ಕವಿತೆ ಕಣ್ಣೀರು ಒರೆಸುವ ಕೆಲಸ ಮಾಡಬೇಕು: ಡಾ. ಎಚ್.ಎಸ್ವಿ

0
65

ಕಲಬುರಗಿ: ಗಣಿತದಲ್ಲಿ ಒಂದಕ್ಕೆ ಒಂದು ಸೇರಿದರೆ ಎರಡಾಗುತ್ತದೆ ಆದರೆ ಅಗಣಿತ ಎಂದು ಕರೆಯುವ ಕಾವ್ಯದ ಭಾಷೆಯಲ್ಲಿ ಹೇಳುವುದಾದರೆ ಅದು ದೊಡ್ಡ ಒಂದಾಗುತ್ತದೆ. ಇದು ಭಾರತದ ಮಟ್ಟಿಗೆ ಸದ್ಯ ಆಗಬೇಕಿರುವ ಕೆಲಸ ಎಂದು ಹಿರಿಯ ಸಾಹಿತಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.

ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಆದ್ಯಯನ ಸಂಸ್ಥೆ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ೫೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಗೌರವ ಸಮರ್ಪಣೆ ಹಾಗೂ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಮೃದುವಾದ ಮನಸ್ಸು ಇಷ್ಟವಾಗುತ್ತದೆ. ಕಾವ್ಯಗಳಲ್ಲಿ ಕಣ್ಣೀರು ಒರೆಸುವ ಕರ್ತವ್ಯ ನಿರ್ವಹಿಸಬೇಕು ಎಂದರು.

Contact Your\'s Advertisement; 9902492681

ತಾಯಂದಿರು ಮಕ್ಕಳಿಗೆ ಕನ್ನಡ ಕಲಿಸಬೇಕು. ನಗರದ ಆಕರ್ಷಣೆಯಿಂದ ಬದುಕು ಬರಡಾಗುತ್ತಿದೆ. ಕಸವನ್ನು ರಸವನ್ನಾಗಿ ಮಾಡುವುದೇ ಕಾವ್ಯದ ಕೆಲಸ. ಲೇಖಕರು ಹೆಣ್ಣಿನ ಪರವಾಗಿ ಮಾತನಾಡಬೇಕು. ಎಲ್ಲ ಸಮಸ್ಯೆಗೂ ಒಂದು ಪರಿಹಾರವಿದೆ ಎಂದು ಹೇಳಿದರು.

ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಎಚ್.ಟಿ.‌ಪೋತೆ ಹಾಗೂ ವಿಮರ್ಶಕಿ ಡಾ. ಪಿ. ಚಂದ್ರಿಕಾ ಅಭಿನಂದನಾ ನುಡಿಗಳನ್ನಾಡಿ ಎಚ್ ಎಚ್ ಎಸ್ವಿ ಬದುಕು ಹಾಗೂ ಬರಹವನ್ನು ಹಿಡಿದಿಟ್ಟರು.

ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಇದೇವೇಳೆಯಲ್ಲಿ ಅಭಿನವ ಪ್ರಕಾಶನದ ಸಿಂದಾಬಾದನ ಆತ್ಮಕಥೆ, ಮತ್ತು ಹರಿಗೋಲು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.  ಗುಲ್ಬರ್ಗ ವಿವಿ ಕುಲಪತಿ ಡಾ. ದೇವಿದಾಸ ಜಿ. ಮಾಲೆ, ಸಿಯುಕೆ ಮಾನವಿಕ ಹಾಗೂ ಭಾಷಾ ನಿಕಾಯದ ಡೀನರಾದ ಸುನಿತಾ ಮಂಜನಬೈಲ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಸಿಯುಕೆ ಕುಲಪತಿ ಪ್ರೊ. ಎಚ್.ಎಂ. ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಸಿಯುಕೆ ಕುಲಸಚಿವ ಪ್ರೊ. ಮುಷ್ತಾಕ್ ಅಹಮದ್ ಪಟೇಲ್, ಗುಲ್ಬರ್ಗ ವಿವಿ ಕುಲಸಚಿವ ಪ್ರೊ. ಸಿ. ಸೋಮಶೇಖರ ವೇದಿಕೆಯಲ್ಲಿ ಇದ್ದರು. ಅಭಿನವ ಪ್ರಕಾಶನದ ನ.ರವಿಕುಮಾರ ವಂದಿಸಿದರು.

ಸಾಹಿತಿಗಳು, ಬರಹಗಾರರಾದ ಎಸ್.ಜಿ.‌ ಸಿದ್ಧರಾಮಯ್ಯ, ಪ್ರೊ. ದೊಡ್ಡರಂಗೇಗೌಡ, ಸಿದ್ಧರಾಮ ಹೊನಕಲ್, ಡಾ. ಶ್ರೀಶೈಲ ನಾಗರಾಳ, ಡಾ.‌ಡಿ.ಜಿ.‌ಸಾಗರ, ಪ್ರೊ. ಕಲ್ಯಾಣರಾವ ಪಾಟೀಲ, ಮಹಿಪಾಲರೆಡ್ಡಿ ಮುನ್ನೂರು, ಶಿವರಂಜನ್ ಸತ್ಯಂಪೇಟೆ, ಡಾ.‌ ಅಪ್ಪಗೆರೆ ಸೋಮಶೇಖರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here