85ನೇ ಸಾಹಿತ್ಯ ಸಮ್ಮೇಳನ ಯಶಸ್ವಿ: ಶಬ್ಬಾಷ್ ಶರತ್ ಅವರೆ

0
143

ಪ್ರತಿ ವರ್ಷವೂ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತವೆ. ಜಿಲ್ಲೆ ಘೋಷಣೆಯಾದಾಗಿನ ಮೊದಲನೇಯ ದಿನದಿಂದ ಈ ಕಾರ್ಯಕ್ರಮ ಪೂರ್ವ ತಯಾರಿ ನಡೆದಿರುತ್ತದೆ. ನಾನು ಗಮನಿಸಿದ ಇಲ್ಲಿವರೆಗಿನ ಸಮ್ಮೇಳನಗಳು ಬಹುತೇಕ ಪೂರ್ವತಯಾರಿಯಾಗಿದ್ದವು ಅದರಲ್ಲಿ ಕನ್ನಡಪರ ಸಂಘಟನೆಗಳು, ಉದ್ದಿಮೆದಾರರು, ಪರಿಷತ್ತಿನ ಪದಾಧಿಕಾರಿಗಳು ಹೀಗೆ ಅನೇಕರು ಶ್ರಮವಹಿಸುತ್ತಾರೆ. ಪ್ರತಿದಿನವೂ ಸಮಿತಿಗಳ ಮೂಲಕ ಕೆಲಸ ಅತ್ಯಂತ ಅಚ್ಚುಕಟ್ಟಾಗಿ ತಯಾರಿ ಮಾಡುತ್ತಾರೆ.

ನಾನು ಇತ್ತೀಚಗೆ ನನ್ನ ಸಂಸ್ಥೆಯ ಕೆಲಸದ ನಿಮಿತ್ಯ ಕಲಬುರಗಿ ಜಿಲ್ಲಾಧಿಕಾರಿಗಳ ಭೇಟಿಗೆಂದು ಅವರ ಕಛೇರಿಗೆ ಹೋಗಿದ್ದೆ, ಅಲ್ಲಿ ಜಿಲ್ಲಾಧಿಕಾರಿಯರ ಬಾಗಿಲ ಮುಂದೆ ಅನೇಕ ಜನರು ನಿಂತಿದ್ದರು, ಅವರೆಲ್ಲರೂ ಮಾತನಾಡುವಾಗ ಹೇಳಿದ್ದು ಇವರು ಕನ್ನಡದ ಡಿ.ಸಿ. ಸಮ್ಮೇಳನವನ್ನು ಅತ್ಯಂತ ಅಚ್ಚಕಟ್ಟಾಗಿ ಆಯೋಜನೆ ಮಾಡುತ್ತಿದ್ದು ಎಲ್ಲರಿಗೂ ಮೊದಲು ತಾವೆ ಮುಂದೆ ನಿಂತಿದ್ದಾರೆ ಅವರ ಕಾರ್ಯ ವೈಖರಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಧ್ಯ ಸಮ್ಮೇಳನ ಮುಗಿಯುವರೆಗೂ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದರು.

Contact Your\'s Advertisement; 9902492681

ಹೌದು ಕಲಬುರಗಿಯ ಮಾದರಿ ಸಮ್ಮೇಳನ ಏನಾದರು ಆಗಿದ್ದರೆ ಅದು ಕಲಬುರಗಿಯ ಮಾನ್ಯ ಜಿಲ್ಲಾಧಿಕಾರಿಗಳಾದ ಶರತ್ ಅವರೆ ಬಲವಾದ ಕಾರಣವಾಗಿದ್ದಾರೆ. ಸಾಮಾನ್ಯವಾಗಿ ಅಧಿಕಾರಿಗಳು ಇಂತಹ ಕಾರ್ಯಕ್ರಮದಲ್ಲಿ ಹೆಚ್ಚಿಗೆ ತಲೆ ಕೆಡಿಸಿಕೊಳ್ಳದೆ ವಹಸಿದ ಜವಾಬ್ದಾರಿ ನಿರ್ವಹಿಸಿ ಸುಮ್ಮನಾಗುತ್ತಾರೆ. ನಮ್ಮದು ಸರಕಾರಿ ನೌಕರಿ ಇವತ್ತು ಈ ಜಿಲ್ಲೆ ನಾಳೆ ಬೇರೆ ಜಿಲ್ಲೆ ಎಂದು ಅಷ್ಟೊಂದು ಸಿರೆಯಸ್ ತೊಗೊಳ್ಳೊದಿಲ್ಲ ಆದರೆ ಶರತ್ ಅವರು ಹಾಗೆ ಮಾಡದೇ ಅತ್ಯಂತ ಕಾಳಜಿಯುತವಾಗಿ ಎಲ್ಲರನ್ನು ಕರೆದುಕೊಂಡು ಹೋಗಿ ಮಾದರಿಯ ಅಕ್ಷರ ಜಾತ್ರೆ ಮಾಡಿದ್ದಾರೆ. ಸಭೆಗಳ ಮೇಲೆ ಸಭೆಗಳನ್ನು ಮಾಡಿ ಎಲ್ಲರಿಗೂ ಕನ್ನಡ ಧ್ವಜ ನೀಡಿದರು. ನಾನು ನೀನು ಎನ್ನುವುದು ಮರೆತು ಪಕ್ಷಭೇದ ಮರೆತು ಕನ್ನಡ ಕೆಲಸಕ್ಕೆ ಕರೆ ನೀಡಿದರು.

ಇನ್ನು ಅಕ್ಷರ ಜಾತ್ರೆ ಹತ್ತಿರಗೊಳ್ಳುತ್ತಿದ್ದಂತೆ ದೇಣಿಗೆ ಸಂಗ್ರಹದ ಕೊರತೆ ಎದ್ದು ಕಾಣತೊಡಗಿತು ಸರಕಾರದ ಹಣವೂ ತಡವಾಗತೊಡಗಿತು, ಮಾಧ್ಯಮಗಳು ಇದನ್ನೆ ಬಹಳ ವಿಶೇಷವಾಗಿ ಸುದ್ದಿ ಮಾಡತೊಡಗಿದರು. ಎಲ್ಲಿ ಅಕ್ಷರಜಾತ್ರೆ ನಿಂತೆ ಹೋಗುತ್ತದೆ ಎಂಬ ಆತಂಕ ಎಲ್ಲಡೆ ಮನೆಮಾಡಿತು. ಇನ್ನೂ ಅಧಿಕಾರಿದಲ್ಲಿರುವ ಸರಕಾರ ಉಡಾಫೆ ಮಾಡತನಾಡಿ ನಾನೇನು ಅಲ್ಲಿ ಬಂದು ಅಡಗಿ ಮಾಡಲೇಯಂದು ಎಂದು ಕೇಳುವ ಮಟ್ಟಕ್ಕೆ ಬಂದರು. ಇತ್ತ ಕಲಬುರಗಿಯಲ್ಲಿ ಸಾಂಸ್ಕೃತಿಕ ಸಂಘಟಕರು, ಸರಕಾರಿ ನೌಕರರು, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಹೋರಾಟಗಾರರು ಎಲ್ಲರೂ ನಮಗೆ ಸಮ್ಮೇಳನಕ್ಕೆ ಕರೆದೆಯಿಲ್ಲ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರೆದಾಡತೊಡಗಿತು. ರಾಜ್ಯದ ಪರಿಷತ್ತು ಅಧ್ಯಕ್ಷರಾದ ಮನು ಬಳಿಗಾರ ಅವರು ಸಮ್ಮೇಳನ ದಿನಾಂಕ ಘೋಷಣೆ ಮಾಡಿ ಬೆಂಗಳೂರು ಕಡೆಗೆ ಮುಖಮಾಡಿದವರು ಕಲಬುರಗಿ ಕಡೆಗೆ ಬರಲೇಯಿಲ್ಲ. ಈ ಅಕ್ಷರ ಜಾತ್ರೆಯಲ್ಲಿ ವೇದಿಕೆಯ ಅವಕಾಶ ದೊರೆತವರು ಮೌನವಾದರು ಅವಕಾಶ ವಂಚಿತರು ಪ್ರತ್ಯೇಕತೆ ಜೊತೆಗೆ ಕಪ್ಪು ಬಾವುಟ ಪ್ರದರ್ಶನ ಇತ್ಯಾದಿಗಳ ಬಗ್ಗೆ ಮಾತನಾಡತೊಡಗಿದರು.

ಈ ಮಧ್ಯೆದೊಳಗೆ ಸಮ್ಮೇಳನ ಯಶಸ್ವಿ ಮಾಡಿಯೇ ತೀರುವೆ ಎನ್ನುವ ಹಠತೊಟ್ಟ ಶರತ್ ಅವರು ಮೊದಲಿಗೆ ತಮ್ಮ ಒಂದು ತಿಂಗಳ ಸಂಬಳ ದೇಣಿಗೆ ಘೋಷಣೆ ಮಾಡಿದರು. ಮರುದಿನ ಪತ್ರಿಕೆಗಳ ಮುಖಪುಟ ಸುದ್ದಿಯಾಯಿತು ಎಲ್ಲರಿಗೂ ಅಚ್ಚರಿಯಾಯಿತು. ಜಿಲ್ಲಾಧಿಕಾರಿಯವರು ಸಮ್ಮೇಳನ ಯಶಸ್ವಿಗೆ ಮುಂದಾಗಿದ್ದು ಗಮನಿಸಲಾಯಿತು.

ಎಲ್ಲರೂ ಇವರು ಕನ್ನಡದ ಡಿ.ಸಿ.ಯಂದು ಖ್ಯಾತರಾದರು. ತಮ್ಮೆಲ್ಲರ ಅಧಿಕಾರ ವೃಂದವರ ಸಮಿತಿಗಳ ಜೊತೆಗೆ ಪ್ರತಿದಿನವೂ ಬಿಡುವುವಿಲ್ಲದ ಕೆಲಸ ಮಾಡಿದ ಅವರ ಶ್ರಮ ನಿಜಕ್ಕೂ ಫಲನೀಡಿತು. ಇದೊಂದು ಮಾದರಿ ಸಮ್ಮೇಳನವಾಗಲು ಸಾಧ್ಯವಾಯಿತು. ಎಲ್ಲಾ ಪೂರ್ವತಯಾರಿಯಾದ ಬಳಿಕ ಒಬ್ಬೊಬ್ಬ ಸಂಘಟಕರು ಪದಾಧಿಕಾರಿಗಳು ಸಮ್ಮೇಳನದ ಪೂರ್ವ ತಯಾರಿ ಸ್ಥಳದಲ್ಲಿ ನಿಂತು ಸೆಲ್ಫಿ ಹಾಕತೊಡಗಿದರು ಒಬ್ಬೊಬ್ಬರಾಗಿ ದೇಣಿಗೆ ನೀಡ ತೊಡಗಿದರು. ಸರಕಾರವು ಸ್ಪಂದಿಸತೊಡಗಿದರು. ಕಲಬುರಗಿಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚು ರಾಜಕೀಯವಿದೆ ಎಂಬುವುದು ಈ ಸಮ್ಮೇಳನ ತೋರಿಸಿಕೊಟ್ಟಿತು. ಇಲ್ಲಿ ಎಲ್ಲರಿಗೂ ವೇದಿಕೆ ಹಾರ ತುರಾಯಿ ಬೇಕು ಕೆಲಸ ಮಾತ್ರ ಯಾರು ಮಾಡುವುದಕ್ಕೆ ತಯಾರಿಲ್ಲ. ಅವಕಾಶ ಎಲ್ಲರಿಗೂ ಬೇಕು ಆದರೆ ತಯಾರಿ ಮಾಡುವ ಕನ್ನಡ ಸಾಹಿತ್ಯ ಉತಕೃಷ್ಠವಾಗಿ ಕಟ್ಟುವ ಮನಸ್ಸು ಹೃದಯ ಯಾರಲ್ಲಿಯೂ ಇಲ್ಲ. ಮತ್ತದೇ ಎಡಬಲ ತೀಕಲಾಟ ಮಾಡುತ್ತಾ ಒಬ್ಬರಿಗೊಬ್ಬರು ಕಾಲು ಎಳೆಯುತ್ತಾ ಸಾಹಿತ್ಯದ ಪಯಣ ಸಾಗುತ್ತದೆ.

ಒಂದು ದಿನ ಸಮ್ಮೇಳನ ಪುರ್ವತಯಾರಿ ನಡೆದಲ್ಲಿ ಭೇಟಿ ನೀಡಿದೆ ಎಲ್ಲಾ ವೃಂದದ ಅಧಿಕಾರಿಗಳು ಮೇಲೂಸ್ತುವಾರಿ ಮಾಡುತ್ತಿದ್ದರು ಅಲ್ಲಿ ಒಬ್ಬರಾದರು ಸಂಘಟಕರು ಕಾಣಿಸಲಿಲ್ಲ. ಸಮ್ಮೇಳನ ನಡೆದಾಗ ಎಲ್ಲಾ ಸಂಘಟಕರು ವೇದಿಕೆಯ ಮೇಲೆರಿ ಫೋಟು ತೆಗೆಸಿಕೊಂಡರು ಪೂರ್ವತಯಾರಿಯಲ್ಲಿ ಕೆಲಸ ಮಾಡಿದ ಶರತ್ ಸರ್ ಹಾಗೂ ಅವರ ಅಧಿಕಾರಿಗಳ ವೃಂದ ವೇದಿಕೆಯ ಮೂಲೆಯಲ್ಲಿ ಕಂಡರು.

ಮಾನ್ಯ ಜಿಲ್ಲಾಧಿಕಾರಿಗಳಾದ ಶರತ್ ಅವರ ಈ ಕಾರ್ಯವೈಖರಿ ಕಲಬುರಗಿ ಸಾಂಸ್ಕೃತಿಕ ಲೋಕಕ್ಕೆ ತಕ್ಕ ಪಾಠ ಕಲಿಸಿದೆ. ಯಾರು ನಾನೆ ಎಲ್ಲಾ ನಾನಿಲ್ಲದೇ ಏನು ಆಗುವುದಿಲ್ಲವೆಂದು ಮೆರೆಯುತ್ತದ್ದರೊ ಅಂತವರಿಗಂತು ದೊಡ್ಡ ಪಾಠವಾಗಿಸಿದ್ದಾರೆ. ತಮ್ಮ ವಯಕ್ತಿಕ ಸಿದ್ಧಾಂತ ಏನೆ ಇರಲಿ ಕನ್ನಡದ ಕೆಲಸ ಬಂದಾಗ ಎಲ್ಲಾ ವಯಿಮನಸ್ಸು ಬಿಟ್ಟು ಕೆಲಸ ಮಾಡುವುದನ್ನು ಮಾನ್ಯ ಜಿಲ್ಲಾಧಿಕಾರಿ ಶರತ್ ಮಾಡಿ ತೋರಿಸದ್ದಾರೆ.

ಸಮ್ಮೇಳನ ಪ್ರತಿಯೊಂದರಲ್ಲಿ ಅವರ ಶ್ರಮವಿದೆ ಹಾಗೂ ಅವರ ಜೊತೆಗಿರುವ ಅಧಿಕಾರಿಗಳ ಶ್ರಮವಿದೆ. ಲಕ್ಷ ಲಕ್ಷ ಜನರನ್ನು ಊಟ, ವಸತಿ,ಮಳಿಗೆ, ಸಾರಿಗೆ ಹೀಗೆ ಹತ್ತು ಹಲವು ವಿಚಾರಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿ ತಾನು ಏನು ಮಾಡಿಲ್ಲವೆನ್ನುವಂತೆ ಕುಳಿತಿರುವ ಮಾನ್ಯ ಶರತ್ ಅವರ ಕೆಲಸ ನಿಜಕ್ಕೂ ಮೆಚ್ಚುವಂತಹದ್ದು ಮತ್ತು ಮಾದರಿಯಾಗುವಂತಹದ್ದು.

ಸಮ್ಮೇಳನದಲ್ಲಿ ಏನೆಲ್ಲ ಆಯಿತು ಮೂರು ದಿನ ಯಾರು ಏನು ಮಾತನಾಡಿದರು ಹೇಗೆ ಮಾತನಾಡಿದರು ಲಾಭನಷ್ಟಗಳು ಏನಾಯಿತು ಎನ್ನುವುದನ್ನು ಮುಂದೆ ಬರೆಯುತ್ತೇನೆ ಆದರೆ ಈ ಲೇಖನದ ಮೂಲಕ ನಾನು ವಯಕ್ತಿಕವಾಗಿ ಮಾನ್ಯ ಜಿಲ್ಲಾಧಿಕಾರಿ ಶರತ್ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು ಸಲ್ಲಿಸಲು ಬಯಸುತ್ತೇನೆ. ಈ ಅಧಿಕಾರಿಗಳ ತಂಡ ಮುಂದೆ ನಡೆಯುವ ಸಮ್ಮೇಳನಕ್ಕೆ ಸ್ಪೂರ್ತಿಯಾಗುವುದರಲ್ಲಿ ಸಂದೇಹವಿಲ್ಲ ಶಬ್ಬಾಷ್ ಶರತ್ ಸರ್.

-ಕೆ.ಎಂ.ವಿಶ್ವನಾಥ ಮರತೂರ
ಯುವ ಬರಹಗಾರರು
ಮು:ಪೋ: ಮರತೂರ
ತಾ: ಚಿತ್ತಾಪೂರ ಜಿ:ಕಲಬುರಗಿ ೫೮೫೨೨೯
ಮೂ: ೯೬೮೬೭೧೪೦೪೬

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here