ಒಟ್ಟು 618 ಮಳಿಗೆಗಳ ನೋಂದಣಿ; ಲೇಖಕರ ಕಟ್ಟೆ ಆಕರ್ಷಣೆ ಡಾ.ಅಜಯಸಿಂಗ್

0
145

ಕಲಬುರಗಿ; ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬೃಹತ ವೇದಿಕೆಯ ಬದಿಭಾಗದಲ್ಲಿ ಒಟ್ಟು 618 ಮಳಿಗೆಗಳ ನೋಂದಣಿಯಾಗಿದ್ದು, ಅದರಲ್ಲಿ ‘ಲೇಖಕರ ಕಟ್ಟೆ’ ಎಂಬ ಎರಡು ವಿಶೇಷ ಮಳಿಗೆಗಳನ್ನು ತೆರೆಯಲಾಗಿದೆ ಎಂದು ಪುಸ್ತಕ ಪ್ರದರ್ಶನ ಮತ್ತು ವಾಣಿಜ್ಯ ಮಳಿಗೆಗಳ ಸಮಿತಿಯ ಅಧ್ಯಕ್ಷ, ಶಾಸಕ ಡಾ. ಅಜಯಸಿಂಗ್ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ಕಟ್ಟಡದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,405 ಪುಸ್ತಕ ಮತ್ತು 193 ವಾಣಿಜ್ಯ ಮಳಿಗೆಗಳ ನೋಂದಣಿ ಸೇರಿದಂತೆ ವಿಶೇಷವಾಗಿ ಲೇಖಕರ ಕಟ್ಟೆಯಲ್ಲಿ ಹಿರಿಯ ಸಾಹಿತಿಗಳೊಂದಿಗೆ ಸಂವಾದಕ್ಕೋಸ್ಕರ ಎರಡು ವಿಶೇಷ ಮಳಿಗೆಗಳಿಗೆ ಮೀಸಲಿಡಲಾಗಿದ್ದು, ಸಾಹಿತ್ಯಾಸಕ್ತರು,ವಿದ್ಯಾರ್ಥಿಗಳು ಇವುಗಳ ಸದೂಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

Contact Your\'s Advertisement; 9902492681

ಫೆ.5ರಂದು ವಾಣಿಜ್ಯ ಮಳಿಗೆಗಳ ಉದ್ಘಾಟನೆ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಮತ್ತು ಪುಸ್ತಕ ಮಳಿಗೆಗಳನ್ನು ಕಲಬುರ್ಗಿ ದಕ್ಷಿಣ ವಲಯ ಶಾಸಕ ದತ್ತಾತ್ರೇಯ ಪಾಟೀಲ್ ನೆರೆವೆರೆಸುವರು.

ಪುಸ್ತಕ ಮಳಿಗೆಗಳ ನಾಲ್ಕು ವಿಭಾಗಗಳು ಮಾಡಿ ಅವುಗಳಿಗೆ ಈ ಪ್ರದೇಶದ ಪ್ರಮುಖ ನದಿಗಳಾದ ಕಾಗಿಣಾ, ಕೃಷ್ಣ,ಕಾರಂಜಾ,ಮತ್ತು ಭೀಮಾ ನದಿಗಳ ಹೆಸರು ಸೂಚಿಸಲಾಗಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here