ಕನ್ನಡ ಜಾಗೃತಿ ಸಮಾವೇಶದಲ್ಲಿ ೨೧ ಸಾಧಕರಿಗೆ ಸನ್ಮಾನ: ವೆಂಕಟೇಶ ನಾಯಕ

0
82

ಸುರಪುರ: ೨೦೦೪ ರಿಂದ ರಾಜ್ಯದಲ್ಲಿ ಕನ್ನಡದ ಊಳಿವಿಗಾಗಿ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ ಅತಿದೊಡ್ಡ ಸಂಘಟನೆಯಾಗಿದೆ.ಬರೀ ಹೋರಾಟ ಮಾತ್ರವಲ್ಲದೆ ಈಗ ನಮ್ಮ ತಾಲೂಕು ಘಟಕದಿಂದ ಕನ್ನಡ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದ್ದು,ಸಮಾವೇಶದಲ್ಲಿ ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ವಿವಿಧ ರಂಗದಲ್ಲಿ ಸಾಧನೆಗೌದ ೨೧ ಜನ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಮಾತನಾಡಿದರು.

ನಗರದ ಟೈಲರ್ ಮಂಜಿಲ್‌ನಲ್ಲಿ ನಡೆದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿ, ಫೆ.೧೫ ರಂದು ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಆವರಣದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಈ ಸಮಾವೇಶಕ್ಕೆ ತಾಲೂಕಿನ ಪ್ರತಿ ಗ್ರಾಮ ಶಾಖೆಯಿಂದ ಕನಿಷ್ಟ ಇಪ್ಪತ್ತಕ್ಕು ಹೆಚ್ಚು ಜನ ಸಮಾವೇಶದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

Contact Your\'s Advertisement; 9902492681

ಸಭೆಯಲ್ಲಿ ಭಾಗವಹಿಸಿದ್ದ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ತೇಜರಾಜ ರಾಠೋಡ ಮಾತನಾಡಿ, ಕನ್ನಡ ನಾಡು ನುಡಿ ನೆಲ ಜಲ ಸಂರಕ್ಷಣೆಯಹೋರಾಟ ಮಾಡುತ್ತಾ ಅನೇಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಅದರಂತೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುದನ್ನು ಸಾಧಿಸಿ ತೋರಿಸಿದ ಕಿರ್ತಿ ಕ.ರ.ವೇ ರಾಜ್ಯಧ್ಯಕ್ಷರಾದ ಟಿ.ಎ.ನಾರಾಯಣಗೌಡರಿಗೆ ಸಲ್ಲುತ್ತದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಮಾತನಾಡಿ,ಕರವೇ ಸಂಘಟನೆಯು ಕೇವಲ ಹೋರಾಟಗಳಿಗೆ ಮಾತ್ರ ಸೀಮಿತವಾಗಿಲ್ಲ,ಅನೇಕ ಶಾಲೆಗಳನ್ನು ದತ್ತು ಪಡೆದು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದೆ.ಅನೇಕ ಜನ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸವನ್ನು ಮಾಡುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ತಾಲೂಕಿನ ಮಂಗಿಹಾಳ ಹಾಗು ಖಾನಾಪುರ ಎಸ್.ಹೆಚ್ ಗ್ರಾಮ ಶಾಖೆಗಳನ್ನು ರಚನೆ ಮಾಡಿ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.ಸಭೆಯಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿಶ್ವರಾಧ್ಯ ದಿಮ್ಮೆ,ಯಾದಗಿರಿ ನಗರ ಅಧ್ಯಕ್ಷ ರಿಯಾಜ್ ಪಟೇಲ್,ಉಪಾಧ್ಯಕ್ಷ ದೀಪಕ್ ಒಡೆಯರ್,ಜಿಲ್ಲಾ.ಸಂ. ಕಾರ್ಯದರ್ಶಿ ಭೀಮು ನಾಯಕ ಮಲ್ಲಿಭಾವಿ, ಹನುಮಂತ ಶಖಾಪುರ,ಶ್ರೀನಿವಾಸ ನಾಯಕ,ಪ್ರಕಾಶ ಹೆಗ್ಗಣದೊಡ್ಡಿ,ಮಲ್ಲು ಯಾದವ್,ಬಲಭೀಮ ಬೊಮ್ಮನಹಳ್ಳಿ,ರಮೇಶ ಖಾನಾಪುರ,ರವಿರಾಜ ಕಂದಳ್ಳಿ,ಗೋವಿಂದ ಕವಡಿಮಟ್ಟಿ,ಭೀಮರಾಯ ಬಾದ್ಯಾಪುರ,ಬಾಪುಗೌಡ ನಗನೂರ,ಶಾಂತಗೌಡ ದೇವಪೂರ,ಶ್ರೀಶೈಲ ಕಾಚಾಪುರ,ಮಲ್ಲು ಹಿರೇಮಠ,ಭಿಮನಗೌಡ ಕಕ್ಕೇರಿ,ಬಾಮಸಾಬ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here