ಸುರಪುರದಲ್ಲಿ ಮಧ್ವ ನವಮಿ ಆಚರಣೆ : ಪಲ್ಲಕ್ಕಿ ಮೆರವಣಿಗೆ

0
64

ಸುರಪುರ: ನಗರದ ಪಂಚಮುಖಿ ಅಂಜನೇಯ ದೇವಸ್ಥಾನದಲ್ಲಿ ಮಧ್ವ ನವಮಿಯನ್ನು ಭಕ್ತಿ-ಶ್ರದ್ಧೆಗಳಿಂದ ಆಚರಿಸಲಾಯಿತು, ನಿಮಿತ್ತವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮಧ್ವಾಚಾರ್ಯರ ಭಾವಚಿತ್ರ ಹಾಗೂ ಹನುಮಂತದೇವರ ಉತ್ಸವ ಮೂರ್ತಿ ಸಹಿತ ಪಲ್ಲಕ್ಕಿ ಮೆರವಣಿಗೆ ಭಜನೆಯೊಂದಿಗೆ ಜರುಗಿತು, ನಂತರ ಪಂಚಮುಖಿ ಗುಡಿಯಲ್ಲಿ ಪಂ.ನಾರಾಯಣಾಚಾರ್ಯ ಐಜಿ ಪೌರೋಹಿತ್ಯದಲ್ಲಿ ಪವಮಾನ ಹೋಮ ಜರುಗಿತು.

ಈ ಸಂದರ್ಭದಲ್ಲಿ ಪಂಡೀತ ರಾಮಾಚಾರ್ಯ ಪಾಲ್ಮೂರ ಅವರು ಮಧ್ವಾಚಾರ್ಯರ ಜೀವನ ವೃತ್ತಾಂತ ಹಾಗೂ ಅವರು ಪ್ರತಿಪಾದಿಸಿದ ದ್ವೈತ ಸಿದ್ದಾಂತ ಕುರಿತು ಪ್ರವಚನ ನೀಡಿದರು, ವಾಯುದೇವರು ಅವತಾರ ತಾಳಿದ ಮೂರನೇ ಅವತಾರವೇ ಈ ಮಧ್ವಾಚಾರ್ಯರ ಅವತಾರ ತ್ರೇತಾಯುಗದಲ್ಲಿ ಹನುಮಂತದೇವರಾಗಿ, ದ್ವಾಪರಯುಗದಲ್ಲಿ ಭೀಮಸೇನ ದೇವರಾಗಿ ಹಾಗೂ ಕಲಿಯುಗದಲ್ಲಿ ಶ್ರೀ ಮಧ್ವಾಚಾರ್ಯರಾಗಿ ಅವತರಿಸಿದರು ಎಂದು ಹೇಳಿದರು, ಉಡುಪಿಯ ಅನಂತೇಶ್ವರ ದೇವಸ್ಥಾನದಲ್ಲಿ ಮಧ್ವಾಚಾರ್ಯರು ಶಿಷ್ಯರಿಗೆ ಪಾಠ ಮಾಡುತ್ತಾ ಅದೃಶ್ಯರಾಗಿ ಬದರಿಕಾಶ್ರಮಕ್ಕೆ ತೆರಳಿದ ದಿನವನ್ನೇ ಮಧ್ವ ನವಮಿ ಎಂದು ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅರ್ಚಕರಾದ ಗುರುರಾಜಾಚಾರ್ಯ ಪಾಲ್ಮೂರ, ನಾಗರಾಜ ಮೂಲಿಮನಿ, ಡಾ.ಬಿ. ಆರ್.ಜಾಗೀರದಾರ್, ರಾಮಾಚಾರ್ಯ ಜೋಷಿ, ಗಣಪತರಾವ ಕುಲಕರ್ಣಿ ದೇವಿಕೇರಿ, ಸೀತಾರಾಮಾಚಾರ್ಯ ಐಜಿ, ನರಸಿಂಹ ಬಡಶೇಷಿ, ನಾಗರಾಜ ಪಾಲ್ಮೂರ, ಕೃಷ್ಣಮೂರ್ತಿ ಭಂಡಿ, ಶ್ರೀನಿವಾಸಚಾರ್ಯ ಪ್ರತಿನಿಧಿ, ಶ್ರೀಕಾಂತ ಜೋಷಿ, ವಾದಿರಾಜ ಬೂದುರು, ಅನಂತಾಚಾರ್ಯ ಪಾಲ್ಮೂರ, ರಾಘವೇಂದ್ರ ಭಕ್ರಿ ಹಾಗೂ ಮಹಿಳಾ ಭಜನಾ ಮಂಡಳಿಯವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here