ಎಕೆಆರ್ ದೇವಿ ಕಾಲೇಜು ವತಿಯಿಂದ ಸಾಹಿತ್ಯ ಸಮ್ಮೇಳನ ಜಾಗೃತಿ

0
58

ಕಲಬುರಗಿ: ಫೆ.೫ ರಿಂದ ಮೂರು ದಿನಗಳ ಕಾಲ ಕಲಬುರಗಿಯಲ್ಲಿ ನಡೆಯಲಿರುವ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಇಲ್ಲಿನ ಎಕೆಆರ್ ದೇವಿ ಪದವಿಪೂರ್ವ ಕಾಲೇಜಿನ ವತಿಯಿಂದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಸಾಹಿತ್ಯ ಪ್ರೇಮಿಗಳಾದ ರವೀಂದ್ರಕುಮಾರ ಭಂಟನಳ್ಳಿ, ಶಿವಾನಂಧ ಮಠಪತಿ, ಶಿಲ್ಪಾ ಜೋಶಿ, ಮನೋಹರ ಪೊದ್ದಾರ, ಶಕೀಲ್ ಅಹ್ಮದ್ ಮಿಯ್ಯಾ, ಸತೀಶ ಸಜ್ಜನಶೆಟ್ಟಿ ಮುಂತಾದವರ ನೇತೃತ್ವದಲ್ಲಿ ಬ್ರಹ್ಮಪೂರ ಬಡಾವಣೆ ಸೇರಿ ಎಂ.ಎಸ್.ಕೆ.ಮಿಲ್ ಚೌಕ್ ಮುಖಾಂತ ನಗರದ ವಿವಿಧ ಬಡಾವಣೆಗಳಲ್ಲಿ ಸಮ್ಮೇಳನದಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಪ್ರೇರೆಪಿಸಿ ಜನಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಶರತ, ಕಲಬುರಗಿಯಲ್ಲಿ ನಡೆಯಲಿರುವ ಅಕ್ಷರ ಜಾತ್ರೆಯಲ್ಲಿ ಸರ್ವರೂ ಪಾಲ್ಗೊಳ್ಳುವ ಮೂಲಕ ನಾಡಿನ  ಸಾಹಿತ್ಯಿಕ ಚರಿತ್ರೆ-ಪರಂಪರೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಬೇಕೆಂದ ಅವರು, ಈ ನಿಟ್ಟಿನಲ್ಲಿ ಸಂಘಟಕ ವಿಜಯಕುಮಾರ ತೇಗಲತಿಪ್ಪಿಯವರ ಸಾಮಾಜಿಕ ಕಳಕಳಿ ಎಲ್ಲರೂ ಮೆಚ್ಚುವಂಥದ್ದು ಎಂದು ಮನದುಂಬಿ ಮಾತನಾಡಿದರು.

Contact Your\'s Advertisement; 9902492681

ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ ಮಾತನಾಡಿ, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ನಡೆಯಲಿರುವ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಏಕೆಂದರೆ, ಸಮ್ಮೇಳನ ನಮ್ಮೆಲ್ಲರ ಹೆಮ್ಮೆಯ ನುಡಿ ಜಾತ್ರೆಯಾಗಿದ್ದು, ಜನಸಾಮಾನ್ಯರ ಸಂಭ್ರಮದ ಸಮ್ಮೇಳನ ಆಗಲಿ. ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಅತೀ ಶ್ರೀಮಂತಿಕೆ ಹೊಂದಿದ ಪ್ರದೇಶ ಇದಾಗಿದ್ದು, ಕನ್ನಡ ಸಾರಸ್ವತ ಲೋಕಕ್ಕೆ ಮೊಟ್ಟ ಮೊದಲ ಗ್ರಂಥ ಕೊಟ್ಟ ನೆಲವಾಗಿದೆ. ಹಾಗಾಗಿ, ಇಂಥ ಅನೇಕ ಐತಿಹಾಸಿಕ ಪರಂಪರೆ ಹೊಂದಿರುವ ಈ ಭಾಗ ಹಲವು ಪ್ರಥಮಗಳನ್ನು ನಾಡಿಗೆ ನೀಡಿದೆ.

ಸುದೀರ್ಘ ೩೨ ವರ್ಷಗಳ ನಂತರ ನಡೆಯುತ್ತಿರುವ ಅಕ್ಷರ ಜಾತ್ರೆ ನಮ್ಮೆಲ್ಲರ ಸ್ವಾಭಿಮಾನದ ಪ್ರತೀಕವಾಗಿದ್ದು, ಆ ಮೂಲಕ  ಈ ನೆಲದ ಸಂಸ್ಕೃತಿ – ಪರಂಪರೆ ಎತ್ತಿ ಹಿಡಿಯುವ ಕಾರ್ಯ ಈ ಸಮ್ಮೇಳನದ ಮುಖಾಂತರ ಮಾಡಬೇಕಿದೆ. ಹಾಗಾಗಿ, ಸರ್ವರೂ ಬನ್ನಿ… ಒಟ್ಟುಗೂಡಿ ಕನ್ನಡ ತೇರನ್ನು ಸಮರ್ಪಕವಾಗಿ ಎಳೆಯೋಣ ಎಂದು ಹೇಳಿದರು.

ನಗರ ಉಪ ಪೊಲೀಸ್ ಆಯುಕ್ತ ಡಿ.ಕಿಶೋರಬಾಬು, ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಪ್ರಸಿದ್ಧ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಮಕ್ಕಳ ಜಾಗೃತಿ ಆಂದೋಲನಕ್ಕೆ ಹೆಜ್ಜೆ ಹಾಕಿ, ಜನರ ಮನಸ್ಸನ್ನು ಗೆದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here