ಲಿಂಗಾಯತ ಮಹಾಮಠದಲ್ಲಿ ಘರ್ಜಿಸಿದ ತೃಪ್ತಿ ದೇಸಾಯಿ

0
210

ಬೀದರ್: ವರ್ಷಕ್ಕೆ ಒಬ್ಬರಿಗೆ ೭೦೦ ಕೆ.ಜಿ. ಆಕ್ಸಿಜನ್ ಅಗತ್ಯವಿದೆ. ಒಂದು ಗಿಡ ೧೦೩ ಕೆ.ಜಿ. ಆಕ್ಸಿಜನ್ ಒದಗಿಸುತ್ತದೆ. ಒಬ್ಬರಿಗೆ ಏಳು ಗಿಡಗಳು ಬೇಕಾಗುತ್ತದೆ. ಇದನ್ನು ಗೊತ್ತುಮಾಡಿಕೊಂಡು ಹಸಿರು ಭಾನುವಾರ ಶುರು ಮಾಡಿದ್ದೇವೆ ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ ಅಭಿಪ್ರಾಯಪಟ್ಟರು.

ನಗರದ ಬಸವ ಗಿರಿಯ ಲಿಂಗಾಯತ ಮಹಾಮಠದಲ್ಲಿ ವಚನ ವಿಜಯೋತ್ಸವ-೧೭ ರ ಅಂಗವಾಗಿ ಇಂದು ನಡೆದ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ಪರಿಸರ ವಿಷಯ ಕುರಿತು ಮಾತನಾಡಿದ ಅವರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.

Contact Your\'s Advertisement; 9902492681

ಒಂದುವರೆ ಲಕ್ಷ ಜನರಿಗೆ ಉದ್ಯೋಗ ಕೊಡಲು ಸಾಧ್ಯವಾಗಿದೆ. ಎಲ್ ಪಿಜಿ ಬಳಸದೆ, ಬ್ರಿಕೆಟ್ಸ್ ಇಂಧನವನ್ನು ನಮ್ಮ ಅಡುಗೆಮನೆಯಲ್ಲಿ ಬಳಸುತ್ತೇವೆ. ದೇಶದಲ್ಲಿಯೇ ನಮ್ಮದು ಹಸಿರು ಅಡುಗೆ ಮನೆ ಎಂದು ಹೆಸರುವಾಸಿಯಾಗಿದೆ ಎಂದು ವಿವರಿಸಿದರು.

ಪುಣೆಯ ಭೂ ಮಾತಾ ಬ್ರಿಗೇಡ್ ನ ತೃಪ್ತಿ ದೇಸಾಯಿ ಅವರು “ಮಹಿಳೆ ಮತ್ತು ಸಮಾನತೆ” ಮಾತನಾಡಿ, ಮನದಲ್ಲಿಯೇ ಮಂದಿರವಿರುವಾಗ, ಮಂದಿರಕ್ಕೆ ಯಾಕೆ ಹೋಗಬೇಕು. ಆದರೆ ಮಹಿಳೆಯನ್ನು ಮಂದಿರದಲ್ಲಿ ಬಿಡುವುದಿಲ್ಲ ಎಂದು ಹೇಳಿದರೆ ಲಿಂಗ ಬೇಧ ಮಾಡಿದಂತಲ್ಚೆ? ಇದನ್ನು ವಿರೋಧಿಸಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮಹಿಳೆಯರು ಅಂಧಕಾರ, ಮೂಢನಂಬಿಕೆಯಿಂದ ಹೊರ ಬರಬೇಕು. ದೇವಸ್ಥಾನಗಳಲ್ಲಿ ಪ್ರವೇಶದ ಜೊತೆಗೆ ದೇವಸ್ಥಾನದ ಪೂಜಾರಿಗಳು ಕೂಡ ಶೇ. ೫೦ ರಷ್ಟು ಕೊಡಬೇಕು ಎಂದು ಆಗ್ರಹಿಸಿದರು. ನಮ್ಮ ಆಂದೋಲನದ ಮೂಲಕ ಇದೀಗ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಬ್ರೂಣಹತ್ಯೆ, ಅತ್ಯಾಚಾರದಂತಹ ಅಸಹನೀಯ ಕೃತ್ಯಗಳು ಜರುಗುತ್ತಿವೆ ಎಂದರು.

ಮೂಢನಂಬಿಕೆ ಮತ್ತು ಮಹಿಳೆ ಎಂಬ ವಿಷಯ ಕುರಿತು ಇಂದುಮತಿ ಸಾಲಿಮಠ ಮಾತನಾಡಿದರು. ಅಕ್ಕ ಅನ್ನಪೂರ್ಣ ತಾಯಿ, ಡಾ. ಗಂಗಾಂಬಿಕಾ ಅಕ್ಕ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ಸೊಲ್ಲಾಪುರದ ಸಿಂಧುತಾಯಿ ಕಾಡಾದಿ, ಕಲಬುರಗಿಯ ಕಮಲಮ್ಮ ಪಾಟೀಲ, ಸಾಕ್ಷಿ ಸತ್ಯಂಪೇಟೆ, ಶಕುಂತಲಾ ಪಾಟೀಲ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here