ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆ ಸಜ್ಜು: 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ

0
276
  • ಸಾಜಿದ್ ಅಲಿ
ಕಲಬುರಗಿ: ಫೆ.೫,೬ ಮತ್ತು ೭ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಗುಲ್ಬರ್ಗಾ ವಿಶ್ವ ವಿದ್ಯಾಲಯದ ಆವರಣದಲ್ಲಿ ಬೃಹತ್ ವೇದಿಕೆ ಸಜ್ಜಾಗಿದ್ದು, ಸುಮಾರು 2 ಲಕ್ಷಕ್ಕೂ ಅಧಿಕ ಸಾಹಿತ್ಯ  ಪ್ರಿಯರು ಭಾಗವಹಿಸುವ ನಿರೀಕ್ಷೆಯಿದೆ.
ಸುಮಾರು ನಾಲ್ಕು ಎಕರೆಯಲ್ಲಿ ನಿರ್ಮಾಣಗೊಂಡಿರುವ ಸಮ್ಮೇಳನದಲ್ಲಿ ಮಂಟಪ, ಜರ್ಮನಿಯ ವಿಶೇಷ ಹೊದಿಕೆಯಿಂದ ನಿರ್ಮಿಸಲಾಗಿದ್ದು, ಈ ಹೊದಿಕೆಯ ಮಂಟಪ ಬಿಸಿಲು ತಾಪವನ್ನು ತಿಳಿಗೊಳಿಸಿ ತಂಪು ವಾತಾವರಣ ನೀಡುವ ಶಕ್ತಿ ಇದ್ದಕ್ಕೆ ಇದೆ ಎಂದು ಮಂಟಪ ತಯಾರಕರು ತಿಳಿಸಿದ್ದಾರೆ.
ಅಲ್ಲದೇ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿರುವ ಭವ್ಯ ಕೋಟೆ  ಸಮ್ಮೇಳನದ ಪ್ರಮುಖ ವೇದಿಕೆಯ ಆಕರ್ಷಣೆಯ  ಕೇಂದ್ರ ಬಿಂದುವಾಗಿದೆ. ರಾಷ್ಟ್ರಕೂಟರ ರಾಜಧಾನಿ ಮಳಖೇಡ ಆಗಿತ್ತು. ಇದನ್ನು ಮತ್ತು ಕವಿರಾಜ ಮಾರ್ಗ ಕೃತಿ ಬಿಂಬಿಸುವುದಕ್ಕಾಗಿ ಇದನ್ನು ರಚಿಸಲಾಗಿದೆ.
             ಕಲಬುರಗಿ ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಮತ್ತು ವಿಶೇಷ ಇತಿಹಾಸ                
1. ೧, ೨, ೩ ಜೂನ್ ೧೯೨೮ ಅಧ್ಯಕ್ಷ ಬಿ. ಎಂ. ಶ್ರೀಕಂಠಯ್ಯ 14ನೇ ಸಾಹಿತ್ಯ ಸಮ್ಮೇಳನ    
2. ೫, ೬, ೭ ಮಾರ್ಚ್ ೧೯೪೯ ಅಧ್ಯಕ್ಷ  ಉತ್ತಂಗಿ ಚನ್ನಪ್ಪ 32ನೇ ಸಾಹಿತ್ಯ ಸಮ್ಮೇಳನ       
3. ೨೯, ೩೦, ೩೧ ಅಕ್ಟೋಬರ್, ೧ ನವೆಂಬರ್ ೧೯೮೭ ಅಧ್ಯಕ್ಷ  ಸಿದ್ಧಯ್ಯ ಪುರಾಣಿಕ 58ನೇ ಸಾಹಿತ್ಯ ಸಮ್ಮೇಳನ
4.ಫೆ.೫,೬ ಮತ್ತು ೭, ೨೦೨೦ ಎಚ್. ಎಸ್. ವೆಂಕಟೇಶಮೂರ್ತಿ 85ನೇ ಸಾಹಿತ್ಯ ಸಮ್ಮೇಳನ ಈ ಹಿಂದೆ ಧಾರವಾಡದಲ್ಲಿ ಸಮ್ಮೇಳನ ಜರುಗಿತ್ತು.
ಕಲಬುರಗಿಯಲ್ಲಿ ನಡೆಯುತ್ತಿರುವ ಈ ನಾಲ್ಕನೇ ಸಮ್ಮೇಳನದ ಕೀರ್ತಿ ಗರಿ ಮತ್ತಷ್ಟು ಹೆಚ್ಚಿಸಲು ಮುನ್ನುಡಿ ಬರೆಯುತ್ತಿದೆ. ಇಎಸ್ಐ ಆಸ್ಪತ್ರೆಯ ಹಿಂದುಗಡೆಯ ಭಾಗದಲ್ಲೇ ಈ ಮುಖ್ಯ ವೇದಿಕೆ  ನಿರ್ಮಿಸಲಾಗಿದ್ದು, ಈ ಮೂಲಕ ಆಸ್ಪತ್ರೆಯ ಕಟ್ಟಡಗಳನ್ನು ಹತ್ತಿರದಿಂದ ಸಮ್ಮೇಳನ ನೋಡಬಹುದಾಗಿದೆ.
ಸಮ್ಮೇಳನಕ್ಕೆ ಇದುವರೆಗೆ ಒಟ್ಟು 21 ಸಾವಿರಕ್ಕೂ ಅಧಿಕ ಜನರು ನೋಂದಣಿ  ಮಾಡಿಕೊಂಡಿದ್ದು
ಇನ್ನೂ ಈ ಸಂಖ್ಯೆ ಹಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ. ವಿವಿಯಲ್ಲಿ ಮುಖ್ಯವೇದಿಕೆ ಸೇರಿ ಮೂರು ಸಮನಾಂತರ ವೇದಿಕೆಗಳು ನಿರ್ಮಿಸಲಾಗಿದ್ದು, ಒಟ್ಟು 500ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳ ನಿರ್ಮಿಸಲಾಗಿದೆ. ಇನ್ನೂ ಹೆಚ್ಚು ಪುಸ್ತಕ ಭಂಡಾರ ಮಳಿಗೆಗಳಿಗೂ ವೇದಿಕೆ ಕಲ್ಪಿಸುವ ಕೆಲಸವೂ ನಡೆಯುತ್ತಿದೆ.
ಮುಖ್ಯವೇದಿಕೆಯ ಹತ್ತಿರದಲ್ಲೇ ಪುಸ್ತಕ ಭಂಡಾರ ಮಳಿಗೆಗಳು ನಿರ್ಮಿಸಲಾಗಿದ್ದು ಸಮ್ಮೇಳನದ ಜೊತೆ ಜೊತೆಗೆ ಪುಸ್ತಕದ ಅನುಭವನ್ನು ಸವಿಯ ಬಹುದಾಗಿದೆ. ಸುಮಾರು ಅರ್ಧ ಎಕರೆಯಲ್ಲಿ ಊಟದ ವ್ಯವಸ್ಥೆಗಾಗಿ ಡೈನಿಂಗ್ ಹಾಲ್
ವಸ್ಥೆಯೂ ನಡೆಯುತ್ತಿದ್ದು. ಅಲ್ಲ ಲ್ಲಿ ಕುಡಿಯುವ ನೀರು ಮತ್ತು ಬಯೋ ಶೌಚಾಲಯದ ವ್ಯವಸ್ಥೆ ಮಾಡಲಾಗುತ್ತಿದೆ. ವಾಹನ ಸವಾರರಿಗೆ ವಿಶೇಷವಾಗಿ ಪಾರ್ಕಿಂಗ್ ಮತ್ತು ಸಮ್ಮೇಳನಕ್ಕೆ ಆಗಮಿಸಲು ಕೇಂದ್ರ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಿಂದ ನಗರ ಸಾರಿಗೆ ಬಸ್ ಗಳ ವ್ಯವಸ್ಥೆ ಹೆಚ್ಚಿಸಿ ಅನುಕೂಲ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೇ ಸಮ್ಮೇಳನಕ್ಕ ಸಕಲ ಸಿದ್ಧತೆಗಳ ಭರದಿಂದ ನಡೆಯುತಿದ್ದು, ಸಮ್ಮೇಳನ ಯಶಸ್ವಿಗಾಗಿ ಪ್ರಚಾರ ಕಾರ್ಯ ಮತ್ತು ಭದ್ರತೆ ಕಾರ್ಯಗಳನ್ನು ಕೈಗೊಳಲಾಗುತ್ತಿದೆ. ಕಲಬುರಗಿ ವಿವಿಯಲ್ಲಿ ನಡೆಯುತ್ತಿರುವ ಈ ಸಮ್ಮೇಳನಕ್ಕೆ ವಿವಿಯ ಮುಖ್ಯದ್ವಾರಗಳು ಸೇರಿದಂತೆ ಐದು ದ್ವಾರುಗಳು ಇದ್ದು, ವಿವಿಯ ಕಾಂಪೌಂಡ್ ಗೋಡೆಯನ್ನು ಒಡೆದು ನೇರವಾಗಿ ಸಮ್ಮೇಳನಕ್ಕೆ ಬರಲು ದಾರಿ ಕಲ್ಪಿಸಲಾಗಿದೆ.

ಸಮ್ಮೇಳನಕ್ಕೆ ಆಗಮಿಸಿವು ಅಭಿಮಾನಿಗಳಿಗೆ ಕಲ್ಯಾಣ ಕರ್ನಟಕದ ಗುರು ಕೃಪಾ ಶ್ರೀ ಬಸವೇಶ್ವರ ಸುಂದರವಾದ ಪ್ರತಿಮೆ ಸ್ತಬ್ಧ ಮೂರ್ತಿ ಸಮ್ಮೇಳನದ ಮುಖ್ಯ ವೇದಿಕೆಯ ಎದುರು ಸ್ಥಾಪನೆಯಾಗಲಿದ್ದು, ಗಜಾನನ ಸ್ವಾಗತ ದ್ವಾರ ತಮ್ಮ ಆಗಮನಕ್ಕೆ ಕಾಯುತ್ತಿರುತ್ತವೆ.

ತೊಗರಿ ಕಣಜ ಕಲಬುರಗಿ ಜಿಲ್ಲೆಯ ವಿಶೇಷತೆ ಮತ್ತು ಪ್ರವಾಸಿ ಸ್ಥಳಗಳು

1. ಕಲಬುರಗಿ ಕೋಟೆ
2. ಬುದ್ಧ ವಿಹಾರ
3. ಖಾಜಾ ಬಂದಾ ನವಾಜ್ ದರ್ಗಾ
4. ಶರಣಬಸವೇಶ್ವರ ದೇವಸ್ಥಾನ
4. ರಾಣೇಶ್ ಪೀರ್ ದರ್ಗಾ.
5. ಮಹೇಬೂಬ್ ಗುಲಶನ್ ಗಾರ್ಡನ್
6. ಕಲಬುರಗಿ ವಿಮಾನ ನಿಲ್ದಾಣ
7. ಇಎಸ್ಐ ಆಸ್ಪತ್ರೆ
8. ಕರ್ನಾಟಕ ಕೇಂದ್ರಿಯ ವಿಶ್ವ ವಿದ್ಯಾಲಯ
9. ಕೋರಂಟಿ ಹನುಮನ್ ಮಂದಿರ
10. ಹಫತ್ ಗುಂಬಜ್
11. ಝೂ ಪಾರ್ಕ್
12. ಐವನ್ ಶಾಹಿ ಅತಿಥಿ ಗ್ರಹ
13. ಗುಲ್ಬರ್ಗಾ ವಿವಿ
Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here