ಸಿಸಿ ರಸ್ತೆ, ಶಾಲಾ ಕೋಣೆ ಕಾಮಗಾರಿಗೆ ಶಾಸಕ ಗುತ್ತೇದಾರ ಚಾಲನೆ

0
36

ಆಳಂದ: ತಾಲೂಕಿನ ಭೂಸನೂರ ತಾಂಡಾದಲ್ಲಿ ಸಿಸಿ ರಸ್ತೆ ಮತ್ತು ೨ ಶಾಲಾ ಕೋಣೆಗಳ ನಿರ್ಮಾಣ ಕಾಮಗಾರಿಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಶುಕ್ರವಾರ ಚಾಲನೆ ನೀಡಿದರು.

ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯ ಅಡಿಯಲ್ಲಿ ಸುಮಾರು ೪೫ ಲಕ್ಷ ರೂ.ಗಳ ವಿವಿಧ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿ ಮಾತನಾಡಿದರು. ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಾಂಡಾಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಶ್ರಮಿಸುತ್ತಿದ್ದೇನೆ ಅದಕ್ಕಾಗಿ ಜನತೆಯ ಸಹಕಾರ ಬೇಕಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ, ಮುಖಂಡರಾದ ಅಶೋಕ ಗುತ್ತೇದಾರ, ರಾಜು ಮಲಶೆಟ್ಟಿ, ಡಾ. ಶರಣಬಸಪ್ಪ ಮಲಶೆಟ್ಟಿ, ಗ್ರಾ.ಪಂ ಸದಸ್ಯರಾದ ಸುಭಾಷ್, ಫುಲಾಬಾಯಿ, ಗಣಪತಿ ರಾಠೋಡ, ರಾಮಚಂದ್ರ ಚವ್ಹಾಣ, ಲಿಂಬಾಜಿ ಅಧಿಕಾರಿಗಳಾದ ಅರುಣಕುಮಾರ ಬಿರಾದಾರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here