ಕಲಬುರಗಿ: ಕನ್ನಡ ನಾಡು,ನುಡಿ, ಜಲಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದಲ್ಲ, ಬದಲಾಗಿ ಸರ್ಕಾರ ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.
ಕಲಬುರ್ಗಿ ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ೮೫ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಬುಧವಾರ ಸಾಯಂಕಾಲ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನೆಮಾತು,ವ್ಯವಹಾರ, ಬದುಕಿನಲ್ಲಿ, ಸಮಾಜದಲ್ಲಿ ರಾಜ್ಯದಲ್ಲಿ ಒಂದೇ ಭಾಷೆಯಾಗಿರಬೇಕು ಅದುವೇ ಕನ್ನಡ ವಾಗಿರಬೇಕು ಎಂದರು.
ಪ್ರಾದೇಶಿಕ ಭಾಷೆಗಳು ಸತ್ತರೆ ಸಮಾಜ, ಜನರ ಬದುಕು,ಭಾವನೆಗಳ ಜೊತೆಗೆ ಕುಟುಂಬಗಳು ಸಾಯುತ್ತವೆ. ಅವುಗಳನ್ನು ಪೋಷಿಸುವ ಕಾರ್ಯ ಇಂದಿನ ದಿನಗಳಲ್ಲಿ ನಡೆಯಬೇಕು ಎಂದು ಒತ್ತಾಯಿಸಿದರು.
ಪಾಶ್ಚಾಮತ್ತೀಕರಣಕ್ಕೆ ನಮ್ಮ ಸಂಸ್ಕೃತಿ ತ್ಯಜಿಸುತ್ತಿದೆ ಹೀಗಾಗಿ ನಮ್ಮ ಪರಂಪರೆ ಉಳಿವಿಕೆಗೆ ಮತ್ತು ಜಾಗೃತಿಗೆ ಇಂತಹ ಸಮ್ಮೇಳನ ಅವಶ್ಯಕವಿದ್ದು, ನಾವು ನಮ್ಮ ಭಾಷೆಯನ್ನು ಬೆಳೆಸಲು ಉತ್ಸುಕರಾಗಬೇಕು ಎಂದು ತಿಳಿಸಿದರು.
ಆಧುನಿಕ ಯುಗದಲ್ಲಿ ಕನ್ನಡ ಉಳಿಸಬೇಕಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಹೀಗಾಗಿ ನಮ್ಮ ಭಾಷೆಯ ಪೋಷಣೆಗೆ ಈ ಸಾಹಿತ್ಯ ಸಮ್ಮೇಳನ ಪೂರಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅಧ್ಯಕ್ಷತೆ ವಹಿಸಿದರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮನು ಬಳಿಗಾರ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಶಾಸಕ ಅವಿನಾಶ್ ಜಾಧವ್,ಎಂ ಎನ್ ವಾನತಿ ಇದ್ದರು.