ಸುರಪುರ: ಯಾದಗಿರಿ ಜಿಲ್ಲೆಯ ರಾಜ್ಯ ಗುಪ್ತವಾರ್ತೆ ಇಲಾಖೆಗೆ ನೂತನ ಉಪ ಅಧೀಕ್ಷಕ (ಡಿಎಸ್ಪಿ)ಗಳಾಗಿ ಆಗಮಿಸಿದ ಶ್ರೀಧರ ದೊಡ್ಡಿಯವರನ್ನು ನಗರದ ಟೈಲರ್ ಮಂಜಿಲ್ನಲ್ಲಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದಿಂದ ಸನ್ಮಾನಿಸಿ ಕರ್ತವ್ಯಕ್ಕೆ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ,ಗೋಪಾಲ ಬಾಗಲಕೋಟೆ,ಶರಣಪ್ಪಗೌಡ,ದೇವಿಂದ್ರಪ್ಪ ಹಾಗು ರಾಜ್ಯ ಗುಪ್ತವಾರ್ತೆ ಸುರಪುರ ತಾಲೂಕು ಪೇದೆ ಶಿವರಾಜಕುಮಾರ ಪಾಣೆಗಾಂವ ಇದ್ದರು.