗಣರಾಜ್ಯೋತ್ಸವವನ್ನು ಭಾರತೀಯ ಸಂವಿಧಾನ ಜಾರಿಯಾದ ದಿನದ ಅಂಗವಾಗಿ ಎಸ್ ಎಸ್ ಎಲ್ ಸಿ, ದ್ವೀತಿಯ ಪಿ ಯು ಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾಂಭ ಹಮ್ಮಿಕೊಳ್ಳಲಾಗಿತ್ತು.

ಡಾ ಬಿ ಆರ್ ಅಂಬೇಡ್ಕರ ರವರ ಮತ್ತು ಸಂವಿಧಾನ ಪ್ರಸ್ಥಾವನೆ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಸಮಾರಂಭವನ್ನು ಉದ್ಘಾಟಿಸಿದ ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳಾದ ಎಮ್.ವಿ ಶೈಲಜಾ ಮಾತನಾಡುತ್ತ ಪಾಲಕರು ತಮ್ಮ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ರೀತಿಯ ನಿರ್ಬಂಧ ಹೇರುವುದು ಸರಿಯಲ್ಲ. ಮಕ್ಕಳಿಗೆ ಬಲವಂತವಾಗಿ ಓದಿಸುವುದು ಅಥವಾ ಆದೇಶ ಮಾಡುವುದರಿಂದ ಮಕ್ಕಳಲ್ಲಿ ಭಯ ಶುರುವಾಗಿ ಮಾನಸಿಕ ನೆಮ್ಮದಿ ಕಳೆದುಕೊಳ್ಲುತ್ತಾರೆ. ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳ್ಳಲ್ಲಿ ಶೈಕ್ಷಣಿಕ ಗುಣಮಟ್ಟ ವೃದ್ಧಿಯಾಗುತ್ತೆಂದು ಹೇಳುತ್ತಾ ಮಕ್ಕಳು ಮೊಬೈಲ ಬಳಕೆಯಿಂದ ದೂರ ಉಳಿದರೆ ಮಾತ್ರ ಅವರ ಭವಿಷ್ಯಕ್ಕೆ ಉಳಿಗಾಲವಿದೆ ಎಂದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಶಿಕ್ಷಣ ಇಳಾಖೆ ಉಪನಿರ್ದೇಶಕರಾದ ಶಿವಶರಣಪ್ಪಾ ಮೂಲೆಗಾಂವ ಮಾತನಾಡುತ್ತ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ಅರ್ಧದಲ್ಲೆ ವಿದ್ಯಾಭ್ಯಾಸ ಮೊಟಕುಗೊಳಿಸಿ ದುಡಿಯುತ್ತಿರುವುದು ನಮ್ಮ ದುರಂತವಾಗಿದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುವುದು ನಮ್ಮಂತಹ ಉನ್ನತ ಸರಕಾರಿ ಹುದ್ದೆಯಲ್ಲಿರುವವರ ಜವಾಬ್ದಾರಿಯಾಗಿದೆ.ಬಡತನದಿಂದ ಎಪ್ಷೋ ಪ್ರತಿಭೆಗಳು ಕಮರಿ ಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸುತ್ತ, ವೈಚಾರಿಕ ನೆಲೆಗಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಸಿಕೊಳ್ಲ ಬೇಕು ವಿನಹ ಬಾಹ್ಯ ಶಕ್ತಿಗಳಾದ ತಂತ್ರ-ಮಂತ್ರಗಳಿಗೆ ಎಂದೂ ಮೊರೆ ಹೋಗ ಕೂಡದೆಂದು ಕಿವಿ ಮಾತು ಹೇಳಿದರು.

ಯುವ ಚಿಂತಕರಾದ ಪಂಡಿತ ಕಟ್ಟಿಮನಿ ಸಂವಿಧಾನ ಮತ್ತು ಡಾ:ಬಿ ಆರ್ ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದರು.ಕಲಬುರಗಿ ದಕ್ಷಿಣ ಶಿಕ್ಷಣ ಸಂಯೋಜಕರಾದ ರಾಜಕುಮಾರ ಪಾಟೀಲ, ಶಹಾಪೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ವಿಜಯಕುಮಾರ ಹಾವನೂರ, ಹರಸೂರ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಆನಂದಕುಮಾರ ದೊಡಮನಿ, ಗೊಬ್ಬುರ ಸರಕಾರಿ ಪ್ರೌಢಶಾಲೆ ಶಿಕ್ಷಕಿಯಾದ ಅಂಬಿಕಾ ಡಿ ನಾಡಗಿರಿ, ಎನ್ ಎಸ್ ಕುಂಬಾರ, ಪ್ರಕಾಶ ಮಾಲಿಪಾಟೀಲ, ಅಂಬಾದಾಸ ಗಾಜರೆ, ಪರಮೇಶ್ವರ ಮೇಲ್ಮನಿ, ಅಶೋಕ ಸರಡಿಗಿ, ಸುನೀಲ ಇನಾಮದಾರ, ಜಗನ್ನಾಥ ದಿಗ್ಸಂಗಿಕರ್, ಅಣ್ಣಾರಾಯ ಹತ್ತರಗಿ, ಭೂಪಾಲ ಕಡಗಂಚಿ, ನಾಗೀಂದ್ರಪ್ಪ ನಾಡಗಿರಿ, ಮುಕುಂದ ಸಂಗೋಳಗಿ, ಶಿವಕುಮಾರ ಮದ್ರಿ ಸಂತೋಷ ಮೇಲ್ಮನಿ, ವೇದಿಕೆಯ ಮೇಲಿದ್ದರು, ಕಲಬುರಗಿ ಸರಕಾರಿ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಯರಾದ ಕಲಾಲಿಂಗ ದಿಗ್ಸಂಗಿಕರ್ ಅಧ್ಯಕ್ಷತೆ ವಹಿಸಿದ್ದರು. ಎಸ್ ಎಸ್ ಎಲ್ ಸಿ ೪೦, ದ್ವಿತೀಯ ಪಿಯುಸಿ ೧೫ ಮತ್ತೆ ಪದವಿಯ ೧೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಇದೆ ಸಂದರ್ಭದಲ್ಲಿ ನೂತನವಾಗಿ ಸರಕಾರಿ ಸೇವೆಗೆ ಸೇರಿದ, ಸೇವೆಯಲ್ಲಿದ್ದು ಬಡ್ತಿ ಪಡೆದ, ಸರಕಾರಿ ಸೇವೆಯಲ್ಲಿದ್ದು ಸಾಧನೆ ಮಾಡಿದ ಮತ್ತು ನಿವೃತ್ತಿ ಹೊಂದಿದ ನೌಕರ ಬಾಂದವರಿಗೆ ಸನ್ಮಾನಿಸಲಾಯಿತು.ರಾಮಕೃಷ್ಣ ಕಟ್ಟಿಮನಿ ಸ್ವಾಗತಿಸಿದರು, ಗುರುನಾಥ ಮೇಲ್ಮನಿ ನಿರೂಪಿಸಿದರು,ಶರಣಬಸಪ್ಪ ಶರ್ಮಾ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here