ರಾಯಚೂರು: ಸರ್ಕಾರಿ ಆದೇಶ ಉಲಂಘನೆ ಮಾಡಿದ ಹಾಗೂ ವಿದ್ಯಾರ್ಥಿ ಸಮಸ್ಯೆಗಳಿಗೆ ಸ್ಪಂದಿಸದ ಪ್ರೌಢಶಾಲೆಯ ಮುಖ್ಯೋಪಾಧ್ಯೆ ಅಮಾನತು ಮಾಡಲು ಒತ್ತಾಯಿಸಿ ಪ್ರತಿಭಟನಾ ಧರಣಿ ನಡೆಯಿತು.
ಮಸ್ಕಿ ತಾಲ್ಲೂಕಿನ ಅಮೀನಗಡ ಪ್ರೌಢಶಾಲೆಯ ಮುಖ್ಯೋಪಾಧ್ಯೆ ಹಾಗೂ ಕಸ್ತೂರಿ ಬಾ ವಸತಿ ನಿಲಯದ ಮೇಲ್ವಿಚಾರಕಾದ ಕಿರ್ಲೋಸ್ಕರ್ ರವರನ್ನು ಸೇವೆಯಿಂದ ವಜಾಗೊಳಿಸಲು ಒತ್ತಾಯಿಸಿ ಶಾಲೆಯ ಮುಂಭಾಗದಲ್ಲಿ SFI, DYFI, SDMC, MRHS ಸೇರಿದಂತೆ ಇತರ ಸಂಘಟನೆ ಗಳ ನೇತೃತ್ವದಲ್ಲಿ ಜಂಟಿಯಾಗಿ ಹೋರಾಟ ಮುಂದುವರೆದಿದೆ.
ಪ್ರೌಢಶಾಲೆಯ ಮುಖ್ಯೋಪಾಧ್ಯೆಯು ತಮ್ಮ ಪತಿ ಹಾಸ್ಟೆಲ್ ಮತ್ತು ಶಾಲೆಗೆ ನಿರಂತರವಾಗಿ ಅಕ್ರಮ ಪ್ರವೇಶ ಮತ್ತು ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಹಾಗೂ ತರಗತಿಯನ್ನು ನಡೆಸಲು ತಮ್ಮ ಪತಿಗೆ ಅನುಮತಿ ಸೇರಿದಂತೆ ಶಾಲೆಯ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಅವಕಾಶ ನೀಡಿದ್ದು, ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಂಘಟನೆಗಳ, ಎಸ್.ಡಿ.ಎಮ್.ಸಿ ಹಾಗೂ ಊರಿನ ಗ್ರಾಮಸ್ಥರ ಸಭೆ ಮಾಡಿ ಆಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಮುಖ್ಯೋಪಾಧ್ಯೆಯಾದ ಸಿಂಧನೂರಿನ ಟಿ.ಟಿ.ಐ ಕೇಂದ್ರ ಕ್ಕೆ ತಾತ್ಕಾಲಿಕ ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಲಾಗಿತ್ತು.
ಆದೇಶ ಹೊರಡಿಸಿ ನಾಲ್ಕು ತಿಂಗಳು ಕಳೆದರು ಶಾಲೆಯಲ್ಲೆ ಉಳಿದುಕೊಂಡಿದ್ದಾರೆ. ಮತ್ತೆ ಡಿಸೆಂಬರ್, ಜನವರಿ ಇನ್ನೂ ಎರಡು ಆದೇಶಗಳನ್ನು ಕಳೆದ ತಿಂಗಳು ಪುನ ಹೊರಡಿಸಿದ್ದಾರೆ ಅವುಗಳನ್ನು ಪಾಲಿಸದೆ ಗಾಳಿಗೆ ತೂರಿದ್ದಾರೆ. ಮುಂದುವರಿದು ಇವರು ಕಳೆದ ಹತ್ತು ವರ್ಷಗಳಿಂದ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದರು ಶಾಲೆ ಮತ್ತು ಹಾಸ್ಟೆಲ್ ಗೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇವರನ್ನು ಅಧಿಕಾರಿಗಳು ಬಚ್ಚಾವ್ ಮಾಡುವ ಕೆಲಸವನ್ನು ನಿಲ್ಲಿಸಿ ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಇಲ್ಲವಾದರೆ ಉಗ್ರಹೋರಾಟವನ್ನು ಮಾಡಲಾಗುವುದೆಂದು ಎಚ್ಚರಿಸಲಾಯಿತು. ಸ್ಥಳಕ್ಕೆ ಬಂದ ಕ್ಷೇತ್ರ ನೋಡೆಲ್ ಅಧಿಕಾರಿ ಪ್ರಭಾಕರ್ ಗೆ ಮನವಿಯನ್ನು ನೀಡದ ನಾಳೆಗೆ ಹೋರಾಟ ವನ್ನು ಮುಂದುವರಿಸಲಾಗಿದೆ.
ಈ ಸಂದರ್ಭದಲ್ಲಿ SFI ಜಿಲ್ಲಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, DYFI ಮುಖಂಡರಾದ ಮಹಮ್ಮದ್ ರಫೀ, ಬಸವರಾಜ ಅಮೀನಗಡ, ಮಹಿಳಾ ಜಾಗೃತಿ ಸಂಘಟನೆಯ ಗಂಗಮ್ಮ, ಗ್ರಾಂ, ಪಂ. ಮಾಜಿ ಅಧ್ಯಕ್ಷರಾದ ಅಮರೇಗೌಡ, MRHS, ಸಂಘಟನೆಯ ದುರುಗೇಶ, SMDS ಅಧ್ಯಕ್ಷರಾದ ಶ್ರೀನಿವಾಸ, ಛಲವಾದಿ ಮಹಾಸಭಾದ ತಾಲ್ಲೂಕು ಉಪಾಧ್ಯಕ್ಷರಾದ ಮೌನೇಶ, ಗ್ರಾಮದ ಮುಖಂಡರಾದ ಶರಬಪ್ಪ ಮೇಟಿ, ಹುಚ್ಚರೆಡ್ಡಿ, ಮನ್ಸೂರ್, ಮಲ್ಲಿಕಾರ್ಜುನ, ಹುಚ್ಚರೇಡ್ಡಿ, ಸಂಜೀವ್, ಸುರೇಶ, ವೆಂಕಟೇಶ ಸೇರಿದಂತೆ ಅನೇಕರಿದ್ದರು.