ಕಲಬುರಗಿ: ಬೆಳೆಯುವ ಮಕ್ಕಳಿಗೆ ವಿದ್ಯಾ ಕಲಿಸುವುದರೊ೦ದಿಗೆ ಸಂಸ್ಕಾರ ಕಲಿಸುವುದು ಅಷ್ಟೇ ಮುಖ್ಯ ವಿದ್ಯೆಯೊ೦ದಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ಪಠೇತರ ಚಟುವಟಿಕೆ, ಹಾಗೂ ಮಕ್ಕಳಿಗೆ ಸಂಸ್ಕಾರ ಹೇಳಿಕೊಡುವುದು ಅಷ್ಟೇ ಅವಶಕತೆಯಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಯುವ ಘಟಕದ ಅದ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಶಿವರಾಜ ಅಂಡಗಿ ಅಭಿಪ್ರಾಯ ಪಟ್ಟಿದ್ದಾರೆ.
ಇತ್ತೀಚೆಗೆ ನಗರದ ಮಾಣಿಕ್ ಪ್ರಭು ಬಡಾವಣೆ ಜೈ ಭವಾನಿ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಪರಾಜಿತ ಶಾಲೆಯ 3 ನೇ ವಾರ್ಷಕೊತ್ಸವ ಕಾರ್ಯಕ್ರಮ ಉದ್ಘಾಟಿಸಿದ ಶಿವರಾಜ ಅಂಡಗಿ ಅವರು ಮಾತನಾಡುತ್ತಾ ಮಕ್ಕಳಿಗೆ ಪುಸ್ತಕದ ಜ್ಞಾನದ ಜೊತೆಗೆ ಒಳ್ಳೆಯ ನಡೆ,ನುಡಿ,ಆಚರ,ವಿಚಾರ ಸಂಗೀತ ನೃತ್ಯ ಹೇಳಿಕೊಡುತ್ತಿರುವ ಶಿಕ್ಷಕರೆ ಮಕ್ಕಳ ಪಾಲಿನ ದೇವರು ಎಂದು ಶಿಕ್ಷಕ ಹಾಗೂ ಮಕ್ಕಳ ನುದ್ದೆಶಿಸಿ ಮಾತನಾಡುವ ನಾಳೆಯಿಂದ ಕಲಬುರಗಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಾವು ಮಕ್ಕಳೊಂದಿಗೆ ಭಾಗವಹಿಸಿ ಮಕ್ಕಳಿಗೆ ಕನ್ನಡ ನಾಡು,ನುಡಿ,ಭಾಷೆ ಬಗ್ಗೆ ಅಭಿಮಾನ ಹೆಚ್ಚಿಸುವಂತೆ ಸಹಕರಿಸಿ ಎಂದು ಕರೆಕೊಟ್ಟರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ನ್ಯಾಯವಾದಿ ಗುರುಸ್ವಾಮಿ ಶೆಂಕಿನಮಠ ಆಗಮಿಸಿದರು, ಸಂಸ್ಥೆಯ ಅಧ್ಯಕ್ಷೆ ಪುಪ್ಪಾಂಜಲಿ ಭಂಡಾರಿ,ಕಾರ್ಯದರ್ಶಿ ರಾಜಗೊಪಾಲ ಭಂಡಾರಿ,ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಾಲೆಯ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡ ಸಂಗೀತ ನೃತ್ಯ ವಿವಿಧ ಸಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಮೇಡಲ್ ಪ್ರದಾನ ಮಾಡಲಾಯಿತು.
ಹಿರಿಯರಾದ ದಯಾನಂದ ಏಕಭೊಟೆ, ಕೃಷಿ ಅದಿಕಾರಿಗಳಾದ ಮಹೇಂದ್ರ ಕುಮಾರ ಶಂಕರ ಗೊಟುರ,ಡಾ ವಿವೇಕಾನಂದ ಬುಳ್ಳಾ ಟೇಂಗಳಿ, ನ್ಯಾಯವಾದಿ ವಿನೊದಕುಮಾರ ಜನವರಿ ಅರ್ಚನಾ,ಭೂಮಿಕಾ,ಅಶ್ವಿನಿ ಇತರರಿದ್ದರು.