ಶಿವಯ್ಯ ಮಠಪತಿ ಸ್ಮರಣಾರ್ಥ ಐದು ದಿನದ ಉಪನ್ಯಾಸ

0
58

ಸೇಡಂ: ಕನ್ನಡದ ವರಕವಿ, ಜ್ಞಾನಪೀಠ ಪ್ರಶಸ್ತಿ ಪಡೆದ ಬೇಂದ್ರೆಯವರ ಜನ್ಮ ದಿನಾಚರಣೆಯನ್ನು ಸರ್ಕಾರದಿಂದ ಪ್ರತಿ ವರ್ಷ ಆಚರಿಸಬೇಕು. ಅಂದಾಗ ಅವರ ವಿಚಾರಧಾರೆಗಳನ್ನು ಜನ ಸಾಮಾನ್ಯರಿಗೂ ಮುಟ್ಟುವಂತಾಗುತ್ತದೆ ಎಂದು ಸಾಹಿತಿ ಜಗನ್ನಾಥ ತರನಳ್ಳಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಶಿವಯ್ಯ ಮಠಪತಿ ಸ್ಮರಣಾರ್ಥ ಐದು ದಿನದ ಉಪನ್ಯಾಸ ಮಾಲಿಕೆಯಲ್ಲಿ ದ.ರಾ ಬೇಂದ್ರೆಯವರ ಜನ್ಮ ದಿನದ ಅಂಗವಾಗಿ ಭಾವಗಾರುಡಿಗ ಬೇಂದ್ರೆ ಉಪನ್ಯಾಸ ಕಾಂiiಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಮಾತೃ ಭಾಷೆ ಮರಾಠಿಯಾದರೂ ಕನ್ನಡದ ಸಾಹಿತ್ಯವನ್ನು ಉತ್ತುಂಗಕ್ಕೆ ಕೊಂಡೊಯ್ದವರು ಬೇಂದ್ರೆ. ಸತ್ಯ, ಶುದ್ಧ, ಮತ್ತು ನೇರ ನುಡಿಯ ಕವಿ ಅವರಾಗಿದ್ದು ತಮ್ಮ ಬಗ್ಗೆ ಪ್ರಶ್ನೆ ಮಾಡಿದವರಿಗೆ ತತ್‌ಕ್ಷಣಕ್ಕೆ ಉತ್ತರ ನೀಡುತ್ತಿದ್ದರು. ಅತ್ಯಂತ ಬಡತನದ ಜೀವನ ಸಾಗಿಸಿದ್ದ ಬೇಂದ್ರೆಯವರು ನಮ್ಮ ಒಂಬತ್ತು ಮಕ್ಕಳಲ್ಲಿ ಆರು ಮಕ್ಕಳು ತೀರಿಕೊಂಡಿದ್ದರು.

Contact Your\'s Advertisement; 9902492681

ಆದರೂ ಎದೆಗುಂದದೆ ತಮ್ಮ ಕಾವ್ಯಗಳನ್ನು ರಚಿಸುತ್ತಿದ್ದರು. ಬಾಲ್ಯ ವಿವಾಹ ಪದ್ದತಿಯ ವಿರುದ್ಧ ದ್ವನಿಯಾಗಿದ್ದವರು. ಪರಕೀಯರ ವಿರುದ್ಧ ಕಾವ್ಯ ರಚಿಸಿದ್ದಕ್ಕೆ ಸೆರೆವಾಸವನ್ನು ಅನುಭವಿಸಿದ್ದರು ಬೇಂದ್ರೆ. ಅವರು ರಚಿಸಿದ ಪ್ರತಿ ಸಾಲಿನಲ್ಲೂ ಅತ್ಯಂತ ಅರ್ಥ ಅಡಗಿರುತ್ತದೆ, ಬರೀ ರಾಗಬದ್ಧವಾಗಿ ಓದುವುದು ಹಾಡುವುದು ಅಲ್ಲದೇ ಅದರಲ್ಲಿರುವ ಅರ್ಥವನ್ನು ಅರಿತುಕೊಂಡಾಗ ಮಾತ್ರ ನಿಮಗೆ ಆ ಕಾವ್ಯಗಳ ಬೆಲೆ ಅರ್ಥವಾಗುತ್ತದೆ. ಅಂತಹ ಮಹಾನ್ ಕವಿಗಳ ಕವಿತೆಯನ್ನು ಓದಿ ಅರ್ಥೈಸಿಕೊಂಡರೆ ನೀವು ಉತ್ತಮ ಕವಿ, ವಾಗ್ಮಿ, ಚಿಂತಕರಾಗಿ ಬೆಳೆಯಲು ಸಾದ್ಯವಾಗುತ್ತದೆ ಎಂದರು.

ಕಾಂiiಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಸಿದ್ದಪ್ಪ ತಳ್ಳಳ್ಳಿ, ಶಿವಯ್ಯ ಮಠಪತಿಯವರು ಇಂದು ನಮ್ಮನ್ನು ಭೌತಿಕವಾಗಿ ಅಗಲಿದ್ದರು ಮಾನಸಿಕವಾಗಿ ನಮ್ಮ ಜೊತೆಯಲ್ಲಿ ಇದ್ದಾರೆ. ಎಲೆ ಮರೆಯ ಕಾಯಿಯಂತೆ ಯಾವುದೇ ಆಸೆಗೆ ಒಳಗಾಗದೇ ಹಲವು ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿ ಕೊಂಡಿದ್ದರು. ಅವರದ್ದು ಶರಣರ ಸಾಲಿನ ವ್ಯಕ್ತಿತ್ವ ಅವರ ಕರ್ತವ್ಯ ನಿಷ್ಠೆ ನಮಗೆ ಆದರ್ಶವಾಗಿದೆ, ಅವರಂತೆ ಉತ್ತಮ ಬದುಕು ಸಾಗಿಸೋಣ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ಇಂದಿಗೂ ಬೇಂದ್ರೆಯವರ ಭಾವಗೀತೆಗಳು ಎಲ್ಲರ ಬಾಯಲ್ಲಿ ನಲಿದಾಡುತ್ತಲಿವೆ. ಬೇಂದೆಯವರದ್ದು ಶಾಶ್ವತ ಸಾಹಿತ್ಯ . ಈ ವರಕವಿಯ ಸಾಹಿತ್ಯ ಮತ್ತು ಜೀವನಾದರ್ಶಗಳನ್ನು ಇಂದಿನ ಯುವ ಜನತೆಗೆ ತಿಳಿಸಿಕೊಡುವ ಅವಶ್ಯಕತೆ ಇರುವ ಉದ್ದೇಶದಿಂದ ಈ ತರಹದ ಕಾರ್ಯಕ್ರಮಗಳನ್ನು ಕಾಲೇಜು ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ ಎಂದ ಅವರು, ದ.ರಾ.ಬೇಂದ್ರೆಯವರು ಶಬ್ದಗಳನ್ನು ಜೋಡಿಸಿ ರಸವತ್ತಾಗಿ ಕಾವ್ಯಗಳನ್ನು ರಚಿಸಿದ್ದಾರೆ. ಇಂದಿನ ವಿದ್ಯಾರ್ಥಿಗಳೂ ಸಹ ಶಬ್ದ ಸಂಪತ್ತುಗಳನ್ನು ಬಳಸಿಕೊಂಡು ಸಾಹಿತ್ಯದಲ್ಲಿ ಅಭಿರುಚಿ ಬೆಳೆಸಿಕೊಲ್ಳಬೇಕೆಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಶಿವಶರಣಪ್ಪ ಧಾಬಾ ಅಧ್ಯಕ್ಷತೆ ವಹಿಸಿಕೊಂಡಿದ್ದರು, ಸಾಮಾಜಿಕ ಚಿಂತಕ ಮನೋಹರ ದೊಂತಾ, ಪರಿಸರ ಪ್ರೇಮಿ ಶ್ರೀನಿವಾಸ ಕಾಸೋಜು ಮಾತನಾಡಿದರು. ಕುಮಾರಿ ರುಕ್ಮಿಣಿ ಪ್ರಾರ್ಥಿಸಿದರು. ವಿಜಯಕುಮಾರ ರೆಡ್ಡಿ ಸ್ವಾಗತಿಸಿದರು. ಬಸವರಾಜ ಕೊನೇರಿ ನಿರೂಪಿಸಿದರು. ವಿಲಾಸ ವಂದಿಸಿದರು.

ಕಾಲೇಜಿನ ಆವರಣದಲ್ಲಿ ಪರಿಸರ ಪ್ರೇಮಿ ಶ್ರೀನಿವಾಸ ಕಾಸೋಜು ಅವರ ಸಂಸ್ಥೆ ವತಿಯಿಂದ ತರಲಾಗಿದ್ದ ಸಸಿಗಳನ್ನು ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ನೆಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here