ಸಾಹಿತಿ ನಾಗಪ್ಪ ತ್ರಿವೇದಿ ನಿಧನ: ಕನ್ನಡ ಸಾಹಿತ್ಯ ಸಂಘದಿಂದ ಶ್ರದ್ಧಾಂಜಲಿ

1
207

ಸುರಪುರ: ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಬೆಳವಣಿಗೆಯಲ್ಲಿ ಸಾಹಿತಿ ನಾಗಪ್ಪ ತ್ರಿವೇದಿಯವರ ಕೊಡುಗೆ ದೊಡ್ಡದಿದೆ.ಇಂದು ಅವರು ನಮ್ಮನ್ನಗಲಿದ್ದು ಸಂಘಕ್ಕೆ ಬಹುದೊಡ್ಡ ನಷ್ಟವುಂಟಾಗಿದೆ ಎಂದು ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸುರೇಶ ಸಜ್ಜನ ಮಾತನಾಡಿದರು.

ಬುಧವಾರ ರಾತ್ರಿ ನಿಧನರಾದ ಹಿರಿಯ ಚುಟುಕು ಸಾಹಿತಿ ನಾಗಪ್ಪ ತ್ರಿವೇದಿಯವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಈ ಸಂಘವನ್ನು ಕಟ್ಟಿ ಬೆಳೆಸುವಲ್ಲಿ ಬುದ್ಧಿವಂತ ಶೆಟ್ಟರು ಮತ್ತು ನಾಗಪ್ಪ ತ್ರಿವೇದಿಯವರ ಶ್ರಮ ದೊಡ್ಡದಿದೆ.ಇವರೊಂದಿಗೆ ಶಾಂತಪ್ಪ ಬೂದಿಹಾಳವರು ಜೊತೆಗೂಡಿ ನಾಡಿನ ಅನೇಕ ಮೇರು ಸಾಹಿತಿಗಳನ್ನು ಇಲ್ಲಿಗೆ ಕರೆತಂದು ಅನೇಕ ಕಾರ್ಯಕ್ರಮಗಳನ್ನು ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.ನಮ್ಮ ಸಂಘದ ಗೌರವಾಧ್ಯಕ್ಷರಾಗಿ ಇಂದಿಗೂ ಚಿರ ಯುವಕರಂತೆ ಲವಲವಿಕೆಯಿಂದಿರುತ್ತಿದ್ದ ಅವರ ಇನ್ನೊಂದು ಆಸೆಯಾಗಿದ್ದು ಸಂಘದ ವಜ್ರ ಮಹೋತ್ಸವವನ್ನು ಆಚರಿಸುವುದಾಗಿತ್ತು.ಆದರೆ ದುರಾದೃಷ್ಟ ನಾವು ಅವರನ್ನು ಕಳೆದುಕೊಂಡಿದ್ದೆವೆ.ಮುಂದಿನ ದಿನಗಳಲ್ಲಿ ವಜ್ರ ಮಹೋತ್ಸವದೊಂದಿಗೆ ಅವರ ನೆನಪು ಶಾಸ್ವತ ಉಳಿಯುವಂತ ಕಾರ್ಯವನ್ನು ಎಲ್ಲರು ಸೇರಿ ಮಾಡೋಣ ಎಂದರು.

Contact Your\'s Advertisement; 9902492681

ನಗರ ಯೊಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ,ಒಬ್ಬ ಹಿರಿಯ ಸಾಹಿತಿಯನ್ನು ಕಳೆದುಕೊಂಡು ಸಂಘಕ್ಕೆ ಬಹುದೊಡ್ಡ ಹಾನಿಯಾಗಿದೆ,ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಮತ್ತು ನಾಗಪ್ಪ ತ್ರಿವೇದಿ ಸರ್ ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಮತ್ತೋರ್ವ ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ಮಾತನಾಡಿ,ತ್ರಿವೇದಿಯವರು ಯಾವುದೆ ಹೊಸ ಕವನ ಅಥವಾ ಚುಟುಕು ಬರೆದರೆ ನನ್ನಿಂದ ಓದಿಸಿ ಅದರ ಬಗ್ಗೆ ಚರ್ಚೆ ಮಾಡುತ್ತಿದ್ದರು.ಅವರನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಎಂದು ಭಾವಿಸಿರಲಿಲ್ಲ.ಅವರಿನ್ನು ಕೆಲ ಕಾಲ ನಮ್ಮೊಂದಿಗಿರಬೇಕಿತ್ತು,ಸಂಘದ ಅಮೃತ ಮಹೋತ್ಸವ ನೋಡಬೇಕಿತ್ತು,ಇಂದು ಅವರನ್ನು ಕಳೆದುಕೊಂಡು ದಿಗ್ಭ್ರಮೆಯಾಗಿದೆ ಎಂದು ನೋವಿನಿಂದ ನುಡಿದರು.ಇದೇ ಸಂದರ್ಭದಲ್ಲಿ ತ್ರಿವೇದಿಯವರ ಒಡನಾಡಿ ಜನಾರ್ಧನರಾವ್ ವಿಭೂತೆಕೂಡ ಮಾತನಾಡಿದರು.

ಸಭೆಯ ಆರಂಭದಲ್ಲಿ ನಾಗಪ್ಪ ತ್ರಿವೇದಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಆತ್ಮಕ್ಕೆ ಶಾಂತಿ ಕೋರಲಾಯಿತು.ಸಭೆಯಲ್ಲಿ ಸಂಗಣ್ಣ ಎಕ್ಕೆಳ್ಳಿ,ಶರಣಪ್ಪ ಕಲಕೇರಿ,ವೆಂಕಟೇಶ ಗದ್ವಾಲ,ಸೋಮಯ್ಯ ಕಡೆಚೂರ,ಹಣಮಂತಪ್ಪ ಗೋಗಿ,ಆನಂದ ಕುಂಬಾರ,ಮುರಳೀಧರ ಅಂಬುರೆ ಸೇರಿದಂತೆ ಅನೇಕರಿದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here