ಕಲಬುರಗಿ: ಫೆ. ೫,೬ ಮತ್ತು ೭ರಂದು ಕಲಬುರಗಿಯ ಗುಲ್ಬರ್ಗ ವಿವಿ ಆವರಣದಲ್ಲಿ ನಡೆಯಲಿರುವ ಅಖಿಲ ಭಾರತ ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಕಟ್ಟಡ ಹಾಗೂ ಕಾಂಪೌಂಡ್ ಗಳಿಗೆ ಗೋಡೆ ಬರಹ ಬರೆಯಲಾಗುತ್ತಿದೆ.
“ಸಾಹಿತ್ಯ”ಅಂತ ಈ ರೀತಿಬರೆಯದೆ, ಈ ಕೆಳಕಂಡಂತೆ ಬರೆಯಲಾಗಿದೆ. ಆದರೆ ನಗರದ ಕನ್ನಡ ಭವನದ ಪಕ್ಕದ ಗೋಡೆಯ ಮೇಲೆ ಸಾಹಿತ್ಯ ಸಮ್ಮೇಳನ ಬದಲಿಗೆ “ಸಾಹಿತ್ಯೆ” ಎಂದು ಬರೆಯಲಾಗಿದೆ.
ಈ ಅಂಶವನ್ನು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪದಾಧಿಕಾರಿಗಳಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಸತ್ಯಂಪೇಟೆ ಯವರು ತಮ್ಮ ಫೇಸ್ ಬುಕ್ ಗೋಡೆಯಲ್ಲಿ ಹಾಕಿ ಏನಿದು? ಎಂದು ಪ್ರಶ್ನಿಸಿದ್ದಾರೆ. ಸಂಬಂಧಿಸಿದವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.