ಸಮ್ಮೇಳನದಲ್ಲಿ ಸಿಎಎ, ಎನ್ ಆರ್ ಸಿ ವಿರೋಧಿಸಿ ಕರಪತ್ರ ಹಂಚಿಕೆ: ಬಂಧನ

0
274

ಕಲಬುರಗಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ವಿರೋಧಿಸಿ ಸಮಾಜವಾದಿ ಅಧ್ಯಯನ ಕೇಂದ್ರದ ಸದಸ್ಯರು ಕರಪತ್ರ ವಿತರಣೆ ಮಾಡುವ ವೇಳೆ ಪೊಲೀಸರು ಬಂಧಿಸಿರುವ ಘಟನೆ ಇಂದಿಲ್ಲಿ ನಡೆದಿದೆ.

ಗುಲಬರ್ಗಾ ವಿವಿ ಆವರಣದಲ್ಲಿ ನಡೆಯುತ್ತಿರುವ 85 ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯದ್ವಾರದ ಬಳಿಗೆ ಆಗಮಿಸಿದ ಕಾರ್ಯಕರ್ತರು, ಸಮ್ಮೇಳನಕ್ಕೆ ಆಗಮಿಸಿದ್ದ ಜನರಿಗೆ ಕರಪತ್ರ ಹಂಚುವ ಮೂಲಕ ಸಿಎಎ ಕಾಯ್ದೆಯ ವಿರುದ್ಧವಾಗಿ ಜನಜಾಗೃತಿ ಮೂಡಿಸುತ್ತಿದ್ದರು. ಈ ವೇಳೆ ಪೊಲೀಸರು ಎಲ್ಲರನ್ನು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.

Contact Your\'s Advertisement; 9902492681

ಬಿಡುಗಡೆಯಾದ ಬಳಿಕ ಮತ್ತೆ ವೇದಿಕೆಯ ಮುಖ್ಯದ್ವಾರದ ಬಳಿಗೆ ಬಂದಿದ್ದ ಅಲಿಬಾಬಾ ಸೇರಿದಂತೆ ಮತ್ತಿತರೆ ಕಾರ್ಯಕರ್ತರು ರಾಷ್ಟ್ರಧ್ವಜವನ್ನಿಟ್ಟುಕೊಂಡು ಮೌನ ಪ್ರತಿಭಟನೆ ಮುಂದುವರಿಸಿದರು. ಈ ನಡುವೆ ಸಮ್ಮೇಳನಕ್ಕಾಗಮಿಸಿದ್ದ ಕನ್ನಡ ಪ್ರೇಮಿಗಳು ಅವರೊ0ದಿಗೆ ಸೆಲ್ಪಿ ತೆಗೆದುಕೊಳ್ಳಲು ಮುಗಿದು ಬಿದ್ದದ್ದು ಕಂಡು ಬಂದಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here