ಮುಗಿದ ಸಾಹಿತ್ಯ ಸಮ್ಮೇಳನ; ಮುಗಿಯದ ಚರ್ಚೆ, ಸಂವಾದ

0
211

ಕಲಬುರಗಿ: ನೃಪತುಂಗನ ನೆಲ, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಫೆ. ೫, ೬ ಮತ್ತು ೭ ರಂದು ಅತ್ಯಂತ ಯಶಸ್ವಿಯಾಗಿ ಏನೋ ನಡೆಯಿತು. ಆದರೆ ಸಮ್ಮೇಳನ, ಗೋಷ್ಠಿ, ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ವಿಷಯ ಕುರಿತು ಸಾಕಷ್ಟು ಚರ್ಚೆ, ಸಂವಾದಗಳು ಸಾಹಿತ್ಯಕ ವಲಯ ಸೇರಿದಂತೆ ಸಾರ್ವಜನಿಕ ವಲಯ ನಡೆಯುತ್ತಿದೆ.

ಮೂರು ದಶಕದ ತರುವಾಯ ಮತ್ತೆ ಕಲಬುರಗಿಯಲ್ಲಿ ಸಮ್ಮೇಳನ ನಡೆದಿರುವುದು ಸ್ವಾಗತ. ಆದರೆ ಸಮ್ಮೇಳನಾದ್ಯಕ್ಷರು ನಮ್ಮ ಕಡೆಯವರು ಯಾರೂ ಇರಲಿಲಿಲ್ವೇ ? ಎಂದು ಕೇಳಿದರು.

Contact Your\'s Advertisement; 9902492681

ಸಮ್ಮೇಳನಾಧ್ಯಕ್ಷರು ಯಾರಾದರೇನು? ಪರಿಷತ್ ಯಾರ ಅಡಿಯಾಳಾಗಿ ಕೆಲಸ ಮಾಡಿದರೇನು? ಇದ್ಯಾವುದಕ್ಕೂ ನಮಗೆ ಸಂಬಂಧವೇ ಇಲ್ಲ. ನಾವು ನಮ್ಮ ಎದೆಯೊಳಗಿನ ದನಿಯನ್ನು ಹೊರಗೆ ಹಾಕದೆ ಬಿಡುವವರಲ್ಲ. ಎಂದು ಕಲ್ಯಾಣ ಕರ್ನಾಟಕದ ಸಾಹಿತಿಗಳು, ಬರಹಗಾರರು, ಕವಿಗಳು ಪೌರತ್ವ ಕಾಯ್ದೆ ತಿದ್ದುಪಡಿ, ಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರುವ ಕೋಮುವಾದ, ಸಂವಿಧಾನಕ್ಕೆ ಅಪಚಾರ, ಮಹಿಳಾ ವಿರೋಧಿ ನೀತಿ ಇತ್ಯಾದಿ ವಿಷಯಗಳ ಕುರಿತು ತಮ್ಮ ಅಕ್ಷರ ದ ಪ್ರತಿಭಟನೆ ದಾಖಲಿಸಿದರು. ಆ ಮೂಲಕ ಕಲಬುರಗಿ ನೆಲ ಸೂಫಿ, ಶರಣ, ದಾಸರ ಸೌಹಾರ್ದ ಪರಂಪರೆಗೆ ಸಾಕ್ಷಿಯಾಗಿದೆ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟರು.

ಕೊನೆ ದಿನದ ಕಾರ್ಯಕ್ರಮಗಳು ಮಾತ್ರ ಸಮಯ ಮೀರಿದ್ದು ಬಿಟ್ಟರೆ ಉದ್ಘಾಟನೆ ಸೇರಿದಂತೆ ಎಲ್ಲ ಗೋಷ್ಠಿಗಳು ಬಹುತೇಕ ಸಮಯಕ್ಕೆ ಸರಿಯಾಗಿ ನಡೆದವು. ಸಮಾನಾಂತರ ವೇದಿಕೆಗಳಲ್ಲಿ ಡಾ. ಅಂಬೇಡ್ಕರ್ ಸಭಾಂಗಣ ಸ್ವಲ್ಪ ದೂರ ಅನಿಸಿತು. ಹೀಗಾಗಿ ಅಲ್ಲಿ ನಡೆದ ಕವಿಗೋಷ್ಠಿ ಬಿಟ್ಟರೆ ಉಳಿದ ಗೋಷ್ಠಿಗಳಿಗೆ ಜನರೇ ಇರಲಿಲಲ್ಲ. ಖರೆ ನೋಡಿದರೆ ಅಲ್ಲಿ ಪಾಲ್ಗೊಂಡ ವಿದ್ವಾಂಸರೇ ಯಾವುದೇ ಮುಚ್ಚುಮರೆ ಇಲ್ಲದೆ ಬಹಳ ಚೆನ್ನಾಗಿ ಮಾತನಾಡಿದರು.

ಪ್ರಧಾನ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರು ಓದಿದ ಭಾಷಣ ಸಪ್ಪೆಯೆನಿಸಿತು. ಪರಿಷತ್ ಅಧ್ಯಕ್ಷ ಡಾ.‌ಮನು ಬಳಿಗಾರ ಅವರ ಆಶಯ ನುಡಿ ಸಮ್ಮೇಳನಕ್ಕೆ ದಿಕ್ಸೂಚಿ ನೀಡುವಂತಿತ್ತು. ಕಲ್ಯಾಣ ಕರ್ನಾಟಕ ಅಂದು-ಇಂದು ಮುಂದು ಗೋಷ್ಠಿಯಲ್ಲಿ ಕೆ. ನೀಲಾ ಗುಡಗಿರುವುದು, ದಲಿತ- ಬಂಡಾಯ ಗೋಷ್ಠಿ ಮತ್ತು ಕವಿಗೋಷ್ಠಿಯಲ್ಲಿ
ಯಲ್ಲಿ ಸ್ವಲ್ಪ ಜೋರಾಗಿ ಮಾತನಾಡಿರುವುದು ಬಿಟ್ಟರೆ ಬೇರೆಲ್ಲ ಗೋಷ್ಠಿಗಳು ಅಷ್ಟೊಂದು ಆಸಕ್ತಿ ಮೂಡಿಸಲಿಲ್ಲ. ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದ ಬೇಗ ಮುಗಿದು ಹೋಯಿತು.

ಭಲೆ! ಭೇಷ್ ಡಿಸಿ : ಜಿಲ್ಲಾಧಿಕಾರಿ ಶರತ್ ಬಿ. ಅವರು ಆರಂಭದಿಂದಲೂ ಸಮ್ಮೇಳನ ದ ಯಶಸ್ವಿಗೆ ಹಗಲಿರುಳು ದುಡಿದಿದ್ದಾರೆ. ಜಿಲ್ಲಾಧ್ಯಕ್ಷ ಸಿಂಪಿ ಮತ್ತವರ ತಂಡ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಸಮ್ಮೇಳನದ ಯಸಸ್ವಿಗೆ ಕಾರಣರಾದರು.

ತುಂಬಿ ತುಳುಕಾಡಿದ ಸಮ್ಮೇಳನ ನಡೆದ ಬಹಳಷ್ಟು ಕಡೆ ಪ್ರೇಕ್ಷಕರದ್ದೇ ಕೊರತೆ ಎದ್ದು ಕಾಣುತ್ತದೆ ಆದರೆ ಇಲ್ಲಿ ಮಾತ್ರ ಜನ ತುಂಬಿ ತುಳುಕಾಡುವಂತಿತ್ತು. ಲೇಖಕರ ಕಟ್ಟೆ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ ಎಲ್ಲವೂ ಜನರಿಂದ ಗಿಜಿಗುಡುತ್ತಿದ್ದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here