ಕನ್ನಡ ಸಾಹಿತ್ಯ ಸಮ್ಮೇಳನ: ಫೆ. 6 ರಂದು ಜರುಗುವ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ

0
206

ಕಲಬುರಗಿ: (ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಫೆಬ್ರವರಿ 5 ರಿಂದ 7ರವರೆಗೆ ಜರುಗಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಇದೇ ಫೆಬ್ರವರಿ 6 ರಂದು ವಿವಿಧ ವೇದಿಕೆಗಳಲ್ಲಿ ಏರ್ಪಡಿಸಲಾಗುವ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ ಇಂತಿದೆ.

ಅಂದು ಸಂಜೆ 6.30 ರಿಂದ ರಾತ್ರಿ 11 ಗಂಟೆಯವರೆಗೆ ವಿಶ್ವವಿದ್ಯಾಲಯದ ಆವರಣದ ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ಜರುಗುವ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ ಇಂತಿದೆ. ಕಲಬುರಗಿಯ ಹರ್ಷಿತ ಸಿ ಮತ್ತು ತಂಡದಿಂದ ಭರತನಾಟ್ಯ, ಸುರಪುರದ ಲಕ್ಷ್ಮಣ ಗುತ್ತೇದಾರ ಅವರಿಂದ ಜನಪದ ಗೀತೆ, ಯಾದಗಿರಿಯ ಬಸವರಾಜ ಬಂಟನೂರ ಅವರಿಂದ ವಚನ ಗಾಯನ, ಬೆಂಗಳೂರಿನ ಖ್ಯಾತ ಹಿನ್ನೆಲೆ ಗಾಯಕಿ ಇಂದು ನಾಗರಾಜ ಅವರಿಂದ ರಸಮಂಜರಿ, ಕಲಬುರಗಿಯ ಅನಂತ ಚಿಂಚನಸೂರ ಅವರಿಂದ ಭರತನಾಟ್ಯ, ಇಳಕಲ್‍ನ ರಂಗಗೀತೆ ಕಲಾ ಸಂಘದ ಶಿವರಂಜನಿ ಅವರಿಂದ ಸುಗಮ ಸಂಗೀತ, ರಾಯಚೂರಿನ ಸಂಗೀತ ಕಾಖಂಡಕಿ ಅವರಿಂದ ದಾಸವಾಣಿ, ಕಲಬುರಗಿ ಸಿದ್ಧರಾಮಪ್ಪ ಪೊಲೀಸ್ ಪಾಟೀಲ ಅವರಿಂದ ಭಾವಗೀತೆ, ಗಂಗಾವತಿಯ ಗೋವಿಂದರಾಜು ಅವರಿಂದ ಕೊಳಲು ವಾದನ, ಕಲಬುರಗಿಯ ಪ್ರಸನ್ನ ವೆಂಕಟೇಶ ಕೊರತಿ ಅವರಿಂದ ಸುಗಮ ಸಂಗೀತ, ಪ್ರೋ.ರೇವಯ್ಯ ವಸ್ತ್ರದಮಠ ಅವರಿಂದ ಹಿಂದುಸ್ತಾನಿ ಸಂಗೀತ, ವಿಜಯಪುರದ ಜ್ಯೋರ್ತಿಲಿಂಗ ಚಂದ್ರಾಮ ಹೊನ್ನಕಟ್ಟಿ ಅವರಿಂದ ತತ್ವಪದ, ಕಲಬುರಗಿಯ ಶಂಕ್ರಪ್ಪ ಬಿ.ಹೂಗಾರ ಅವರಿಂದ ವಚನ ಗಾಯನ, ಶಿವಮೊಗ್ಗದ ವಿದ್ವಾನ್ ದತ್ತಮೂರ್ತಿ ಭಟ್ ಅವರಿಂದ ದಾಸರ ಪದಗಳು ಹಾಗೂ ಕಲಬುರಗಿಯ ಅಣ್ಣಾರಾವ ಶೆಳ್ಳಗಿ ಅವರಿಂದ ಭಾವಗೀತೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.

Contact Your\'s Advertisement; 9902492681

ಅಂದು ಸಂಜೆ 7 ರಿಂದ ರಾತ್ರಿ 10.30 ಗಂಟೆಯವರೆಗೆ ವಿಶ್ವವಿದ್ಯಾಲಯದ ಆವರಣದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ (ಸಮಾನಾಂತರ ವೇದಿಕೆ-1)ರಲ್ಲಿ ಜರುಗುವ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ ಇಂತಿದೆ.

ಬೆಂಗಳೂರಿನ ವಿದ್ವಾನ್ ನಾಗೇಂದ್ರ ಟಿ.ರಾಣಾಪೂರ ಅವರಿಂದ ಸುಗಮ ಸಂಗೀತ, ವಿದ್ವಾನ್ ನಾಗಭೂಷಣ ಅವರಿಂದ ಭರತ ನಾಟ್ಯ, ಬಳ್ಳಾರಿಯ ಸವಿತಾ ಅಮರೇಶ ನುಗಡೋಣಿ ಅವರಿಂದ ಸುಗಮ ಸಂಗೀತ, ಕೊಪ್ಪಳದ ಅಕ್ಕಮಹಾದೇವಿ ರಾಬೂರ ಅವರಿಂದ ಲಾವಣಿ ಪದ, ಬೆಂಗಳೂರಿನ ತ್ರೀವೇಣಿ ಮತ್ತು ವಿಜಯಲಕ್ಷ್ಮೀ ಅವರಿಂದ ಭಾವಗೀತೆ, ಶಿವಮೊಗ್ಗದ ಶ್ರೀನಿವಾಸ ಅರುಣ ಹಂಪಿಹೊಳಿ ಅವರಿಂದ ಹಿಂದೂಸ್ತಾನಿ ಸಂಗೀತ, ಬೀದರನ ರಾಣಿ ಸತ್ಯಮೂರ್ತಿ ಅವರಿಂದ ಜಾನಪದ ನೃತ್ಯ, ಉಡುಪಿಯ ಶ್ರೀ ದುರ್ಗಾ ಪರಮೇಶ್ವರಿ ಹೋಳಿ ತಂಡದಿಂದ ಕರಾವಳಿ ಹೋಳಿ ಕುಣಿತ, ಕಲಬುರಗಿಯ ಗುರುಬಸಯ್ಯ ಎಂ. ಹಿರೇಮಠ ಅವರಿಂದ ಹಿಂದೂಸ್ತಾನಿ ಸಂಗೀತ, ಕಲಬುರಗಿಯ ಅಪರ್ಣ ಎಂ.ದೊಡ್ಡಮನಿ ಅವರಿಂದ ಭಾವಗೀತೆ, ಕಲಬುರಗಿಯ ಸಿದ್ದಪ್ಪ ಹಣಮಂತ ನಾಗರಳ್ಳಿ ಅವರಿಂದ ಸುಗಮ ಸಂಗೀತ, ಕರಬಸಯ್ಯಸ್ವಾಮಿ ಯಲಮಾಮಡಿ ಅವರಿಂದ ತತ್ವಪದ, ಕೊಪ್ಪಳದ ಮಾರಪ್ಪ ದಾಸರ ಅವರಿಂದ ತಂಬೂರಿ ಪಿಟೀಲು ವಾದನ, ಅಫಜಲಪುರದ ಶಿವಶರಣಪ್ಪ ಗುಂದಗಿ ಅವರಿಂದ ಸುಗಮ ಸಂಗೀತ ಹಾಗೂ ಬಳ್ಳಾರಿಯ ಶ್ರೀ ಎಲಿಹಾಳ ಸಿದ್ದಯ್ಯ ಸ್ವಾಮಿ ಕಲಾಬಳಗದಿಂದ “ಉಪಪಾಂಡವರ ಸಂಹಾರ” ನಾಟಕ ಪ್ರದರ್ಶನಗೊಳ್ಳಲಿದೆ.
ಅಂದು ಸಂಜೆ 5.30ರಿಂದ ರಾತ್ರಿ 10 ಗಂಟೆಯವರೆಗೆ ವಿಶ್ವವಿದ್ಯಾಲಯದ ಆವರಣದಲ್ಲಿನ ಮಹಾತ್ಮಗಾಂಧಿ ಸಭಾಂಗಣ (ಸಮಾನಾಂತರ ವೇದಿಕೆ-2) ಜರುಗುವ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ ಇಂತಿದೆ.

ರಾಯಚೂರಿನ ಶಾಂತಾ ಕುಲಕರ್ಣಿ ಅವರಿಂದ ರಂಗಗೀತೆಗಳು, ಸೇಡಂನ ಗಂಗಮ್ಮ ತಾಯಿತ ಅವರಿಂದ ಜನಪದ ಹಾಡು, ಕಲಬುರಗಿಯ ಗುರುಶಾಂತಯ್ಯ ಸ್ಥಾವರಮಠ ಅವರಿಂದ ವಚನ ಗಾಯನ, ಆಕಾಂಕ್ಷ ಪುರಾಣಿಕ ಅವರಿಂದ ಭರತ ನಾಟ್ಯ, ಸಿದ್ಧಾರ್ಥ ಚಿಮ್ಮಇದಲಾಯಿ ಅವರಿಂದ ವಚನ ಗಾಯನ, ಬಸವರಾಜ ಚೆನ್ನಪ್ಪಾ ಅವರಿಂದ ಬಯಲಾಟ, ಹಾವೇರಿಯ ಮಹೇಶ್ವರಿ ಅವರಿಂದ ದೊಡ್ಡಾಟ-ವಚನ ನೃತ್ಯ, ಚಿತ್ರದುರ್ಗದ ಕೃಷ್ಣಪ್ಪ ಅವರಿಂದ ಜನಪದ ಹಾಡು, ಬೀದರಿನ ಲಕ್ಷ್ಮೀ ಅವರಿಂದ ನೃತ್ಯ, ಮೈಸೂರಿನ ಆರ್.ಸಿ.ರಾಜಲಕ್ಷ್ಮೀ ಅವರಿಂದ ಸುಗಮ ಸಂಗೀತ, ಗದಗಿನ ಆದರ್ಶ ಕಲಾ ತಂಡದಿಂದ ಜನಪದ ನೃತ್ಯ, ಬೀದರಿನ ರೇಖಾ ಸೌದಿ ಅವರಿಂದ ಜನಪದ ಗೀತೆ, ಕೊಪ್ಪಳದ ಹುಲಗಿ ನಾಟ್ಯ ನಾದ ಕಲಾ ಸಂಘದಿಂದ ಭರತನಾಟ್ಯ, ಬಾಗಲಕೋಟೆಯ ಸ್ಪೂರ್ತಿ ಶೆಟ್ಟಿ ಅವರಿಂದ ಭರತನಾಟ್ಯ, ಕಲಬುಗಿಯ ಆರ್ಟ್ ಥೇಟರ್ ದಿಂದ “ವಿಧೂಷಕ” ನಾಟಕ ಪ್ರದರ್ಶನ ಹಾಗೂ ಕಲಬುರಗಿ ರಂಗಾಯಣದಿಂದ “ಹುಕುಂ ಪತ್ರ” ನಾಟಕವನ್ನು ಪ್ರದರ್ಶಿಸಲಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here