ಸುರಪುರ: ಮಠಮಾನ್ಯಗಳು ಜನರಲ್ಲಿ ಲೌಕಿಕ ಬದುಕಿನೊಂದಿಗೆ ಆಧ್ಯಾತ್ಮದತ್ತ ರುಚಿ ಊಣಬಡಿಸುವ ಕೇಂದ್ರವಾಗಬೇಕು ಇದರಿಂದ ನಮ್ಮ ಯುವ ಸಮುದಾಯಕ್ಕೆ ನಮ್ಮ ಸಂಸ್ಕೃತಿಯನ್ನು ಕಲಿಸಿಕೊಡುವ ಮಾರ್ಗದರ್ಶನ ಕೇಂದ್ರವಾಗಬೇಕಾಗಿದೆ ಎಂದು ಮಾಜಿ ಸಚಿವ ಶರಣಪ್ರಕಾಸ ಪಾಟಿಲ ಹೇಳಿದರು.
ತಾಲೂಕಿನ ಲಕ್ಷ್ಮಿಪುರದ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಆರ್ವಣದಲ್ಲಿ ಶ್ರೀ ಬಸವಲಿಂಗದೇವರು ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ನಡೆದ ಶ್ರೀ ಮಹಾಶಿವರಣೆ ಹೇಮರಡ್ಡಿ ಮಲ್ಲಮ್ಮನವರ ಮಹಾಪುರಾಣ ಮಂಗಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮಲ್ಲಿ ಅನೇಕ ಶರಣರು ಸಮಾಜದ ಬಗ್ಗೆ ಹಾಗೂ ನಾವು ಹೇಗೆ ಬದುಕಬೇಕು ಎನ್ನುವುದರ ಕುರಿತು ಅನೇಕ ವಚನಗಳ ರೂಪದಲ್ಲಿ ತಿಳಿಸಿದ್ದಾರೆ ಅವುಗಳನ್ನು ಅರ್ಥಮಾಡಿಕೊಂಡು ಬದುಕನ್ನು ಸಾಗಿಸಬೇಕು ಎಂದು ತಿಳಿಸಿದರು.
ನಂತರ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಹೇಮರೆಡ್ಡಿ ಮಲ್ಲಮ್ಮ ನವರ ಜೀವನ ನಮಗೆ ಆದರ್ಶವಾಗಿದೆ ಇತಂಹವರ ಪೂರಾಣಗಳನ್ನು ಆಲಸಿ ಇವರುಗಳ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಸಾರ್ಥಕವಾಗಿಸಿಕೊಳ್ಳಬೇಕು ಹಾಗೂ ಇತಂಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಮ್ಮ ಯುವ ಸಮುದಾಯವು ಭಾಗಿಯಾಗಿ ಧರ್ಮಕಾರ್ಯಗಳನ್ನು ನಡೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಕಂಠಿಮಠ ಮುದ್ನೂರಿನ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ರುಕ್ಮಾಪುರ ಹೀರೆಮಠದ ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯರು ಲಕ್ಷ್ಮೀಪುರದ ಶ್ರೀ ಬಸವಲಿಂಗ ದೇವರು ಸೇರಿದಂತೆ ಇನ್ನಿತರ ಸ್ವಾಮಿಜಿಗಳು ಸಾನಿಧ್ಯ ವಹಿಸಿದ್ದರು ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಸುರೇಶ ಸಜ್ಜನ, ಮಲ್ಲಣ್ಣ ಸಾಹುಕಾರ ಮುದೋಳ, ಅಬ್ದುಲ್ ಗಫಾರ ನಗನೂರಿ, ಸೂಗುರೇಶ ವಾರದ, ಮಂಜುನಾತ ಜಾಲಹಳ್ಳಿ ಸೇರಿದಂತೆ ನೂರಾರು ಜನ ಭಕ್ತರು ಸೇರಿದ್ದರು.