ಕಾನೂನು ಸಮಸ್ಯೆಗಳಿಗೆ ಸಂಚಾರಿ ನ್ಯಾಯಾಲಯದಿಂದ ಗ್ರಾಮದಲ್ಲಿಯೆ ಪರಿಹಾರ

0
70

ಸುರಪುರ: ಅನೇಕ ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಮದ ನಾಗರಿಕರಿಗೆ ಈ ಸಂಚಾರಿ ನ್ಯಾಯಲಯದ ಮೂಲಕ ತಮ್ಮ ಸಮಸ್ಯೆಗೆ ತಮ್ಮ ಗ್ರಾಮದಲ್ಲಿಯೆ ಪರಿಹಾರ ಕಂಡುಕೊಳ್ಳಲಿಕ್ಕೆ ಸಾಧ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ತೈಯಬ್ ಸುಲ್ತಾನಾ ಅಭಿಪ್ರಾಯಪಟ್ಟರು.

ನಗರದ ನ್ಯಾಯಾಲಯದ ಬುಧವಾರ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಯಾದಗಿರಿ, ತಾಲೂಕ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ವಿವಿಧ ಸರಕಾರಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸಂಚಾರಿ ನ್ಯಾಯಾಲಯದ ಹಾಗೂ ಕಾನೂನು ಸಾಕ್ಷರತಾ ರಥ ಜಾಥಕ್ಕೆ ಹಸಿರು ನಿಶಾನೆ ತೋರಿ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಕಾನೂನು ಸೇವಾ ಸಮಿತಿಗೆ ತಮ್ಮ ಸಮಸ್ಯೆಗಳ ದೂರು ದುಮ್ಮಾನಗಳನ್ನು ಸಲ್ಲಿಸಿದರೇ ಆಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರನ್ನು ನೇಮಕ ಮಾಡಿ, ಎರಡ್ಮೂರು ತಿಂಗಳೊಳಗಾಗಿ ರಾಜೀ ಸಂದಾನದ ಮೂಲಕ ತಮ್ಮ ಸಮಸ್ಯೆಗಳಿಗೆ ಇತ್ಯರ್ಥ ಪಡೆಯಲು ಸಾಧ್ಯವಿದೆ ಎಂದು ಸಲಹೆ ನೀಡಿದ ಅವರು, ಇಂತಹ ಪ್ರಕರಣಗಳು ಮಧ್ಯಸ್ತಿಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವೆಂದು ನುಡಿದರು.

Contact Your\'s Advertisement; 9902492681

ಸಿವಿಲ್ ನ್ಯಾಯಾಧೀಶರಾದ ಅಮರನಾಥ ಬಿ.ಎನ್ ಮಾತನಾಡಿ, ಈ ಕಾನೂನು ಅರಿವು ನೆರವು ಜಾಥಾದ ಮೂಲ ಉದ್ದೇಶ ಸಂಚಾರಿ ನ್ಯಾಯಾಲಯದ ಮೂಲಕ ಜನ ಸಾಮಾನ್ಯರಿಗೆ ಕ್ರಮ ಬದ್ಧವಾಗಿ ನ್ಯಾಯ ನೀಡುವದಾಗಿದೆ. ಇದು ಒಟ್ಟು ನಾಲ್ಕು ದಿನಗಳವರೆಗೆ ನಡೆಯುತ್ತಿದ್ದು, ಮೂಲಭೂತ ಸೌಕರ್ಯ ಹಾಗೂ ವಿವಿಧ ಪ್ರಕರಣಗಳನ್ನು ಇತ್ಯರ್ಥ ಪಡೆಸಿಲಿಕ್ಕೆ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಕೂಡಾ ಸಂಚಾರಿ ನ್ಯಾಯಾಲಯ ಸಂಚರಿಸುವದರ ಮೂಲಕ ಖಟ್ಲೆ, ಪ್ರಕರಣಗಳಿಗೆ ನ್ಯಾಯ ಕಂಡುಕೊಳ್ಳಲಿಕ್ಕೆ ಸಾಧ್ಯವಿದೆ ಎಂದು ತಿಳಿಸಿದರು.

ನ್ಯಾಯವಾದಿ ಶ್ರೀದೇವಿ ಪಾಟೀಲ್ ಮೋಟಾರ್ ವಾಹನ ಕಾಯ್ದೆ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಮೋಟಾರ್ ವಾಹನ ಖಾಯ್ದೆಯ ಬಗ್ಗೆ ಜನ ಸಾಮಾನ್ಯರಿಗೆ ತಿಳುವಳಿಕೆ ಕೊರತೆ ಇದೆ. ಪ್ರತಿಯೊಬ್ಬ ನಾಗರಿಕನೂ ತಮ್ಮ ವಾಹನದ ವಿಮೆ, ಲೈಸೆನ್ಸ್, ಮೊದಲಾದವುಗಳನ್ನು ಸರಿಯಾಗಿ ಇಟ್ಟುಕೊಳ್ಳದಿದ್ದರೇ ಇದರಿಂದ ನಷ್ಟ ವಾಹನದ ಮಾಲೀಕರಿಗಾಗುತ್ತದೆ ಮತ್ತು ವಿವಿಧ ರೀತಿಯ ತೊಂದರೆಗಳಿಗೆ ಸಿಲುಕಬಹುದು ಎಂದು ವಿವರಿಸಿದರು.

ಮತ್ತೋರ್ವ ನ್ಯಾಯವಾದಿ ಸವಿತಾ ಮಾಲಿಪಾಟೀಲ್ ಲಘು ಪ್ರಕರಣಗಳ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಸಣ್ಣ ಪ್ರಕರಣಗಳು ನ್ಯಾಯಾಲಯದಲ್ಲಿ ಲಘುವಾಗಿ ಕಡಿಮೆ ದಂಡದ ರೂಪದಲ್ಲಿ ಇತ್ಯರ್ಥವಾಗುತ್ತದೆ. ಸಣ್ಣ ಪ್ರಕರಣಗಳೆಂದು ಉಪೇಕ್ಷ ಮಾಡದೇ ಸಾರ್ವಜನಿಕರು ಪ್ರತೀ ಕಾನೂನಿನ ಬಗ್ಗೆ ತಿಳುವಳಿಕೆ ಹೊಂದುವುದು ಅವಶ್ಯವಾಗಿದೆ ಎಂದರು.

ತಾಲೂಕ ವಕೀಲರ ಸಂಘದ ಅಧ್ಯಕ್ಷ ಮಹ್ಮದ್ ಹುಸೇನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಹಸೀಲ್ದಾರ್ ನಿಂಗಣ್ಣ ಬಿರಾದಾರ್, ಸಿಪಿಐ ಆನಂದರಾವ್, ವಕೀಲ ಉದಯಸಿಂಗ್, ಕ್ಷೇತ್ರ ಸಮನ್ವಯಾಧಿಕಾರಿ ಅಮರೇಶ ಕುಂಬಾರ, ತಾಲೂಕ ಪಂಚಾಯತ್ ವ್ಯವಸ್ಥಾಪಕ ವೆಂಕೋಬ್ ಬಾಕಲಿ, ಸಮಾಜ ಕಲ್ಯಾಣ ಅಧಿಕಾರಿ ಸತ್ಯ ನಾರಾಯಣ ದರಬರಿ, ಸಿಡಿಪಿಒ ಲಾಲ್ ಸಾಬ್, ಇತರರು ವೇದಿಕೆಯಲ್ಲಿದ್ದರು. ಈ ವೇಳೆ ವಕೀಲರಾದ ಬಸವಲಿಗಂಪ್ಪ ಪಾಟೀಲ್, ಜಿ.ಎಸ್ ಪಾಟೀಲ್, ಸಲೀಂ ಖಾದಿ, ಎನ್.ಎಸ್ ಪಾಟೀಲ್, ಎಸ್.ಸಿದ್ರಾಮಪ್ಪ, ಎಮ್.ಎಸ್.ಹಿರೇಮಠ, ಜಿ.ಆರ್.ಬನಾಳೆ, ಸಿಆರ್‌ಪಿ ಮಾಳಪ್ಪ ಹುಲಕೇರಿ, ಸಂತೋಷ್‌ಕುಮಾರಿ, ಪದ್ಮಜಾ ರಫಗಾರ, ಇತರರು ಇದ್ದರು. ಮಲ್ಲಣ್ಣ ಭೋವಿ ಸ್ವಾಗತಿಸಿ ನಿರೂಪಿಸಿದರು. ಸಂತೋಷ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here